Home Blog Page 699

ಬಾಲಿವುಡ್ ಡ್ರಗ್ಸ್ ಕೇಸ್: ಹಾಸ್ಯನಟಿ ಭಾರ್ತಿ ಸಿಂಗ್ ದಂಪತಿಗೆ 14 ದಿನ ನ್ಯಾಯಾಂಗ ಬಂಧನ

0

ಮುಂಬೈ: ಮಾದಕ ವಸ್ತು ಸಂಗ್ರಹಣೆ ಮತ್ತು ಸೇವನೆ ಆರೋಪದ ಮೇಲೆ ಬಂಧಿತರಾಗಿರುವ ಹಾಸ್ಯನಟಿ ಭಾರ್ತಿ ಸಿಂಗ್ ಹಾಗೂ ಪತಿ ಹರ್ಷ್ ಲಿಂಬಾಚಿಯಾ ಅವರಿಗೆ ಡಿಸೆಂಬರ್ 4 ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಮುಂಬೈನ ನ್ಯಾಯಾಲಯ ಆದೇಶಿಸಿದೆ.

ಈ ದಂಪತಿಗಳನ್ನು ನಾರ್ಕೊಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಬಂಧಿಸಿದೆ. ಭಾರ್ತಿ ಸಿಂಗ್ ಅವರನ್ನು ಶನಿವಾರ ಬಂಧಿಸಲಾಗಿದ್ದು 12 ಗಂಟೆಗಳ ಕಾಲ ವಿಚಾರಣೆ ನಡೆಸಿದ ನಂತರ ಪತಿ ಹರ್ಷ್  ಅವರನ್ನೂ ಬಂಧಿಸಲಾಗಿದೆ.

ಶನಿವಾರ ಅವರ ನಿವಾಸದ ಮೇಲೆ ದಾಳಿ ನಡೆಸಿದ ಸಮಯದಲ್ಲಿ ಗಾಂಜಾ ಇರುವುದು ಪತ್ತೆಯಾಗಿತ್ತು.ಭಾರ್ತಿ ಸಿಂಗ್ ಹಾಗೂ ಅವರ ಪತಿ ತಾವು ಗಾಂಜಾ ಸೇವನೆ ಮಾಡುವುದಾಗಿ ಒಪ್ಪಿಕೊಂಡಿದ್ದಾರೆಂದು ವರದಿಯಾಗಿದೆ.

ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸಸ್ (ಎನ್‌ಡಿಪಿಎಸ್) ಕಾಯ್ದೆಯಡಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಮಗು ಪಡೆಯುವ ಆತುರವಿಲ್ಲ-ನನ್ನ ಅಂಡಾಣುಗಳನ್ನು ಸಂರಕ್ಷಿಸಿಟ್ಟಿದ್ದೇನೆ, : ನಟಿ ಮೋನಾ ಸಿಂಗ್

0

ಮುಂಬೈ: ನನ್ನ ಅಂಡಾಣುವನ್ನು ನಾನು ರಕ್ಷಿಸಿಟ್ಟಿದ್ದು, ನನಗೆ ಯಾವಾಗ ಮಗು ಬೇಕು ಎನಿಸುತ್ತದೆಯೋ ಆಗ  ಮಗು ಮಾಡ್ಕೋತಿನಿ ಎಂದು ಬಾಲಿವುಡ್ ನಟಿ ಮೋನಾ ಸಿಂಗ್ ಹೇಳಿದ್ದಾರೆ.

ನಟಿ ಮೋನಾ ಸಿಂಗ್ ಕಳೆದ ವರ್ಷ ಫಿಲ್ಮ್‌ಮೇಕರ್ ಶ್ಯಾಮ್ ರಾಜಗೋಪಾಲನ್ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ತಮ್ಮ ಮಗುವಿನ ವಿಚಾರದ ಹೇಳಿಕೆ ನೀಡಿ ಸುದ್ದಿಯಾಗಿದ್ದಾರೆ. ಖಾಸಗಿ ಮಾಧ್ಯಮದೊಂದಿಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ನಟಿ ಮೋನಾ  ಸಿಂಗ್, ‘ಮಗು ಮಾಡಿಕೊಳ್ಳಲು ಕಾತುರ, ಗಡಿಬಿಡಿ ಇಲ್ಲ. ಈಗಾಗಲೇ ನನ್ನ ಅಂಡಾಣುವಿನ ಸಂರಕ್ಷಣೆ ಮಾಡಿಟ್ಟುಕೊಂಡಿದ್ದೇನೆ. ’34 ವರ್ಷವಿದ್ದಾಗಲೇ ನಾನು ಅಂಡಾಣು ಸಂಗ್ರಹಣೆ ಮಾಡಿಕೊಂಡಿದ್ದೇನೆ.

ನಾನೀಗ ಫ್ರೀ. ನನಗೆ ಈಗ ಮದುವೆಯಾಗಿದೆ. ನನ್ನ ಸಂಗಾತಿ ಜೊತೆಗೆ ವಿಶ್ವ  ತಿರುಗಾಡುವುದು, ಎಂಜಾಯ್ ಮಾಡೋದು ನನ್ನ ಗುರಿ. ಅದಿನ್ನೂ ಪೂರ್ತಿ ಆಗಿಲ್ಲ. ನನ್ನ ಸ್ನೇಹಿತರು, ಕುಟುಂಬದವರ ಜೊತೆ ಸಾಕಷ್ಟು ಬಾರಿ ತಿರುಗಾಡಿದ್ದೇನೆ. ಈಗ ನನ್ನ ಗಂಡನ ಜೊತೆ ತಿರುಗಾಡಬೇಕಿದೆ. ನನಗೆ ಮಕ್ಕಳು ಅಂದರೆ ತುಂಬ ಇಷ್ಟ. ಆದರೆ ಈಗ ನನ್ನನ್ನು ಕೇಳಿದರೆ ಮಗು  ಮಾಡಿಕೊಳ್ಳಲು ನಾನು ಮಾನಸಿಕವಾಗಿ ಸಿದ್ಧಳಾಗಿಲ್ಲ. ಮುಂದಿನ ದಿನಗಳಲ್ಲಿ ನಾನು ಇದರ ಬಗ್ಗೆ ಯೋಚನೆ ಮಾಡುತ್ತೇನೆ’ ಎಂದು  ಹೇಳಿದ್ದಾರೆ.

