ಬ್ರೆಜಿಲ್ ದೈತ್ಯ ಫುಟ್ ಬಾಲ್ ದಂತಕತೆ ‘ಪೆಲೆ’ ಇನ್ನಿಲ್ಲ:

0
38

ರಿಯೊ ಡಿ ಜನೈರೊ. ಡಿ.30 – ಫುಟ್ಬಾಲ್ ದಂತಕಥೆ ಬ್ರೆಝಿಲಿಯನ್ ಖ್ಯಾತ ಮಾಜಿ ಫುಟ್ಬಾಲ್ ಆಟಗಾರ ಪೆಲೆ ತಮ್ಮ 82 ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ.  ಮೂರು ವಿಶ್ವಕಪ್ ಟೂರ್ನಿಗಳಲ್ಲಿ ಬ್ರೆಜಿಲ್ ತಂಡವನ್ನು ಚಾಂಪಿಯನ್ ಆಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪೆಲೆ ಗುರುವಾರ ಕ್ಯಾನ್ಸರ್‌ನಿಂದಾಗಿ ನಿಧನರಾದರು.

Advertisements

ಬ್ರೆಜಿಲ್ ತಂಡವು ಮೂರು ಬಾರಿ ವಿಶ್ವಕಪ್ (1958, 1962 ಮತ್ತು 1970) ಜಯಿಸಲು ಪೆಲೆ ಅವರ ಆಟವು ಪ್ರಮುಖವಾಗಿತ್ತು. ಬ್ರೆಜಿಲ್ ಪರವಾಗಿ ಅತಿ ಹೆಚ್ಚು ಗೋಲು ಗಳಿಸಿದ (77) ಅವರ ದಾಖಲೆಯನ್ನು ಈಚೆಗೆ ನಡೆದ ವಿಶ್ವಕಪ್ ಟೂರ್ನಿಯಲ್ಲಿ ನೇಮರ್ ಸರಿಗಟ್ಟಿದ್ದರು.

‘ಪೆಲೆಗೆ ನೀಡುತ್ತಿರುವ ಕಿಮೊಥೆರಪಿ ಪರಿಣಾಮ ಬೀರುತ್ತಿಲ್ಲ. ಆದ್ದರಿಂದ ಅವರನ್ನು ಪ್ಯಾಲೆಟಿವ್‌ ಕೇರ್‌ ವಿಭಾಗದಲ್ಲಿ ದಾಖಲಿಸಲಾಗಿದೆ’ ಎಂದು ಪತ್ರಿಕೆಯೊಂದು ವರದಿ ಮಾಡಿತ್ತು. ಅದನ್ನು ಕುಟುಂಬದ ಸದಸ್ಯರು ಅಲ್ಲಗಳೆದಿದ್ದರು.

ನವೆಂಬರ್‌ ಕೊನೆಯ ವಾರದಲ್ಲಿ ಪೆಲೆ ಅಲ್ಬರ್ಟ್‌ ಐನ್‌ಸ್ಟೈನ್ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಕರುಳಿನ ಕ್ಯಾನ್ಸರ್‌ ಉಲ್ಬಣಿಸಿದ್ದು ಮೂತ್ರಪಿಂಡ ಮತ್ತು ಹೃದಯಕ್ಕೆ ಸೋಂಕು ವ್ಯಾಪಿಸಿದೆ ಎಂದು ಈಚೆಗೆ ಆಸ್ಪತ್ರೆಯ ಮೂಲಗಳು ತಿಳಿಸಿದ್ದವು. 1957ರಲ್ಲಿ ರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡಿದ್ದ ಅವರು ವೃತ್ತಿಜೀವನದಲ್ಲಿ 1000ಕ್ಕೂ ಹೆಚ್ಚು ಗೋಲುಗಳನ್ನು ದಾಖಲಿಸಿದ್ದರು. 1977ರಲ್ಲಿ ನಿವೃತ್ತರಾಗಿದ್ದರು.

Advertisements

LEAVE A REPLY

Please enter your comment!
Please enter your name here