ಹುಟ್ಟುಹಬ್ಬದಂದು ಹುಟ್ಟು ಉಡುಗೆಯಲ್ಲಿ ಕಡಲ ತೀರದಲ್ಲಿ ಓಡಿದ್ದ ಮಿಲಿಂದ್ ಸೋಮನ್ ವಿರುದ್ಧ ಪ್ರಕರಣ ದಾಖಲು

0
56

ಪಣಜಿ,ನ.7 – ಹುಟ್ಟುಹಬ್ಬದ ದಿನದಂದು ಕಡಲ ತೀರದಲ್ಲಿ ನಗ್ನವಾಗಿ ಓಡಿದ್ದ ನಟ ಹಾಗೂ ಮಾಡೆಲ್ ಮಿಲಿಂದ್ ಸೋಮನ್ ವಿರುದ್ಧ ಪ್ರಕರಣ ದಾಖಲಾಗಿದೆ.

ಗೋವಾದ ಬೀಚ್‌ನಲ್ಲಿ ಅರೆನಗ್ನ ಸ್ಥಿತಿಯಲ್ಲಿ ಶೂಟಿಂಗ್ ಮಾಡಿದ ನಟಿ ಪೂನಂ ಪಾಂಡೆಯವರನ್ನು ಬಂಧನಕ್ಕೊಳಪಡಿಸಲಾಗಿತ್ತು. ಆದರೆ, ಬೀಚ್ ನಲ್ಲಿ ನಗ್ನವಾಗಿ ಓಡಿದ್ದ ಮಿಲಿಂದ ಸೋಮನ್ ವಿರುದ್ಧ ಯಾವುದೇ ಪ್ರಕರಣಗಳನ್ನೂ ದಾಖಲಿಸಲಾಗಿರಲಿಲ್ಲ.

ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಹಲವು ಪ್ರಶ್ನೆ ಮಾಡಿದ್ದರು. ಪೂನಂ ಪಾಂಡೆ ಬಂಧನವೇನೋ ಸರಿ. ಆದರೆ ಗೋವಾ ಬೀಚ್ ನಲ್ಲಿ ತನ್ನ ಹುಟ್ಟು ಹಬ್ಬದ ದಿನ ಬೆತ್ತಲೆಯಾಗಿ ಓಡಿದ ನಟ ಹಾಗೂ ಮಾಡೆಲ್ ಮಿಲಿಂದ್ ಸೋಮನ್ ಅವರನ್ನು ಏಕೆ ಬಂಧಿಸಲಿಲ್ಲ. ಪುರುಷರಿಗೊಂದು ಕಾನೂನು, ಮಹಿಳೆಯರಿಗೊಂದು ಕಾನೂನು ಏಕೆ? ಎಂದು ಪ್ರಶ್ನಿಸಿದ್ದರು. ಇದರ ಬೆನ್ನಲ್ಲೇ ಇದೀಗ ಮಿಲಿಂದ್ ಅವರ ವಿರುದ್ಧವೂ ಪ್ರಕರಣ ದಾಖಲಾಗಿದೆ.

ರಾಜಕೀಯ ಸಂಘಟನೆಯಾದ ಗೋವಾ ಸುರಕ್ಷ ಮಂಚ್ (ಜಿಎಸ್ಎಂ) ಈ ಸಂಬಂಧ ದೂರು ನೀಡಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಗೋವಾ ಪೊಲೀಸರು ಹೇಳಿದ್ದಾರೆ.

ಸೋಮನ್ ವಿರುದ್ಧ ಐಪಿಸಿ ಸೆಕ್|ನ್ 294 (ಸಾರ್ವಜನಿಕ ಪ್ರದೇಶಗಳಲ್ಲಿ ಅಶ್ಲೀಲ ವರ್ತನೆ) ಮತ್ತು ಸೆಕ್ಷನ್ 67 ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ದಕ್ಷಿಣ) ಪಂಕಜ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here