ಇನ್ನು ಅಂಡಾಣು ಸಂರಕ್ಷಣೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಅವರು, ‘ಅಂಡಾಣು ಸಂರಕ್ಷಣೆ ಮಾಡಿಕೊಳ್ಳುತ್ತೇನೆ ಎಂದಾಗ ನನ್ನ ತಾಯಿ ತುಂಬ ಖುಷಿಪಟ್ಟರು. ಪುಣೆಯಲ್ಲಿನ ವೈದ್ಯರ ಬಳಿ ನಾನು ಹಾಗೂ ಅಮ್ಮ ಇಬ್ಬರೂ ಹೋದೆವು. ಇದನ್ನು ಮಾಡಲು ನಾನು ಕೆಲ ತಿಂಗಳುಗಳ  ಕಾಲ ಕೆಲಸದಿಂದ ದೂರವಿರಬೇಕಿತ್ತು. ಅಂಡಾಣು ಸಂರಕ್ಷಣೆ ಮಾಡಲು 5 ತಿಂಗಳು ಹಿಡಿಯಿತು ಎಂದು ಹೇಳಿದ್ದಾರೆ.

ಭಾರತದಲ್ಲಿ ವಾಕ್ ಸ್ವಾತಂತ್ರ್ಯ ಅಪಾಯದಲ್ಲಿದೆ: ಎಡಿಟರ್ಸ್ ಗಿಲ್ಡ್

0

ಮೇಘಾಲಯ: ಶಿಲ್ಲಾಂಗ್ ಟೈಮ್ಸ್ ನ ಸಂಪಾದಕರಾದ ಪೆಟ್ರೀಷಿಯಾ ಮುಖಿಮ್ ಅವರ ವಿರುದ್ಧ ಕ್ರಿಮಿನಲ್ ನಡಾವಳಿಗಳನ್ನು ರದ್ದು ಮಾಡುವುದಕ್ಕೆ ಅನುಮತಿ ನೀಡದ ಮೇಘಾಲಯ ಹೈಕೋರ್ಟ್ ನ ನಡೆಯ ಬಗ್ಗೆ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಆತಂಕ ವ್ಯಕ್ತಪಡಿಸಿದೆ.

ಮುಖಿಮ್ ಅವರು ತಮಗೆ ಆದ ಅನ್ಯಾಯದ ಬಗ್ಗೆ ಸೂಕ್ತ ಸಮಯದಲ್ಲಿ ಎಡಿಟರ್ಸ್ ಗಿಲ್ಡ್ ಹೇಳಿಕೆಯನ್ನೂ ಬಿಡುಗಡೆ ಮಾಡಿಲ್ಲ. ಕೇವಲ ಖ್ಯಾತ ಪತ್ರಕರ್ತರಿಗೆ ಮಾತ್ರ ಎಡಿಟರ್ಸ್ ಗಿಲ್ಡ್ ಹೇಳಿಕೆ ಬಿಡುಗಡೆ ಮಾಡುತ್ತದೆ ಎಂದು ಆಕ್ಷೇಪಿಸಿ ಎಡಿಟರ್ಸ್ ಗಿಲ್ಡ್ ಗೆ ರಾಜೀನಾಮೆ ನೀಡಿದ್ದರು.

ಈ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಎಡಿಟರ್ಸ್ ಗಿಲ್ಡ್ ಭಾರತದಲ್ಲಿ ವಾಕ್ ಸ್ವಾತಂತ್ರ್ಯ ಅಪಾಯದಲ್ಲಿದೆ, ಹಲವಾರು ಕಾನೂನುಗಳ ಮೂಲಕ ಪತ್ರಿಕಾ ಸ್ವಾತಂತ್ರ್ಯವನ್ನು ಹರಣ ಮಾಡುತ್ತಿರುವುದಕ್ಕೆ ಮುಖಿಮ್ ಅವರ ಪ್ರಕರಣವೇ ಉದಾಹರಣೆಯಾಗಿದೆ ಎಂದು ಹೇಳಿದೆ. ಅಷ್ಟೇ ಅಲ್ಲದೇ ಉನ್ನತ ಮಟ್ಟದ ನ್ಯಾಯಪೀಠ ವಾಕ್ ಸ್ವಾತಂತ್ರ್ಯ ಹರಣವಾಗುತ್ತಿರುವುದನ್ನು ಗಮನಿಸಬೇಕು ಹಾಗೂ ಮಾಧ್ಯಮಗಳು ಸರಾಗವಾಗಿ ಕಾರ್ಯನಿರ್ವಹಿಸುವುದಕ್ಕೆ ಸಾಧ್ಯವಾಗುವಂತೆ ಮಾಡಬೇಕು ಎಂದು ಎಡಿಟರ್ಸ್ ಗಿಲ್ಡ್ ಮನವಿ ಮಾಡಿದೆ.

ಸರ್ಕಾರವನ್ನು ಪ್ರಶ್ನಿಸುವುದು ಮಾಧ್ಯಮಗಳ ಜವಾಬ್ದಾರಿ ಎಂದು ಎಡಿಟರ್ಸ್ ಗಿಲ್ಡ್ ಹೇಳಿದೆ. ಮೇಘಾಲಾಯದಲ್ಲಿ ಬುಡಕಟ್ಟು ಹೊರತಾದವರ ಮೇಲಿನ ದಾಳಿ ಮುಂದುವರೆದಿದ್ದು, ಇವುಗಳನ್ನು ಶಿಕ್ಷಿಸದೇ ಬಿಡಲಾಗಿದೆ, ಇದು ಸರ್ಕಾರದ ವೈಫಲ್ಯ ಎಂದು ಪೋಸ್ಟ್ ಹಾಕಿದ್ದರು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಕ್ರಿಮಿನಲ್ ನಡವಾಳಿಗೆ ಕ್ರಮ ಜರುಗಿಸಲಾಗಿತ್ತು.

ಆಯುರ್ವೇದ ವೈದ್ಯರೂ ಕಾನೂನಾತ್ಮಕವಾಗಿ ಶಸ್ತ್ರಚಿಕಿತ್ಸೆ ಮಾಡಲು ಅವಕಾಶ: ಕೇಂದ್ರ ಸರ್ಕಾರ

0

ನವದೆಹಲಿ: ವೈದ್ಯಕೀಯ ಸಮೂಹಕ್ಕೆ ಶಾಕ್ ನೀಡಿರುವ ಕೇಂದ್ರ ಸರ್ಕಾರ ಆಯುರ್ವೇದ ವೈದ್ಯರಿಗೆ ತರಬೇತಿ ನೀಡಿ, ಅವರು ಶಸ್ತ್ರಚಿಕಿತ್ಸೆ ಮಾಡಲು ಕಾನೂನಾತ್ಮಕವಾಗಿ ಅವಕಾಶ ಮಾಡಿಕೊಡುವ ಅಧಿಸೂಚನೆ ಹೊರಡಿಸಿದೆ.

