ನನ್ನನ್ನ ನಂಬಿಸಿ ಹೆಚ್ ಡಿ ಕುಮಾರಸ್ವಾಮಿಗೆ ಕತ್ತು ಕೂಯ್ದಿದ್ದಾರೆ: ಡಾ.ಕೆ.ಮಹದೇವ್ ಆರೋಪ

0
2142

ಹೆಚ್ ಡಿ ಕುಮಾರಸ್ವಾಮಿಗೆ ರಾಜಕೀಯದ ಮೂಲಕವೇ ಉತ್ತರ ಕೊಡುತ್ತೇನೆ. ನನ್ನಂತಹವನ ಮೇಲೆ ಈ ರೀತಿ ಕಂತ್ರಿ ಕೆಲಸ ಮಾಡಿದವರಿಗೆ ಕ್ಷಮೆಯೇ ಇಲ್ಲ. ಕುತಂತ್ರ ಮಾಡಿದವರಿಗೆ ಕ್ಷಮೆಯೇ ಇಲ್ಲ.  ಒಕ್ಕಲಿಗ ಸಮುದಾಯದ ಪ್ರಾಮಾಣಿಕ ನಾಯಕರನ್ನು ತುಳಿಯುತ್ತಿಲ್ಲ ಹೆಚ್.ಡಿ.ಕುಮಾರಸ್ವಾಮಿ ಕೊಲೆ ಮಾಡುತ್ತಿದ್ದಾರೆ ಎಂದು ಡಾ ಕೆ ಮಹದೇವ್ ಕಿಡಿ ಕಾರಿದ್ದಾರೆ.

ಮೈಸೂರು,ಡಿಸೆಂಬರ್,17 –  ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ನಂಬಿಸಿ ನನ್ನ ಕತ್ತು ಕೂಯ್ದಿದ್ದಾರೆ ಎಂದು  ಒಕ್ಕಲಿಗ ಸಂಘದ ಚುನಾವಣೆ ಪರಾಭವ ಅಭ್ಯರ್ಥಿ ಡಾ.ಕೆ.ಮಹದೇವ್ ಗಂಭೀರ ಆರೋಪ ಮಾಡಿದ್ದಾರೆ.

ಶುಕ್ರವಾರ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಡಾ.ಕೆ. ಮಹದೇವ್,  ರಾಜ್ಯ ಒಕ್ಕಲಿಗ ಸಂಘದ ಚುನಾವಣೆಯಲ್ಲಿ ನನಗೆ ಸೋಲಾಗಿದೆ. ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇರೋದ್ರಿಂದ ಸೋಲನ್ನ  ಒಪ್ಪಿಕೊಂಡಿದ್ದೇನೆ. ಆದರೆ ನನಗೆ ನಂಬಿಕೆ ದ್ರೋಹ ಮಾಡಲಾಗಿದೆ. ನಾನು ಚುನಾವಣೆಗೆ ನಿಲ್ಲಬೇಕೆಂದಾಗ ನನ್ನನ್ನು ಸಾರಾ ಮಹೇಶ್ ಸಂಪರ್ಕಿದ್ದರು. ಪಾಲಿಕೆ ಸದಸ್ಯ ಕೆ.ವಿ.ಶ್ರೀಧರ್ ಗೆ ನಿಮ್ಮ ತಂಡದಲ್ಲಿ ಅವಕಾಶ ನೀಡಿ ಅಂತ ಕೇಳಿಕೊಂಡರು. ಹೆಚ್.ಡಿ.ಕುಮಾರಸ್ವಾಮಿಯವರೇ ಶ್ರೀಧರ್ ಅವರನ್ನು ನಿಮ್ಮ ತಂಡಕ್ಕೆ ಸೇರಿಸಲು ಹೇಳಿದ್ದಾರೆ. ಬೇಕಿದ್ದರೆ ಅವರ ಜೊತೆಯಲ್ಲಿ ಮಾತುಕತೆ ನಡೆಸೋಣ ಎಂದು ಸಾರಾ ಮಹೇಶ್ ಹೇಳಿದರು. ನಾನು ನಿಮ್ಮ ಮೇಲೆ ನಂಬಿಕೆ ಇದೆ ಅಂತ ಹೇಳಿ ಶ್ರೀಧರ್ ಅವರನ್ನ ನನ್ನ ತಂಡದಲ್ಲಿ ಸ್ಪರ್ಧೆಗೆ ಅವಕಾಶ ನೀಡಿದ್ದೆ.

