ಮೈಸೂರು,ಡಿ.16 – ನಗರದ ಹೊರ ವಲಯದಲ್ಲಿ ನಂದಿನಿ ಮಿಲ್ಕ್ ಡೈರಿಯ ಹೆಸರಾಂತ ಉತ್ಪನ್ನ ನಂದಿನಿ ಹೆಸರಿನ ನಕಲಿ ತುಪ್ಪ ತಯಾರಿಕಾ ಘಟಕ ಧಾಳಿ ನಡೆಸಿ ವಶಕ್ಕೆ ಪಡೆಯಲಾಗಿದೆ.
ಚಾಮುಂಡಿಬೆಟ್ಟ ಹಿಂಭಾಗದ ಹೊಸಹುಂಡಿ ಗ್ರಾಮದಲ್ಲಿ ನಂದಿನಿ ಹೆಸರಿನ ನಕಲಿ ತುಪ್ಪ ತಯಾರಿಕಾ ಘಟಕ ಪತ್ತೆಯಾಗಿದೆ.
ತಮಿಳು ನಾಡಿನ ಮುರುಗೇಶನ್, ಚಂದ್ರಕುಮಾರ್, ಮೋಹನ್ ಕುಮಾರ್ ಮುಂತಾದವರು ಈ ದಂಧೆಯನ್ನು ನಡೆಸುತ್ತಿದ್ದರು. ದಾಳಿ ನಡೆಯುತ್ತಿದ್ದಂತೆ ಎಲ್ಲರೂ ಪರಾರಿಯಾಗಿದ್ದಾರೆ.
ಜೀವನ್ ತುಪ್ಪ ಕಂಪನಿಯವರಿಂದ ನಕಲಿ ಜಾಲದ ಮಾಹಿತಿ ತಿಳಿದು ಬಂದ ಹಿನ್ನೆಲೆಯಲ್ಲಿ, ಮೈಸೂರು ಹಾಲು ಒಕ್ಕೂಟ ನಿಯಮಿತ(ಮೈಮುಲ್), ಆಹಾರ ಮತ್ತು ಸಂರಕ್ಷಣಾ ಕ್ರಮ ಇಲಾಖೆ ಮತ್ತು ಪೊಲೀಸ್ ಅಧಿಕಾರಿಗಳ ನಿಯೋಜಿತ ತಂಡ ಗುರುವಾರ ಬೆಳಿಗ್ಗೆ ನಕಲಿ ನಂದಿನಿ ತುಪ್ಪ ದಾಸ್ತಾನು ಮಾಡಿದ್ದ ಗೋದಾಮಿನ ಮೇಲೆ ದಾಳಿ ನಡೆಸಿ 2.25 ಲಕ್ಷ ರೂ.ಗೂ ಹೆಚ್ಚು ಬೆಲೆ ಬಾಳುವ ನಕಲಿ ತುಪ್ಪ ವಶಕ್ಕೆ ಪಡೆದಿದ್ದಾರೆ.
ಈ ಸಂಬAಧವಾಗಿ ಮೈಮುಲ್ ಪ್ರಧಾನ ವ್ಯವಸ್ಥಾಪಕ ಎಚ್.ಆರ್.ರಘು ಅವರು ಪತ್ರಿಕೆಯೊಂದಿಗೆ ಮಾತನಾಡಿ ಮಾಹಿತಿ ನೀಡಿದರು. ಹೊಸಹುಂಡಿ ಗ್ರಾಮದ ಗೋದಾಮಿನಲ್ಲಿ ನಂದಿನಿ ತುಪ್ಪ ದಾಸ್ತಾನು ಆಗಿದೆ ಎನ್ನುವ ವಿಚಾರ ಮಾನವ ಹಕ್ಕು ಹೋರಾಟ ಸದಸ್ಯರೊಬ್ಬರ ಮುಖಾಂತರ ನಮಗೆ ತಿಳಿದು ಬಂತು ತಕ್ಷಣ ನಮ್ಮ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿದೆವು. ಸ್ಥಳದಲ್ಲಿ ದೊರೆತ ಉತ್ಪನ್ನ ನಕಲಿ ನಂದಿನಿ ಮತ್ತು ನಕಲಿ ಲೇಬಲ್ ಎಂದು ತಿಳಿದು ಬಂದ ಕೂಡಲೇ ಗೋದಾಮಿಗೆ ಬೀಗ ಜಡಿದು ಗ್ರಾಮಾಂತರ ಪೊಲೀಸ್ ಠಾಣೆ ಹಾಗೂ ಆಹಾರ ಮತ್ತು ಸಂರಕ್ಷಣಾಧಿಕಾರಿಗೆ ಮಾಹಿತಿ ನೀಡಿದೆವು. ಮೂರು ಇಲಾಖೆಯ ಅಧಿಕಾರಿಗಳು ಸ್ಥಳದ ಮಹಜರು ನಡೆಸಿದರು ಎಂದರು.