ಭಾರತೀಯ ವೈದ್ಯಕೀಯ ಪರಿಷತ್ ಕೇಂದ್ರದ ಅಧ್ಯಕ್ಷರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು ಆಯುರ್ವೇದ ಚಿಕಿತ್ಸಾಲಯ ಆಸ್ಪತ್ರೆಗಳಲ್ಲಿ ಶಸ್ತ್ರಚಿಕಿತ್ಸೆ, ಇಎನ್ ಟಿ, ಮೂಳೆ, ಹಲ್ಲುಗಳಿಗೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ಕನಿಷ್ಟ 25  ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದು, ಈಗ ಇದನ್ನು ಕಾನೂನುಬದ್ಧವೆಂದು ತಿಳಿಸುವುದಕ್ಕಾಗಿ ಅಧಿಸೂಚನೆ ಹೊರಡಿಸಲಾಗಿದೆ ಎಂದು ಹೇಳಿದ್ದಾರೆ.

ಆಯುರ್ವೇದದಲ್ಲಿ ಶಲ್ಯ ತಂತ್ರ (ಸಾಮಾನ್ಯ ಶಸ್ತ್ರ ಚಿಕಿತ್ಸೆ), ಶಲಾಕ್ಯ ತಂತ್ರ ( ಕಣ್ಣು, ತಲೆ, ಮೂಗು, ಕಿವಿ, ಗಂಟಲು ಶಸ್ತ್ರಚಿಕಿತ್ಸೆ)ಯಲ್ಲಿ ಸ್ನಾತಕೋತ್ತರ ಪದವಿ ಪಡೆಯುವವರಿಗೆ ಇನ್ನು ಮುಂದಿನ ದಿನಗಳಲ್ಲಿ ಸ್ವತಂತ್ರವಾಗಿ ಶಸ್ತ್ರಚಿಕಿತ್ಸೆ ನಡೆಸುವುದಕ್ಕೆ ಸಾಧ್ಯವಾಗುವಂತೆ ಪ್ರಾಯೋಗಿಕವಾಗಿ ತರಬೇತಿ ನೀಡಲಾಗುತ್ತದೆ.

ಕೊರೋನಾ ಸಾಂಕ್ರಾಮಿಕದ ಸವಾಲಿನ ನಡುವೆಯೇ ಕುಂಭ ಮೇಳ ಆಯೋಜನೆ: ಉತ್ತರಾಖಂಡ ಸಿಎಂ

0

ಡೆಹರಾಡೂನ್: ಕೋವಿಡ್‌-19 ಸಾಂಕ್ರಾಮಿಕದ ಸವಾಲಿನ ನಡುವೆಯೇ 2021ರಲ್ಲಿ ಹರಿದ್ವಾರದಲ್ಲಿ ಕುಂಭಮೇಳ ನಡೆಯಲಿದೆ ಎಂದು ಉತ್ತರಾಖಂಡದ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್‌ ರಾವತ್‌ ಹೇಳಿದ್ದಾರೆ.

2021ರ ಜನವರಿ 14ರಿಂದ ಕುಂಭಮೇಳ ಆರಂಭವಾಗಲಿದ್ದು, ಅದರ ಸಿದ್ಧತೆಗೆ ಸಂಬಂಧಿಸಿದಂತೆ ಅಖಿಲ ಭಾರತೀಯ ಅಖಾಡಾ ಪರಿಷತ್ (ಎಬಿಎಪಿ) ಪದಾಧಿಕಾರಿಗಳೊಂದಿಗೆ ಮುಖ್ಯಮಂತ್ರಿ ರಾವತ್‌ ಅವರು ಭಾನುವಾರ ಸಭೆ ನಡೆಸಿದರು. ಸಭೆಯ ಬಳಿಕ ಮಾತನಾಡಿದ ಅವರು, ಕೋವಿಡ್‌-19  ಸಾಂಕ್ರಾಮಿಕದ ಸವಾಲಿನ ನಡುವೆಯೇ 2021ರಲ್ಲಿ ಹರಿದ್ವಾರದಲ್ಲಿ ಕುಂಭಮೇಳ ನಡೆಯಲಿದೆ ಎಂದು ಹೇಳಿದರು.

‘ಸರ್ಕಾರದ ಇಲಾಖೆಗಳ ಕಾರ್ಯದರ್ಶಿಗಳು ಕುಂಭಮೇಳದ ಸಿದ್ಧತೆಯ ಕಾರ್ಯಗಳ ಪರಿಶೀಲನೆ ನಡೆಸಲು ಸೂಚನೆ ನೀಡಲಾಗಿದೆ. ಮುಖ್ಯ ಕಾರ್ಯದರ್ಶಿ ಸಹ 15 ದಿನಗಳಲ್ಲಿ ಪರಿಸ್ಥಿತಿಯ ಪರಿಶೀಲನೆ ಕೈಗೊಳ್ಳಲಿದ್ದಾರೆ. ಕೋವಿಡ್‌-19 ಪರಿಸ್ಥಿತಿಯನ್ನು ಆಧರಿಸಿ ಕುಂಭಮೇಳದ ವಿಸ್ತಾರ ನಿರ್ಧರಿಸಲಾಗುತ್ತದೆ. ಇದೇ  ವೇಳೆ ಎಬಿಎಪಿ ಹಾಗೂ ಧಾರ್ಮಿಕ ಸಂಘಟನೆಗಳ ಸಲಹೆಗಳನ್ನು ಪರಿಗಣಿಸಲಾಗುತ್ತದೆ, ಜನರಿಗೆ ಯಾವುದೇ ತೊಡಕಾಗದಂತೆ ಗಮನಿಸಲಾಗುತ್ತದೆ. ಸುರಕ್ಷಿತ ಕುಂಭಮೇಳೆ ನಡೆಸಲಾಗುತ್ತದೆ’ ಎಂದು ಸಿಎಂ ರಾವತ್‌ ಹೇಳಿದ್ದಾರೆ.

