ನ.28 ರಂದು ಮೈಲಾಕ್ ಸಂಸ್ಥೆ ಅಮೃತ ಮಹೋತ್ಸವ ಆಚರಣೆ: ‌ಆರ್. ರಘು ಕೌಟಿಲ್ಯ

0
20
ಮೈಸೂರು,ನ. 26 – ನವೆಂಬರ್ 28 ರಂದು ಮೈಸೂರು ಪೇಯಿಂಟ್ಸ್ ಅಂಡ್ ವಾರ್ನಿಷ್ ಲಿ.ಗೆ 75 ವರ್ಷಗಳು ತುಂಬಿದ ಹೊನ್ನೆಲೆಯಲ್ಲಿ ಸಂಸ್ಥೆಯು ಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿದೆ ಎಂದು ಮೈಲಾಕ್ ಅಧ್ಯಕ್ಷ ಆರ್. ರಘು ಕೌಟಿಲ್ಯ ತಿಳಿಸಿದರು.
ಶನಿವಾರ ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, 1937ರಲ್ಲಿ ರಾಜಶ್ರೀ ನಾಲ್ವಾಡಿ ಕೃಷ್ಣರಾಜ ಒಡೆಯರ್  ರಿಂದ ಸ್ಥಾಪಿತವಾದ ಈ ಸಂಸ್ಥೆಗೆ ಇದೀಗ ಅಮೃತ ಮಹೋತ್ಸವ ಆಚರಣೆ ಮಾಡಿಕೊಳ್ಳುತ್ತಿದೆ.
ನವೆಂಬರ್  28ರಂದು ನಗರದ ಕಲಾಮಂದಿರದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಸಿಎಂ ಬಸವರಾಜ ಬೊಮ್ಮಾಯಿ, ಸಚಿವರಾದ ಎಸ್ ಟಿ ಸೋಮಶೇಖರ್, ಮುರುಗೇಶ್ ನಿರಾಣಿ ಹಾಗೂ ಎಸ್ ನಾಗರಾಜ್, ರಾಜವಂಶಸ್ಥೆ ಪ್ರಮೋದ ದೇವಿ ಒಡೆಯರ್ ಭಾಗಿಯಾಗಿಲಿದ್ದಾರೆ. ಇದೇ ವೇಳೆ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸಿದ ಪ್ರಮುಖರಿಗೆ, ನಿವೃತ್ತ ಅಧಿಕಾರಿ, ಸಿಬ್ಬಂದಿಗೆ ಸನ್ಮಾನ ಮಾಡಲಾಗುತ್ತದೆ ಎಂದು ತಿಳಿಸಿದರು.
Advertisements

LEAVE A REPLY

Please enter your comment!
Please enter your name here