ಕುತೂಹಲ ಕೆರಳಿಸಿದ ಯಂಗ್‌ ರೆಬೆಲ್‌ ಸ್ಟಾರ್ ಅಭಿಷೇಕ್ ನಿಶ್ಚಿತಾರ್ಥ : ಡಿ. 11ರವರೆಗೆ ಎಲ್ಲಾ ಸ್ಪೆನ್ಸ್

0
51
ರೆಬಲ್ ಸ್ಟಾರ್ ಅಂಬರೀಶ್ ಪುತ್ರ, ಸ್ಯಾಂಡಲ್ ವುಡ್‌ನ ಭರವಸೆಯ ನಟ ಅಭಿಷೇಕ್ ಅಂಬರೀಶ್ ಅವರಿಗೆ ಮದುವೆ ಫಿಕ್ಸ್‌ ಆಗಿದೆ ಎನ್ನುವುದೇ ಒಂದು ವಿಶೇಷ ಸುದ್ದಿ ಅದೊಂದು ಕ್ಯೂರಿಯಾಸಿಟಿ ಎನ್ನುತ್ತಾರೆ ಫ್ಯಾನ್ಸ್‌ಗಳು.
ರೆಬಲ್ ಸ್ಟಾರ್ ಅಂಬರೀಷ್‌ ಮದುವೆ ಎನ್ನುವ ಸುದ್ದಿಯೂ ಆ ದಿನಗಳಲ್ಲಿ ಫ್ಯಾನ್ಸ್‌ಗಳನ್ನು ಹೀಗೆ ತುದಿ ಗಾಲಿನಲ್ಲಿ ನಿಲ್ಲಿಸುತ್ತಿತ್ತು. ಅಂಬರೀಷ್‌ ಯಾವಾಗ, ಯಾರನ್ನು ಎಲ್ಲಿ ಮದುವೆ ಆಗುತ್ತಾರೆ ಎನ್ನುವ ವಿಚಾರದ ಬಗ್ಗೆ ಅಭಿಮಾನಿಗಳು ಸಿಕ್ಕಾಪಟ್ಟೆ ಮಾತನಾಡುತ್ತಿದ್ದರು. ಅಂಬರೀಷ್‌ ವಿವಾಹದ ಗಾಸಿಪ್‌ ಆಗ ರುಚಿಯಾದ ಭಕ್ಷ್ಯ ವಿದ್ದಂತೆ ಎಲ್ಲರೂ ಚಪ್ಪರಿಸುತ್ತಿದ್ದರು.

ಈಗ ಅಂಬಿ ಮತ್ತು ಸಮಲತಾ ದಂಪತಿಯ ಏಕೈಕ ಪುತ್ರ ಅಭಿಷೇಕ್ ಮದುವೆಗೆ ಸಜ್ಜಾಗಿದ್ದಾರೆ ಎನ್ನುವ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಕಳೆದ ಕೆಲವು ದಿನಗಳಿಂದ ಅಭಿಷೇಕ್ ಮದುವೆ ಸುದ್ದಿ ಹರಿದಾಡುತ್ತಿದೆ.
ಅಭಿಷೇಕ್ ನಿಶ್ಚಿತಾರ್ಥ ಸಮಾರಂಭ ಡಿಸೆಂಬರ್ ತಿಂಗಳಲ್ಲಿ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ನಲ್ಲಿ ನಡೆಯಲಿದೆ ಎನ್ನಲಾಗಿದೆ. ಡಿಸೆಂಬರ್ 11ರಂದು ಅಭಿಷೇಕ್ ನಿಶ್ಚಿತಾರ್ಥಕ್ಕೆ ಸಕಲ ಸಿದ್ಧತೆಗಳು ಆಗಿದ್ದು ಈಗಾಗಲೇ ತಯಾರಿ ನಡೆಯುತ್ತಿದೆ ಎನ್ನುವ ಮಾಹಿತಿ ತಿಳಿದು ಬಂದಿದೆ.
Advertisements

ನಿಶ್ಚಿತಾರ್ಥಕ್ಕೆ ಬೇಕಾಗಿರುವ ಎಲ್ಲ ತಯಾರಿಗಳನ್ನ ಖಾಸಗಿ ಈವೆಂಟ್ ಕಂಪನಿಗೆ ನೀಡಲಾಗಿದೆಯಂತೆ. ನಿಶ್ಚಿತಾರ್ಥದವರೆಗೂ ಹುಡುಗಿಯ ಬಗ್ಗೆ ಆಗಲಿ ಅಥವಾ ಮದುವೆ ಬಗ್ಗೆ ಆಗಲಿ ಯಾರಿಗೂ ವಿಚಾರ ತಿಳಿಯಬಾರದು ಎನ್ನುವ ಕಾರಣದಿಂದ ಹುಡುಗಿ ಹಾಗೂ ನಿಶ್ಚಿತಾರ್ಥದ ದಿನಾಂಕವನ್ನು ಗುಟ್ಟಾಗಿ ಇಟ್ಟಿದ್ದಾರಂತೆ ಸುಮಲತಾ ಅಂಬರೀಶ್.
ಇನ್ನೂ ತಮ್ಮ ಮದುವೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಭಿಷೇಕ್, ಹುಡುಗಿ ಯಾರೂ ಅಂತಾನೆ ನಂಗೆ ಗೊತ್ತಿಲ್ಲ, ಪ್ರತಿ ವರ್ಷ ನನಗೆ ಎಂಗೇಜ್ ಮೆಂಟ್ ಮಾಡಿಸ್ತೀರಾ, ನೀವು ಮಾಧ್ಯಮಗಳು ಹರಡಿಸುತ್ತಿರೋ ಸುದ್ದಿ ನಂಬಿ ಮುಂದೆ ನನಗೆ ಯಾರು ಹೆಣ್ಣು ಕೊಡೊದಿಲ್ಲ ಎಂದು ಹಾಸ್ಯ ಚಟಾಕಿ ಹಾರಿಸಿದರು. ಕಳೆದ 15 ದಿನಗಳಿಂದ ನಾನು ಸಿನಿಮಾ ಶೂಟಿಂಗ್ ನಲ್ಲಿ ಭಾಗವಹಿಸುತ್ತಿದ್ದೀನಿ,  ಇದರ ಮದ್ಯೆ ಹೇಗೆ ನಾನು ಎಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳಲಿ ಎಂದು ಪ್ರಶ್ನಿಸುವ ಮೂಲತ ತಮ್ಮ ಮದುವೆ ಸಂಬಂಧ ಹರಡಿದ ಸುದ್ದಿ ಸುಳ್ಳು ಎಂದು ಸ್ಪಷ್ಟ ಪಡಿಸಿದ್ದಾರೆ.
Advertisements

LEAVE A REPLY

Please enter your comment!
Please enter your name here