ಇನ್ನು ಈ ಬಾರಿಯ ಕುಂಭಮೇಳದಲ್ಲಿ ನಿತ್ಯ 35ರಿಂದ 50 ಲಕ್ಷ ಜನರು ಗಂಗಾ ನದಿಯಲ್ಲಿ ಪವಿತ್ರಸ್ನಾನ ಮಾಡುವ ನಿರೀಕ್ಷೆ ಇದ್ದು, ಕುಂಭಮೇಳಕ್ಕಾಗಿಯೇ ನಿರ್ಮಿಸಲಾಗುತ್ತಿರುವ ಒಂಬತ್ತು ಹೊಸ ಘಾಟ್‌ಗಳು (ನದಿ ತೀರಗಳು), ಎಂಟು ಸೇತುವೆಗಳು ಹಾಗೂ ರಸ್ತೆಗಳ ನಿರ್ಮಾಣ ಪೂರ್ಣಗೊಳ್ಳುವ ಹಂತದಲ್ಲಿದೆ.  ಸ್ವಚ್ಛತೆಗೆ ವಿಶೇಷ ಕಾಳಜಿ ವಹಿಸಲಾಗುತ್ತಿದೆ. ಕುಡಿಯುವ ನೀರಿನ ಸೌಲಭ್ಯ, ವಾಹನ ನಿಲುಗಡೆ ಹಾಗೂ ಅತಿಕ್ರಮ ಪ್ರವೇಶವನ್ನು ತಡೆಯುವ ಕಾರ್ಯಗಳು ನಡೆದಿವೆ. ಬಹುತೇಕ ಕಾಮಗಾರಿಗಳು ಡಿಸೆಂಬರ್‌ 15ಕ್ಕೆ ಪೂರ್ಣಗೊಳ್ಳಲಿವೆ’ ಎಂದು ಕುಂಭಮೇಳದ ಅಧಿಕಾರಿ ದೀಪಕ್‌ ರಾವತ್‌ ಹೇಳಿದ್ದಾರೆ.

ಬೆಂಗಳೂರು: ಮಾಜಿ ಶಾಸಕ ರೋಷನ್ ಬೇಗ್ ನಿವಾಸದ ಮೇಲೆ ಸಿಬಿಐ ದಾಳಿ

0

ಬೆಂಗಳೂರು: ಐಎಂಎ ಬಹುಕೋಟಿ ವಂಚನೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ತನಿಖೆ ಚುರುಕುಗೊಳಿಸಿದ್ದು , ರೋಷನ್ ಬೇಗ್ ಬಂಧನ ನಂತರ ಇದೀಗ ಬೆಳ್ಳಂಬೆಳಗ್ಗೆ ರೋಷನ್ ಬೇಗ್ ನಿವಾಸದ ಮೇಲೆ ಸಿಬಿಐ ದಾಳಿ ಮಾಡಿದೆ.

ರೋಷನ್ ಬೇಗ್ ಬಂಧನದ ಬೆನ್ನಲ್ಲೇ ಸಿಬಿಐ 7 ಅಧಿಕಾರಿಗಳ ತಂಡ ಕೋಲ್ಸ್ ಪಾರ್ಕ್ ನಲ್ಲಿರುವ ರೋಷನ್ ಬೇಗ್ ನಿವಾಸದ ಮೇಲೆ ದಾಳಿ ಮಾಡಿ ಮಹತ್ವದ ದಾಖಲಾತಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.

ಐಎಂಎ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಆರೋಪಿ ಮನ್ಸೂರ್ ಖಾನ್ನಿಂದ ಸುಮಾರು 200 ಕೋಟಿ ರೂ. ಗೂ ಹೆಚ್ಚು ಹಣ ರೋಷನ್ ಬೇಗ್ ಪಡೆದಿದ್ದಾರೆ ಎಂಬ ಗುರುತರ ಆರೋಪ ಎದುರಿಸುತ್ತಿದ್ದಾರೆ. ಇದರ ಜೊತೆಗೆ ಐಷಾರಾಮಿ ಕಾರುಗಳೂ ಸೇರಿದಂತೆ ಇನ್ನಿತರ ದುಬಾರಿ ಬೆಲೆಯ ಉಡುಗೊರೆಗಳನ್ನೂ ರೋಷನ್ ಬೇಗ್ ಪಡೆದಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದಾರೆ.

ವಾರ್ಡ್-22: ಅಭಿವೃದ್ಧಿಯನ್ನೇ ಗುರಿಯಾಗಿಸಿಕೊಂಡ ಪಾಲಿಕೆ ಸದಸ್ಯೆ ನಮ್ರತಾ ರಮೇಶ್

0

* ಬಹುತೇಕ ರಸ್ತೆಗಳಿಗೆ ಕಾಂಕ್ರೀಟ್, ಡಾಂಬರೀಕರಣ.
* ಒಳಚರಂಡಿ, ಮಳೆ ನೀರು ಚರಂಡಿ, ಡೆಕ್‍ಗಳ ನಿರ್ಮಾಣ.
* ಪಡುವಾರಹಳ್ಳಿ ಬಡಾವಣೆಯಲ್ಲಿ ಸ್ವಚ್ಛತೆಗೆ ನಾಂದಿ.
* ಸುಂದರ ಉದ್ಯಾನವನಗಳ ನಿರ್ವಹಣೆ.
* 3 ಕೋಟಿ ರೂ.ವೆಚ್ಚದ ಕಾಮಗಾರಿಗಳು ಆಗಿವೆ.

ಮೈಸೂರು,ನ.22 – ನಗರದ ಚಾಮರಾಜ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ ಮೈಸೂರು ನಗರ ಪಾಲಿಕೆಯ ವಾರ್ಡ್-22ರ ಪಾಲಿಕೆ ಸದಸ್ಯರಾದ ನಮ್ರತಾ ರಮೇಶ್ ಅವರು ತಮ್ಮ ವಾರ್ಡ್‍ನ ಜನತೆಯ ಮೂಲಭೂತ ಸೌಕರ್ಯಗಳಿಗೆ ಹೆಚ್ಚು ಆಧ್ಯತೆ ನೀಡಿದ್ದಾರೆ ಎನ್ನುವುದಕ್ಕೆ ಒಂಟಿಕೊಪ್ಪಲ್ ಹಾಗೂ ಪಡುವಾರಳ್ಳಿ ಸಾಕ್ಷಿಯಾಗಿ ಕಣ್ಣ ಮುಂದಿದೆ.

3 ಕೋಟಿ ವೆಚ್ಚದಲ್ಲಿ ವಾರ್ಡ್ ಅಭಿವೃದ್ಧಿ
ಕಳೆದ ಎರಡು ವರ್ಷಗಳಲ್ಲಿ ಬಡಾವಣೆಯ ವಿವಿಧ ರಸ್ತೆಗಳ ಡಾಂಬರೀಕರಣ, ಕಾಂಕ್ರೀಟ್ ಹಾಕಿ ನವೀಕರಣ ಮತ್ತು ಒಳಚರಂಡಿ ನಿರ್ಮಾಣ ಮಾಡುವ ಮೂಲಕ ಅಭಿವೃದ್ಧಿಯನ್ನು ಮಾಡಿದ್ದೇವೆ. ನಾಯಕರ ಬೀದಿ, ಎಸ್ಸಿ, ಎಸ್ಟಿ ಕಾಲೋನಿ ರಸ್ತೆಗಳ ನೂತನ ನಿರ್ಮಾಣ. ಪಡುವಾರಹಳ್ಳಿ ಹಾಗೂ ಒಂಟಿಕೊಪ್ಪಲ್‍ನಲ್ಲಿ 3 ಕಾಂಕ್ರೀಟ್ ರಸ್ಯೆಗಳ ನವೀಕರಣ.