ಆದರೆ ಚುನಾವಣೆಗೂ ಎರಡು ದಿನಗಳ ಮುಂಚೆ ಹೆಚ್.ಡಿ ಕುಮಾರಸ್ವಾಮಿ ಉಲ್ಟಾ ಹೊಡೆದಿದ್ದಾರೆ. ನನ್ನ ವಿರುದ್ಧ ನಿಂತಿದ್ದ ಅಭ್ಯರ್ಥಿಗಳಿಗೆ ಬೆಂಬಲ ನೀಡಿದ್ದಾರೆ. ನನ್ನ 7ಸಾವಿರ ಮತಗಳನ್ನು ಅವರ ಅಭ್ಯರ್ಥಿಗೆ ಹಾಕಿಸಿಕೊಂಡು ನನಗೆ ಅನ್ಯಾಯ ಮಾಢಿದ್ದಾರೆ. ನನ್ನನ್ನ ನಂಬಿಸಿ ಕತ್ತು ಕುಯ್ಯುವ ಕೆಲಸ ಮಾಡಿದ್ದಾರೆ. ಕುಮಾರಸ್ವಾಮಿಯವರಿಗೆ ಈಗಲೂ ಚಾಲೆಂಜ್ ಮಾಡ್ತಿನಿ. ನಿಮಗೆ ಸಾಧ್ಯವಾದ್ರೆ ಕೆ.ವಿ.ಶ್ರೀಧರ್ ಗೆ ರಾಜಿನಾಮೆ ಕೊಡಿಸಿ ಮತ್ತೆ ಗೆಲ್ಲಿಸಿ. ಇದು ನಿಮಗೆ ಹಾಗೂ ನಿಮ್ಮ ಮಕ್ಕಳಿಗೆ ಒಳ್ಳೆಯದಾಗಲ್ಲ ಎಂದು  ಡಾ.ಕೆ.ಮಹದೇವ್ ಕಿಡಿ ಕಾರಿದರು.

ನಾನು ಇದುವರೆಗೂ ರಾಜಕೀಯ ಪ್ರವೇಶಿಸಿರಲಿಲ್ಲ. ಆದರೆ ಇಂದಿನಿಂದ ನಾನು ರಾಜಕೀಯ ಆರಂಭಿಸುತ್ತೇನೆ‌. ಹೆಚ್ ಡಿ ಕುಮಾರಸ್ವಾಮಿ ಅವರಿಗೆ ರಾಜಕೀಯದ ಮೂಲಕವೇ ಉತ್ತರ ಕೊಡುತ್ತೇನೆ. ನನ್ನಂತಹವನ ಮೇಲೆ ಈ ರೀತಿ ಕಂತ್ರಿ ಕೆಲಸ ಮಾಡಿದವರಿಗೆ ಕ್ಷಮೆಯೇ ಇಲ್ಲ. ಕುತಂತ್ರ ಮಾಡಿದವರಿಗೆ ಕ್ಷಮೆಯೇ ಇಲ್ಲ. ಹೆಚ್.ಡಿ.ಕುಮಾರಸ್ವಾಮಿ ಒಕ್ಕಲಿಗ ಸಮುದಾಯದ ಪ್ರಾಮಾಣಿಕ ನಾಯಕರನ್ನು ತುಳಿಯುತ್ತಿಲ್ಲ ಕೊಲೆ ಮಾಡುತ್ತಿದ್ದಾರೆ ಎಂದು ಡಾ ಕೆ ಮಹದೇವ್ ಹರಿಹಾಯ್ದರು.

LEAVE A REPLY

Please enter your comment!
Please enter your name here