ವಿವಿಧ ಬೇಡಿಕೆ ಆಗ್ರಹ: ಫ್ರೀಡಂಪಾರ್ಕ್ ನಲ್ಲಿ ಕಬ್ಬು ಬೆಳೆಗಾರರ ಅಹೋರಾತ್ರಿ ಧರಣಿ 7ನೇ ದಿನಕ್ಕೆ

0
8

ಬೆಂಗಳೂರು,ನ. 28 – ಕಬ್ಬಿಗೆ ಬೆಲೆ ನಿಗದಿ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕಬ್ಬು ಬೆಳೆಗಾರರು ಬೆಂಗಳೂರಿನ ಫ್ರೀಡಂಪಾರ್ಕ್ ನಲ್ಲಿ ನಡೆಸುತ್ತಿರುವ ಅಹೋರಾತ್ರಿ ಧರಣಿ 7ನೇ ದಿನಕ್ಕೆ ಕಾಲಿಟ್ಟಿದೆ.

Advertisements

ಕಬ್ಬಿನ ಎಫ್‌ಆರ್‌ಪಿ ದರ ಏರಿಕೆಗೆ ಆಗ್ರಹಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಈ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ.

ಇನ್ನು ಇಂದು ಬೆಳಿಗ್ಗೆ 11.30ಕ್ಕೆ ರೈತ ಮಹಿಳೆಯರು ಬಾರು ಕೋಲು ಚಳವಳಿ ನಡೆಸಲಿದ್ದು, ನೂರಾರು ರೈತ ಮಹಿಳೆಯರು ಪಾಲ್ಗೊಳ್ಳಲಿದ್ದಾರೆ.

Advertisements

LEAVE A REPLY

Please enter your comment!
Please enter your name here