ಹಲವಾರು ಯುಜಿಡಿ ಕೆಲಸಗಳಾಗಿವೆ .ಅವುಗಳಲ್ಲಿ ದೊಡ್ಡ ರಾಮಮಂದಿರದ ಬಳಿ, ಮಾರಿಗುಡಿ ಮುಂಭಾಗ, ಹುಣಸೂರು ರಸ್ತೆ ಪೈಪ್‍ಲೈನ್ ಇವೆಲ್ಲವನ್ನು ನವೀಕರಣ ಮಾಡಿ ಹೊಸ ಪೈಪ್‍ಗಳನ್ನು ಹಾಕಲಾಗಿದೆ. ಕೋವಿಡ್ ಸಂದರ್ಭದಲ್ಲಿ ಬಡಾವಣೆಯ ಜನರಿಗೆ ಸ್ಪಂದಿಸುವ ಮೂಲಕ ಅವರ ಕಷ್ಟದಲ್ಲಿ ಜೊತೆಯಲ್ಲಿದ್ದೆವು.
ನಮ್ರತಾ ರಮೇಶ್, ಪಾಲಿಕೆ ಸದಸ್ಯೆ, ವಾರ್ಡ್-22

ಅದೊಂದು ಕಾಲ ಇತ್ತು, ಮೈಸೂರು ನಗರದಲ್ಲೇ ಗ್ರಾಮೀಣ ವಾತಾವರಣ ಇರುವ ಬಡಾವಣೆ ಎಂದರೆ ಅದು ಪಡುವಾರಹಳ್ಳಿ ಎಂದು ಯಾರು ಬೇಕಾದರೂ ಹೇಳುತ್ತಿದ್ದರು. ಪ್ರಸ್ತುತ ಈ ಬಡಾವಣೆಯನ್ನು ನೋಡಿದರೆ `ಪಡುವಾರಹಳ್ಳಿ ಅದೆಷ್ಟು ಬದಲಾಗಿದೆ. ನಂಬಲು ಸಾಧ್ಯವಿಲ್ಲ’ ಎನಿಸದೇ ಇರಲಾರದು.
ಒಳಚರಂಡಿ ವ್ಯವಸ್ಥೆಯಿಂದಾಗಿ ಸ್ವಚ್ಛತೆ, ಜೊತೆಗೆ ಡಾಂಬರೀಕರಣಗೊಂಡ ರಸ್ತೆಗಳು, ಕಾಂಕ್ರೀಟ್ ರಸ್ತೆಗಳಾಗಿ ಪರಿವರ್ತನೆಗೊಂಡಿರುವ ಗಲ್ಲಿಗಳು, ಸುಂದರ ಉದ್ಯಾನವನಗಳು ಪಡುವಾರಹಳ್ಳಿಗೆ ಮೆರುಗನ್ನು ತಂದುಕೊಟ್ಟಿದೆ. ಬಹುತೇಕ ರಸ್ತೆಗಳಲ್ಲಿ ಒಳಚರಂಡಿಗಳೂ ನಿರ್ಮಾಣವಾಗಿದ್ದು, ಕೊಳಚೆ ನೀರು ಈಗ ರಸ್ತೆಗಳಲ್ಲಿ ಹರಿಯುತ್ತಿಲ್ಲ. ನಿವಾಸಿಗಳೂ ಕೂಡ ತಮ್ಮ ಬಡಾವಣೆಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕೆಂದು ತೀರ್ಮಾನಿಸಿರುವುದರಿಂದ ಎಲ್ಲೆಲ್ಲೂ ಸ್ವಚ್ಛತೆ ಕಂಡು ಬರುತ್ತದೆ.

ರಸ್ತೆಗಳಿಗೆ ಕಾಂಕ್ರೀಟ್, ಡಾಂಬರೀಕರಣ:
ಮೂರು ವರ್ಷಗಳ ಹಿಂದೆ ಮಹಾನಗರ ಪಾಲಿಕೆಗೆ ಚುನಾಚಣೆಯಾಗಿ ನಮ್ರತಾ ರಮೇಶ್ ಅವರು ಸದಸ್ಯರಾಗಿ ಆಯ್ಕೆಯಾದಾಗ ಪಡುವಾರಹಳ್ಳಿಯಲ್ಲಿ ಬಹುತೇಕ ರಸ್ತೆಗಳು ಡಾಬರು ಕಾಣದ ರಸ್ತೆಗಳಾಗಿದ್ದವು. ಈಗ ಎರಡು ವರ್ಷಗಳು ಕಳೆದಿದೆ. ಒಮ್ಮೆ ಈ ಬಡಾವಣೆಗಳಲ್ಲಿ ಸುತ್ತು ಹಾಕಿದರೆ ಎಷ್ಟರ ಮಟ್ಟಿಗೆ ಪಡುವಾರಹಳ್ಳಿ ಅಭಿವೃದ್ಧಿಯಾಗಿ ಎನ್ನುವುದು ನಿಮ್ಮ ಗಮನಕ್ಕೆ ಬರುತ್ತದೆ.

ಇಲ್ಲಿನ ಕಾಳಿದಾಸ ರಸ್ತೆಯ 4ನೇ ಅಡ್ಡ ರಸ್ತೆಗೆ ಕಾಂಕ್ರೀಟ್, 1ನೇ ಮುಖ್ಯ ರಸ್ತೆಯ 2ನೇ ಅಡ್ಡರಸ್ತೆ ಹಾಗೂ ಗಣಪತಿ ದೇವಸ್ಥಾನದ 3ನೇ ಅಡ್ಡರಸ್ತೆವರೆಗೂ ಡಾಂಬರೀಕರಣ ಪೂರ್ಣಗೊಂಡಿದೆ.
ಇನ್ನು ಡಾಂಬರೀಕರಣ ಆಗಿರುವ ರಸ್ತೆಗಳ ಪಟ್ಟಯೂ ದೊಡ್ಡದಾಗಿಯೇ ಇದೆ. 3ನೇ ಮುಖ್ಯ ರಸ್ತೆ, ವಾಲ್ಮಿಕಿ ರಸ್ತೆ, ಆದಿಪಂಪ ರಸ್ತೆ, ಕಾಲೋನಿ ರಸ್ತೆ, ಮಾರಿಗುಡಿ ಹಿಂಭಾಗದ ನಾಯಕರ ಬೀದಿ ಹಾಗೂ ಗರಡಿ ರಸ್ತೆ, 3ನೇ ಅಡ್ಡ ರಸ್ತೆ, 5 ಮತ್ತು 7ನೇ ಅಡ್ಡ ರಸ್ತೆ ಹಾಗೂ 5 ಮತ್ತು 6ನೇಮುಖ್ಯ ರಸ್ತೆಗಳಿಗೆ ಡಾಂಬರೀಕರಣ ಮಾಡಿ ಅಭಿವೃದ್ಧಿ ಮಾಡಲಾಗಿದೆ.

