ರೇಡಿಯೇಷನ್ ನಿರೋಧಕ ಕ್ಷಿಪಣಿ: ರುದ್ರಮ್ ಖರೀದಿಗೆ ಐಎಎಫ್ ಮುಂದು:

0
49

ನವದೆಹಲಿ, ನ. 24 – ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿರುವ ಶಸ್ತ್ರಾಸ್ತ್ರ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಐಎಎಫ್ ಮಹತ್ವದ ಹೆಜ್ಜೆ ಇಟ್ಟಿದೆ.

ರುದ್ರಮ್ ಮುಂದಿನ ಪೀಳಿಗೆಯ ಗಳನ್ನು (ಎನ್ ಜಿಎಆರ್ ಎಂ) ಖರೀದಿಸುವುದಕ್ಕೆ 1,400 ಕೋಟಿ ರೂಪಾಯಿ ಪ್ರಸ್ತಾವನೆಯನ್ನು ಮುಂದಿಟ್ಟಿದೆ.

ಈ ಕ್ಷಿಪಣಿಗಳಿಂದಾಗಿ ಶತ್ರು ರಾಷ್ಟ್ರಗಳ ಲೊಕೇಷನ್ ನ್ನು ಶೋಧಿಸಿರೇಡಿಯೇಷನ್ ನಿರೋಧಕ ಕ್ಷಿಪಣಿ ನಾಶ ಮಾಡಬಹುದಾಗಿದೆ.ಸುಧಾರಿತ ಕ್ಷಿಪಣಿಗಳನ್ನು ಖರೀದಿಸುವ ಪ್ರಸ್ತಾವನೆ ರಕ್ಷಣಾ ಸಚಿವಾಲಯದ ಬಳಿ ಇದ್ದು, ಈ ಸಂಬಂಧ ಶೀಘ್ರವೇ ಉನ್ನತ ಮಟ್ಟದ ಸಭೆ ನಡೆಯಲಿದೆ ಎಂದು ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.

ಐಎಎಫ್ ಈಗಾಗಲೇ ಈ ಕ್ಷಿಪಣಿಗಳನ್ನು ಪರೀಕ್ಷಾರ್ಥವಾಗಿ ಪ್ರಯೋಗಿಸಿದ್ದು, ನಿರೀಕ್ಷಿತ ಫಲಿತಾಂಶ ನೀಡಿದೆ. ಎನ್ ಜಿಎಆರ್ ಎಂ ಸುಖೋಯ್-30 ಹಾಗೂ ಮಿರಾಜ್-2000 ಮಾದರಿಯ ಐಎಎಫ್ ಫೈಟರ್ ಗಳಿಂದ ಉಡಾವಣೆ ಮಾಡಬಹುದಾಗಿರುವ ಉಪಕರಣವಾಗಿದೆ. ಕಾರ್ಯಾಚರಣೆಯಲ್ಲಿಲ್ಲದ ರಡಾರ್ ವ್ಯವಸ್ಥೆಯನ್ನೂ ಪತ್ತೆ ಮಾಡುವ ಸಾಮರ್ಥ್ಯ ಈ ಕ್ಷಿಪಣಿಗಳಿಗಿದೆ.

LEAVE A REPLY

Please enter your comment!
Please enter your name here