ಚಾಮರಾಜನಗರ: ಪಿ.ಜಿ‌.ಪಾಳ್ಯದ ಕಡೆ ಮತ್ತೊಂದು ವನ್ಯಜೀವಿ ಸಫಾರಿ ಆರಂಭ

0
34

ಬೆಂಗಳೂರು, ಡಿ. 2 –  ಚಾಮರಾಜನಗರದಲ್ಲಿ ಮತ್ತೊಂದು ವನ್ಯಜೀವಿ ಸಫಾರಿ ಆರಂಭಗೊಂಡಿದೆ.

ಹೌದು. ಪರಿಸರ ಪ್ರವಾಸೋದ್ಯಮ ಉತ್ತೇಜನ ನೀಡುವ ನಿಟ್ಟಿನಲ್ಲಿ ಇಂದಿನಿಂದ ಮಲೆ ಮಹದೇಶ್ವರ ವನ್ಯಜೀವಿಧಾಮ ವ್ಯಾಪ್ತಿಯಲ್ಲಿ ಪಿ‌.ಜಿ.ಪಾಳ್ಯ ಸಮೀಪ ಸಫಾರಿ ಆರಂಭಗೊಂಡಿದೆ.

ಒಂದೇ ಜಿಲ್ಲೆಯಲ್ಲಿ ನಾಲ್ಕು ಕಡೆ ವನ್ಯಜೀವಿ ಸಫಾರಿ ನಡೆಸಬಹುದಾಗಿದ್ದು, ಪಿ.ಜಿ‌.ಪಾಳ್ಯದ ಕಡೆ ಹುಲಿ, ಚಿರತೆ ಆನೆ, ಕಾಡೆಮ್ಮೆ, ಜಿಂಕೆ, ವೈವಿಧ್ಯಮಯ ಪ್ರಾಣಿ-ಪಕ್ಷಿಗಳನ್ನು ಪ್ರವಾಸಿಗರು ಕಣ್ತುಂಬಿಕೊಳ್ಳಬಹುದಾಗಿದೆ.

ಸಫಾರಿಗೆ ತೆರಳುವ ಪ್ರವಾಸಿಗರಿಗೆ ವಾಹನ ಶುಲ್ಕವಾಗಿ 100 ರೂಪಾಯಿ, ವಯಸ್ಕರಿಗೆ ತಲಾ 400 ಹಾಗೂ ಮಕ್ಕಳಿಗೆ 200 ರೂಪಾಯಿ ದರವನ್ನು ನಿಗದಿ ಪಡಿಸಲಾಗಿದೆ.

LEAVE A REPLY

Please enter your comment!
Please enter your name here