ಮಳೆನೀರು ಚರಂಡಿ, ಡೆಕ್‍ಗಳ ನಿರ್ಮಾಣ, ಒಳಚರಂಡಿ ಅಭಿವೃದ್ಧಿ:


ಒಂಟಿಕೊಪ್ಪಲ್ ಮುಖ್ಯ ರಸ್ತೆಯಿಂದ ಅಡ್ಡರಸ್ತೆಗೆ ಅಡ್ಡಲಾಗಿ ಡೆಕ್ ನಿರ್ಮಾಣ, ಪ್ರಮುಖ ರಸ್ತೆಗಳಲ್ಲಿ ಮಳೆನೀರು ಚರಂಡಿ ಮತ್ತು ಪಡುವಾರಹಳ್ಳಿಯ 3 ಮತ್ತು 4-5ನೇ ಮುಖ್ಯ ರಸ್ತೆಯ ಗಲ್ಲಿಗಳಲ್ಲಿ ಒಳಚರಂಡಿ ನಿರ್ಮಾಣ. ಹುಣಸೂರು ರಸ್ತೆಯಿಂದ ಆದೊಚುಂಚನಗಿರಿ ರಸ್ತೆಯ ಹಾಸ್ಟೆಲ್ ವರೆಗೆ ಮತ್ತು ವಾಲ್ಮಿಕಿ ರಸ್ತೆಯಿಂದ ಪೆಟ್ರೋಲ್ ಬಂಕ್‍ವರೆಗೆ ಒಳಚರಂಡಿ ನಿರ್ಮಾಣ ಮಾಡಲಾಗಿದೆ.

ಕೋವಿಡ್ ಸಂದರ್ಭದಲ್ಲಿ ಕಿಟ್ ವಿತರಣೆ:
2020ರ ಮಾರ್ಚ್ ತಿಂಗಳಲ್ಲಿ ಲಾಕ್‍ಡೌನ್ ಫೋಷಣೆಯಾದ ನಂತರ ಕಾಮಗಾರಿಗಳ ಜೊತೆಗೆ ಜನಜೀವನವೇ ಬಂದ್ ಆದ ನಂತರ ಪಾಲಿಕೆ ಸದಸ್ಯೆ ನಮ್ರತಾ ರಮೇಶ್‍ರವರ ಪತಿ ರಮೇಶ್ ಅವರುಸ್ಥಳೀಯ ಸಣ್ಣಪುಟ್ಟ ವ್ಯಾಪಾರಿಗಳು, ಪೌರಕಾರ್ಮಿಕರು, ಔಆರ್ಡ್‍ನ ಬಡಜನರಿಗೆ ಆಹಾರ ಕಿಟ್ ವಿತರಣೆ ಮಾಡಿದ್ದು, ಹೆಚ್ಚು ಪ್ರಚಾರ ಪಡೆಯಲೇ ಇಲ್ಲ.ನಮ್ರತಾ ರಮೇಶ್ ದಂಪತಿಗಳು ಈ ಸಂದರ್ಭದಲ್ಲಿ ಬಹುತೇಕರಿಗೆ ಸಹಕಾರಿಗಳಾಗಿದ್ದರನ್ನು ಈಗಲೂ ಸ್ಥಳಿಯರು ನೆನಪು ಮಾಡಿಕೊಂಡರು.

ಹಬ್ಬಗಳಲ್ಲಿ ಪೌರಕಾರ್ಮಿಕರಿಗೆ ಬಹುಮಾನ:
ಇದೇನು ವಿಶೇಷಲ್ಲ ಎನ್ನಬಹುದು ನೀವು. ಈ ದಂಪತಿಗಳಲ್ಲೊಂದು ವಿಶೇಷವಿದೆ, ವರ್ಷ ಪೂರ್ತಿ ಯಾವುದೇ ಹಬ್ಬ ಇರಲಿ ಆ ಸಂದರ್ಭದಲ್ಲಿ ಪೌರಕಾರ್ಮಿಕರಿಗೆ ಹೊಸ ಬಟ್ಟೆ, ಡ್ರೈ ಫ್ರೂಟ್ ವಿತರಣೆ ಹಾಗೂ ಆರ್ಥಿಕ ನೆರವು ನೀಡುತ್ತಾ ಬಂದಿದ್ದಾರೆ.

ಇನ್ನೂ ಸಾಕಷ್ಟು ಇದೆ:
ಕಳೆದ ಎರಡು ವರ್ಷಗಳಲ್ಲಿ ಅಂದಾಜು 3 ಕೋಟಿ ರೂ. ಮೌಲ್ಯದ ಕಾಮಗಾರಿ ಈ ಭಾಗದಲ್ಲಿ ಪೂರ್ಣಗೊಂಡಿದ್ದು, ಇನ್ನೂ 1 ಕೋಟಿ ರೂ.ಗೆ ಟೆಂಡರ್ ಅನುಮತಿ ಸಿಕ್ಕಿದ್ದು, ಮುಂದಿನ ವರ್ಷ ಆ ಕಾಮಗಾರಿಗಳನ್ನು ಪೂರ್ಣ ಮಾಡುವ ಯೋಜನೆ ರೂಪಿಸಿದ್ದಾರೆ.

ಆಗಬೇಕಾಗಿರುವ ಅಭಿವೃದ್ಧಿ:

