ನಂದಿನ ಹಾಲು, ಮೊಸರಿನ ದರ ಲೀಟರ್ ಗೆ ತಲಾ 2 ರೂ, ಹೆಚ್ಚಳ: ಕೆಎಂಎಫ್ ಆದೇಶ

0
42

ಬೆಂಗಳೂರು. ನ. 23 – ನಂದಿನ ಹಾಲು ಮತ್ತು ಮೊಸರಿನ ದರ ಲೀಟರ್ ಗೆ ತಲಾ 2 ರೂಪಾಯಿ ಹೆಚ್ಚಳ ಮಾಡಿ ಕೆಎಂಎಫ್ ಆದೇಶ ಹೊರಡಿಸಿದೆ.

Advertisements

ಹಾಲು, ಮೊಸರಿನ ಪರಿಷ್ಕೃತ ದರ ಇಂದು ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ. ಟೋನ್ಡ್ ಹಾಲಿನ ದರ 37 ರಿಂದ 39 ರುಪಾಯಿಗೆ ಹೆಚ್ಚಳ ಮಾಡಲಾಗಿದೆ. ಇನ್ನು ಸ್ಪೆಷಲ್ ಹಾಲಿನ ದರ 43 ರಿಂದ 45 ರೂಪಾಯಿಗೆ, ಸಮೃದ್ಧಿ ಹಾಲಿನ ದರ 48 ರಿಂದ 50 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ.

ಹೋಮೋಜಿನೈಸ್ಡ್ ಹಾಲು 38 ರೂ. ರಿಂದ 40 ರೂ.ಗೆ ಏರಿಕೆ. ಹೊಮೊಜಿನೈಸ್ಡ್ ಹಸುವಿನ ಹಾಲು 42 ರೂ. ರಿಂದ 44 ರೂ.ಗೆ ಏರಿಕೆ. ಶುಭಂ ಹಾಲು 43 ರೂ. ರಿಂದ 45 ರೂ.ಗೆ ಏರಿಕೆ. ಹೊಮೊಜಿನೈಸ್ಡ್ ಸ್ಟ್ಯಾಂಡಡೈಸ್ಡರ್ ಹಾಲು 44 ರೂ. ರಿಂದ 46 ರೂ.ಗೆ ಏರಿಕೆ. ಸಂತೃಪ್ತಿ ಹಾಲು 50 ರೂ. ರಿಂದ 52 ರೂ.ಗೆ ಏರಿಕೆ. ಡಬಲ್ ಟೋನ್ಡ್ ಹಾಲು 36 ರೂ. ರಿಂದ 38 ರೂ.ಗೆ ಏರಿಕೆಯಾಗಿದೆ.

ಇನ್ನು ಮೊಸರಿನ ದರವನ್ನು ಲೀಟರ್ ಗೆ 45 ರಿಂದ 47 ರೂಪಾಯಿಗೆ ಏರಿಕೆ ಮಾಡಲಾಗಿದೆ.

ರೈತರಿಗೆ ಪ್ರೋತ್ಸಾಹದನವಾಗಿ ನೀಡುವ ಸಲುವಾಗಿ ದರ ಏರಿಕೆ ಮಾಡುತ್ತಿರುವುದಾಗಿ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.

Advertisements

LEAVE A REPLY

Please enter your comment!
Please enter your name here