ವನಸ್ಪತಿ ಹಾಗೂ ಡಾಲ್ಡ ಮಿಶ್ರಣದ ನಂದಿನಿ ತುಪ್ಪ ತುಂಬಿದ್ದ ೩೦೦ಕ್ಕೂ ಹೆಚ್ಚು ದೊಡ್ಡ ಟಿನ್ ಗಳು ಹಾಗೂ ನಂದಿನಿ ಲೇಬಲ್ ಮತ್ತು ಮುದ್ರಣ ಯಂತ್ರ ಸೀಜ್ ಮಾಡಿದ್ದೇವೆ. ಕಳೆದ ಆಗಸ್ಟ್ ತಿಂಗಳಲ್ಲಿ ತಮಿಳು ನಾಡಿನ ವ್ಯಕ್ತಿಗಳು ಈ ಗೋದಾಮನ್ನು ಬಾಡಿಗೆಗೆ ಪಡೆದಿದ್ದಾರೆ. ಆಗನಿಂದಲೂ ಇದೇ ವ್ಯವಹಾರ ನಡೆಸುತ್ತಿದ್ದು ಈಗ ಸಿಕ್ಕಿ ಬಿದ್ದಿದ್ದಾರೆ. ಈ ಸಂಬAಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆದರೆ ಗೋದಾಮಿನ ಮಾಲೀಕರ ಬಗ್ಗೆ ಇನ್ನೂ ಸೂಕ್ತ ಸುಳಿವು ಅವರ ಹೆಸರು, ವಿಳಾಸ ಯಾವುದೂ ಸಿಕ್ಕಿಲ್ಲ. ಈ ಬಗ್ಗೆ ಪೊಲೀಸರು ತನಿಖೇ ಆರಂಭಿಸಿದ್ದಾರೆ ಎಂದರು.
ಸ್ಥಳಕ್ಕೆ ಮೈಮುಲ್ ಎಂಡಿ ವಿಜಯ ಕುಮಾರ್, ಮಾರ್ಕೆಟಿಂಗ್ ಮ್ಯಾನೇಜರ್ ಶಶಿಕುಮಾರ್, ಡೆಪ್ಯೂಟಿ ಮ್ಯಾನೇಜರ್ ಪ್ರದೀಪ್, ಉತ್ಪನ್ನ ವಿಭಾಗದ ಅಧಿಕಾರಿ ಶ್ವೇತಾ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆಹಾರ ಮತ್ತು ಸಂರಕ್ಷಣಾ ಕ್ರಮ ಇಲಾಖೆ ಅಧಿಕಾರಿ ಪ್ರಸಾದ್ ಹಾಗೂ ಮೈಸೂರು ದಕ್ಷಿಣ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದರು.
ಸಾರ್ವಜನಿಕರಿಗೆ ಈ ಬಗ್ಗೆ ಆರಂಕ ಬೇಡ
ನಕಲಿ ನಂದಿನಿ ತುಪ್ಪವನ್ನು ಹೋಲ್ ಸೇಲ್ ಮೂಲಕ ನಗರದ ದೊಡ್ಡ ದೊಡ್ಡ ಸ್ವೀಟ್ಸ್ ತಯಾರಕರಿಗೆ ಮಾರಾಟ ಮಾಡಿದ್ದಾರೆ ಎಂದು ತನಿಖೆಯಿಂದ ತಿಳಿದು ಬಂದಿದೆ. ಸಾರ್ವಜನಿಕರಿಗೆ ನಕಲಿ ತುಪ್ಪದ ಆತಂಕ ಬೇಡ. ತಪ್ಪ ಖರೀದಿಸಲು ಬಯಸುವವರು ನಂದಿನಿ ಓಟ್ ಲೆಟ್ ಹಾಗೂ ವಿತರಕರಲ್ಲಿ ಮಾತ್ರ ಖರೀದಿಸಿ. ಮಿಶ್ರಣದಲ್ಲಿರುವ ನಕಲಿ ಅಂಶದ ಬಗ್ಗೆಯೂ ಆಹಾರ ಸಂರಕ್ಷಣಾ ಇಲಾಖೆ ಪರೀಕ್ಷೆ ನಡೆಸುತ್ತಿದೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ.
–ಎಚ್.ಆರ್.ರಘು, ಪ್ರಧಾನ ವ್ಯವಸ್ಥಾಪಕರು, ಮೈಮುಲ್