ಸುಮಾರು 13ರಿಂದ 15 ಸಾವಿರ ಜನಸಂಖ್ಯೆ ಇರುವ ಈ ಬಡಾವಣೆಗಳಲ್ಲಿ ಈಗಾಗಿರುವ ಕಾಮಗಾರಿ ಅಲ್ಲದೆ ಇನ್ನೂ 1 ಕೋಟಿ ರೂ. ವೆಚ್ಚದ ಕಾಮಗಾರಿಗೆ ಟೆಂಡರ್ ಪ್ರಕ್ರಿಯೇ ಪೂರ್ಣಗೊಂಡಿದೆ. ಪಡುವಾರಹಳ್ಳಿಯ ಮಾತೃಮಂಡಳಿ ಹಿಂಭಾಗದ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಯಿಂದ 6ರಿಂದ 1ನೇ ಮೇನ್‍ವರೆಗೆ ಒಳಚರಂಡಿ ಕಾಮಗಾರಿಗೆ 26.50 ಲಕ್ಷ ರೂ.,.
ಒಂಟಿಕೊಪ್ಪಲಿನ 6ನೇ ಟಡ್ಡ ರಸ್ತೆ 10 ಲಕ್ಷ ರೂ., 1ರಿಂದ 4ನೇ ಅಡ್ಡ ರಸ್ತೆಯಲ್ಲಿ ಡೆಕ್ ನಿರ್ಮಾಣಕ್ಕೆ 15 ಲಕ್ಷ ರೂ., ಶಿವಾನಂದ ವೃತ್ತದ ಸಮೀಪ ಮಳೆ ನೀರು ಚರಂಡಿ ನಿರ್ಮಾಣಕ್ಕೆ 15 ಲಕ್ಷ ರೂ. ಹಾಗೂ ಬಡಾವಣೆಯಲ್ಲಿ 2 ಶುದ್ಧ ಕುಡಿಯುವ ನೀರು ಘಟಕ ನಿರ್ಮಾ ಸೇರಿದಂತೆ ಅಂದಾಜು 1 ಕೋಟಿ ರೂ.ಗಳ ಕಾಮಗಾರಿ ಆಗಬೇಕಿದೆ.
ಬಸ್ ನಿಲ್ದಾಣ ನಿರ್ಮಾಣ:
ವಾರ್ಡ್‍ಗೆ ಸೇರಿದ ಮಹಾರಾಣಿ ಕಾಲೇಜು ಸಮೀಪ ಇರುವ ಬಸ್ ನಿಲ್ದಾಣ ನಿರ್ಮಾಣ ಹಾಗೂ ಲಾಯಲ್‍ವಲ್ಡ್ ಮುಂಭಾಗದಲ್ಲಿ ಮತ್ತೊಂದು ಬಸ್ ನಿಲ್ದಾಣ ನಿರ್ಮಿಸುವ ಯೋಜನೆಯನ್ನು ನಮ್ರತಾ ರಮೇಶ್ ದಂಪತಿಗಳು ರೂಪಿಸಿದ್ದಾರೆ. ಬಸ್ ನಿಲ್ದಾಣವನ್ನು ತೊಳಸಿ ಜ್ಯುಯಲರ್ಸ್ ಪ್ರಾಯೋಜಕತ್ವದಲ್ಲಿ ನಿರ್ಮಾಣ ಮಾಡಲಾಗುತ್ತಿದೆ ಎಂದು `ಈಗೋ ಮೀಡಿಯಾ’ ಪತ್ರಿಕೆಯೊಂದಿಗೆ ಮಾತನಾಡುತ್ತಾ ತಿಳೀಸಿದರು.

 

  • ಸಾಲೋಮನ್

ಸ್ವಾತಂತ್ರ್ಯ ನಂತರ ದಶಕಗಳ ಕಾಲ ನಿರ್ಲಕ್ಷ್ಯ ಕಂಡಿದ್ದ ವಲಯವೆಂದರೆ ಅದು ಕುಡಿಯುವ ನೀರು ಪೂರೈಕೆ: ಪಿಎಂ ಮೋದಿ

0

ಸೊನಭದ್ರ(ಉತ್ತರ ಪ್ರದೇಶ),ನ.22 – ಸ್ವಾತಂತ್ರ್ಯ ನಂತರ ದಶಕಗಳ ಕಾಲ ನಿರ್ಲಕ್ಷ್ಯ ಹೊಂದಿದ ಯಾವುದಾದರೂ ಕ್ಷೇತ್ರವಿದ್ದರೆ ಅದು ಕುಡಿಯುವ ನೀರಿನ ಸೌಲಭ್ಯ ಯೋಜನೆ. ವಿಂದ್ಯಾಚಲ ಅಥವಾ ಬುಂದೇಲ್ ಖಂಡ್ ಗಳಲ್ಲಿ ಸಾಕಷ್ಟು ಸಂಪನ್ಮೂಲಗಳಿದ್ದರೂ ಕೂಡ ಕೊರತೆಯ ಪ್ರದೇಶಗಳಾಗಿ ಈ ಪ್ರದೇಶಗಳು ಕಂಡವು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಇಲ್ಲೆಲ್ಲ ಸಾಕಷ್ಟು ನದಿಗಳು, ಹಳ್ಳ-ಕೊಳ್ಳಗಳಿದ್ದರೂ ಕೂಡ ಹಲವು ಪ್ರದೇಶಗಳು ಬರಡಾಗಿ ಮತ್ತು ಬರಗಾಲಪೀಡಿತ ಪ್ರದೇಶಗಳಾಗಿ ಕಂಡವು. ಹೀಗಾಗಿ ಇಲ್ಲಿಂದ ಹಲವು ಜನರು ಬೇರೆ ಕಡೆಗೆ ಉದ್ಯೋಗ, ಜೀವನೋಪಾಯಕ್ಕಾಗಿ ವಲಸೆ ಹೋಗಬೇಕಾಗಿ ಬಂತು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಅವರು ವಿಡಿಯೊ ಕಾನ್ಫರೆನ್ಸ್ ಮೂಲಕ ಉತ್ತರ ಪ್ರದೇಶದ ಮಿರ್ಜಾಪುರ ಮತ್ತು ಸೊನಭದ್ರ ಜಿಲ್ಲೆಗಳಲ್ಲಿ ಕುಡಿಯುವ ನೀರಿನ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ಪ್ರತಿ ಮನೆಗೆ ನೀರಿನ ಯೋಜನೆ ಜಾರಿಗೆ ಬಂದು ಒಂದು ವರ್ಷ ಕಳೆದಿದೆ. ಇದುವರೆಗೆ 2.60 ಕೋಟಿಗೂ ಹೆಚ್ಚು ಮಂದಿಗೆ ಕುಡಿಯುವ ನೀರನ್ನು ನಳ್ಳಿಗಳ ಮೂಲಕ ಅವರ ಮನೆಗಳಿಗೆ ಒದಗಿಸಲಾಗಿದೆ. ಇಂದು ಆರಂಭಗೊಂಡ ಯೋಜನೆ ಮತ್ತಷ್ಟು ವೇಗ ಪಡೆದುಕೊಳ್ಳಲಿದೆ ಎಂದು ಪ್ರಧಾನ ಮಂತ್ರಿ ಹೇಳಿದರು.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಾತನಾಡಿ, ವಿಂಧ್ಯ ಪ್ರದೇಶದಲ್ಲಿ ಕಳೆದ 70 ವರ್ಷಗಳಲ್ಲಿ ಕುಡಿಯುವ ನೀರನ್ನು ಕೇವಲ 398 ಗ್ರಾಮಗಳಿಗೆ ನೀಡಲಾಗಿದೆ. ಇಂದು 3 ಸಾವಿರಕ್ಕೂ ಹೆಚ್ಚು ಹಳ್ಳಿಗಳಿಗೆ ಯೋಜನೆಗಳನ್ನು ಕೊಂಡೊಯ್ಯುವ ಉದ್ದೇಶವಿದೆ ಎಂದರು.

