ಟಿಪ್ಪು ನಿಜ ಕನಸುಗಳು ಪುಸ್ತಕದಲ್ಲಿ 99 ಭಾಗ ಸುಳ್ಳೇ ಇದೆ- ಎಚ್. ಜನಾರ್ಧನ್(ಜನ್ನಿ)

0
118

ಮೈಸೂರು,ನ. 24 – ಟಿಪ್ಪು ನಿಜಕನಸುಗಳು ಪುಸ್ತಕವನ್ನು ನಾನು ಓದಿದ್ದೇ‌ನೆ. ನಾಟಕ ನೋಡಿಲ್ಲ. ಪುಸ್ತಕದಲ್ಲಿ ನೂರಕ್ಕೆ 99 .99 ಭಾಗ ಸುಳ್ಳೇ ಇದೆ ಎಂದು  ಮಾಜಿ ರಂಗಾಯಣ ನಿರ್ದೇಶಕ ಜನಾರ್ಧನ್ (ಜನ್ನಿ)  ತಿಳಿಸಿದರು.

ಮೈಸೂರಿನ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜನಾರ್ಧನ್,  ರಂಗಾಯಣ ಮಲೀನವಾದ ನಂತರ ನಾನು ಅಲ್ಲಿಂದ ದೂರವಾದೆ. ಅಂದಿನಿಂದ ಇಲ್ಲಿಯವರೆಗೂ ನಾನು ಅಲ್ಲಿಗೆ ಕಾಲು ಹಾಕಿಲ್ಲ. ಒಂದು ನಾಟಕ ನೋಟಲು ಪೋಲಿಸ್ ಭದ್ರತೆಯೊಂದಿಗೆ ಪ್ರೇಕ್ಷಕರನ್ನು ಒಳಗಡೆ ಬಿಟ್ಟು ನಡೆಸುವಂತ ಅವಶ್ಯಕತೆ ಇರಲಿಲ್ಲ. ಇಂಥಾ ಪರಿಸ್ಥಿತಿ ರಂಗಭೂಮಿಯ ಇತಿಹಾಸದಲ್ಲಿ ಎಲ್ಲೂ ನಡೆದಿಲ್ಲ. ಇಂಥಾ ಘಟನೆಗಳಿಂದ ರಂಗಭೂಮಿಗೆ ಭಾರಿ ಹೊಡೆತ ಬಿದ್ದಿದೆ ಎಂದರು.

ನಾನು ರಂಗಭೂಮಿ ನಿರ್ದೇಶಕನಾಗಿದ್ದಾಗ ಪೋಲಿಸರನ್ನ ಪ್ರೇಕ್ಷಕರಾಗಿ ಬನ್ನಿ ರಕ್ಷಣೆ ಕೊಡುವ ದೃಷ್ಟಿಯಿಂದ ಬರಬೇಡಿ ಎನ್ನುತ್ತಿದ್ದೆ. ಈಗ ರಂಗಾಯಣವನ್ನ ಈ ಪರಿಸ್ಥಿತಿಗೆ ತಂದು ನಿಲ್ಲಿಸಿದ್ದಾರೆ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ನಡೆಗೆ ಜನಾರ್ದನ್ ಅಸಮಧಾನ ವ್ಯಕ್ತಪಡಿಸಿದರು.

Advertisements

LEAVE A REPLY

Please enter your comment!
Please enter your name here