ಡಿ.10 ರಿಂದ ಮಂಗಳೂರಿನಿಂದ ಮೈಸೂರಿಗೆ ವಿಮಾನ ಸೇವೆ ಘೋಷಿಸಿದ ಏರ್ ಇಂಡಿಯಾ

0

ಮೈಸೂರು: ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ಡಿಸೆಂಬರ್ 10 ರಿಂದ ಮೈಸೂರು- ಮಂಗಳೂರು ನಡುವೆ ವಿಮಾನ ಸೇವೆ ಆರಂಭಿಸಲಿದೆ. ವಿಮಾನಯಾನ ಸೇವೆಗಳ ಅಧಿಕಾರಿಗಳು ಭಾನುವಾರ ಈ ಮಾಹಿತಿ ನೀಡಿದ್ದಾರೆ.

ಮಂಗಳೂರಿನಿಂದ ಡಿಸೆಂಬರ್ 10 ಮಧ್ಯಾಹ್ನ 12-40ಕ್ಕೆ ಹೊರಡಲಿರುವ ವಿಮಾನ, ಮಧ್ಯಾಹ್ನ 1-40ಕ್ಕೆ ಮೈಸೂರು ತಲುಪಲಿದೆ. ಮೈಸೂರಿನಿಂದ ಬೆಳಗ್ಗೆ 11-15ಕ್ಕೆ ನಿರ್ಗಮಿಸಿ ಮಧ್ಯಾಹ್ನ 12-15ಕ್ಕೆ ಮಂಗಳೂರು ತಲುಪಲಿದೆ.

ಬುಧವಾರ, ಶುಕ್ರವಾರ, ಶನಿವಾರ ಮತ್ತು ಭಾನುವಾರ ವಿಮಾನ ಹಾರಾಟ ನಡೆಸಲಿವೆ ಎಂದು ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ತಿಳಿಸಿದೆ.

ರಾಜ್ಯದಲ್ಲಿ ಶಾಲೆಗಳ ಪುನರಾರಂಭ ಸಂಬಂಧ: ನಾಳೆ ಮುಖ್ಯಮಂತ್ರಿ ನೇತೃತ್ವದಲ್ಲಿ ಮಹತ್ವದ ಸಭೆ

0

ಬೆಂಗಳೂರು,ನ.22 – ರಾಜ್ಯದಲ್ಲಿ ಶಾಲೆಗಳ ಪುನರಾರಂಭ ಸಂಬಂಧ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ನಾಳೆ ಮಹತ್ವದ ಸಭೆ ನಡೆಯಲಿದೆ. ಈ ಸಭೆಯಲ್ಲಿ ಶಾಲೆಗಳ ಆರಂಭದ ಕುರಿತು ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.

ಕೋವಿಡ್ ಪರಿಸ್ಥಿತಿಯಲ್ಲಿ ಶಾಲೆಗಳನ್ನು ಪುನರಾರಂಭಿಸುವ ಸಂಬಂಧ ಶಿಕ್ಷಣ ಇಲಾಖೆ ವರದಿಯೊಂದನ್ನು ಸಿದ್ಧಪಡಿಸಿದ್ದು, ನಾಳೆ ಈ ವರದಿಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಿ ನಂತರ ಈ ವರದಿಯ ಬಗ್ಗೆ ಸಮಗ್ರವಾಗಿ ಚರ್ಚೆ ನಡೆಸಲಾಗುತ್ತದೆ. ಈ ವರದಿ ಶಾಲೆಗಳ ಪುನರಾರಂಭದ ಬಗ್ಗೆ ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು, ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಣ ಇಲಾಖೆಯ ಆಯುಕ್ತರ ಅಭಿಪ್ರಾಯಗಳನ್ನು ಒಳಗೊಂಡಿದೆ.

ನಾಳಿನ ಸಭೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್, ಶಿಕ್ಷಣ ಇಲಾಖೆಯ ಉನ್ನತಾಧಿಕಾರಿಗಳು  ಪಾಲ್ಗೊಳ್ಳಲಿದ್ದು, ಶಾಲೆಗಳ ಆರಂಭದ ಸಾಧಕ- ಬಾಧಕಗಳ ಬಗ್ಗೆ ಚರ್ಚಿಸಿ ತೀರ್ಮಾನಗಳನ್ನು ಕೈಗೊಳ್ಳಲಿದ್ದಾರೆ.

ರಾಜ್ಯದಲ್ಲಿ ಡಿಸೆಂಬರ್ ನಲ್ಲಿ ಶಾಲೆಗಳನ್ನು ಪುನರಾರಂಭಿಸಲಾಗುವುದು ಎಂಬ ಮಾತುಗಳು ಕೇಳಿಬರುತ್ತಿವೆಯಾದರೂ ಆತುರದ ನಿರ್ಧಾರಗಳನ್ನು ಕೈಗೊಳ್ಳುವುದಿಲ್ಲ ಎಂದು ಸಚಿವ ಸುರೇಶ್ ಕುಮಾರ್ ಈಗಾಗಲೇ ಹೇಳಿದ್ದಾರೆ. ಎಲ್ಲವನ್ನು ಸಮಗ್ರವಾಗಿ ಚರ್ಚಿಸಿದ ನಂತರವೇ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದು, ನಾಳಿನ ಸಭೆಯಲ್ಲಿ ಏನಾಗಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

MOST COMMENTED

ಶಾಸಕ ರಾಮದಾಸ ಉತ್ತಮ ಸಂಘಟಕರು: ಎಸ್‍ಟಿಎಸ್ ಶ್ಲಾಘನೆ

0
ರಾಮದಾಸ ಕರೆದಿದ್ದ ಪಾಲಿಕೆ ಸದಸ್ಯರ ಸಭೆಗೆ ಎಸ್‍ಟಿಟಸ್ ದಿಢೀರ್ ಭೇಟಿ ಮೈಸೂರು: ಕೆ.ಆರ್. ಕ್ಷೇತ್ರದ ಬಿಜೆಪಿ ಶಾಸಕರಾದ ಎಸ್.ಎ.ರಾಮದಾಸ್ ಅವರು ಭಾನುವಾರ ಏರ್ಪಡಿಸಿದ್ದ ತಮ್ಮ ಕ್ಷೇತ್ರದ ಕಾರ್ಪೋರೇಟರ್ ಗಳ ಸಭೆಗೆ ಸಹಕಾರ ಹಾಗೂ ಜಿಲ್ಲಾ...

HOT NEWS