* ನಿನ್ನೆಯಷ್ಟೇ ಸಿಎಂ ಬಿಎಸ್‍ವೈ ದೀಪಾವಳಿಗೆ ಪಟಾಕಿ ನಿಷೇಧ ಎಂದು ಘೋಷಿಸಿದ್ದರು.
* ಶೇ30ರಿಂದ ಶೇ40ರಷ್ಟು ಪರಿಸರ ಮಾಲೀನ್ಯ ಮಾಡುವ ಪಾಕಿಗೆ ಸರ್ಕಾರ ಹಸಿರು ನಿಷಾನೆ.
* ದೀಪಾವಳಿ ಹಬ್ಬದ ಹೊತ್ತಿಗೆ ಸರ್ಕಾರ ಇನ್ನೇನು ಆದೇಶ ಮಾಡುತ್ತದೋ ಕಾದು ನೋಡೋಣ.
ಬೆಂಗಳೂರು,ನ.7 – ಕೊರೋನಾ ಹರಡದಂತೆ ತಡೆಗಟ್ಟಲು ಹಲವು ಕ್ರಮಗಳನ್ನ ಕೈಗೊಳ್ಳುತ್ತಿರುವ ರಾಜ್ಯ ಸರ್ಕಾರ ದೀಪಾವಳಿಹಬ್ಬದಲ್ಲಿ ಪಟಾಕಿ ಸಿಡಿಸಲು ಮತ್ತು ಮಾರಾಟ ಮಾಡುವುದಕ್ಕೆ ನಿಷೇಧ ಹೇರಿದೆ.
ಈ ನಡುವೆ ದೀಪಾವಳಿ ಹಬ್ಬ ಆಚರಣೆಗೆ ರಾಜ್ಯ ಸರ್ಕಾರದಿಂದ ಅಧಿಕೃತವಾಗಿ ಮಾರ್ಗಸೂಚಿ ಬಿಡುಗಡೆಯಾಗಿದೆ. ಅದರಂತೆ ದೀಪಾವಳಿ ಹಬ್ಬದಲ್ಲಿ ಹಸಿರು ಪಟಾಕಿ ಮಾರಾಟ ಮಾಡಲು ಮಾತ್ರ ಅವಕಾಶ ನೀಡಲಾಗಿದೆ. ಲೈಸೆನ್ಸ್ ಹೊಂದಿರುವವರು ಮಾತ್ರ ನಿಗದಿತ ದಿನದಂದು ನಿಗದಿತ ಸ್ಥಳದಲ್ಲಿ ಮಾತ್ರ ಪಟಾಕಿ ಮಾರಲು ಅವಕಾಶ ನೀಡಿದೆ.
ನವೆಂಬರ್ 7ರಿಂದ 16ರವರೆಗೆ 9 ದಿನಗಳವರೆಗೆ ಮಾತ್ರ ಹಸಿರು ಪಟಾಕಿ ಮಳಿಗೆ ತೆರೆಯಲು ಅವಕಾಶ ನೀಡಿದೆ. ಸ್ಯಾನಿಟೈಸರ್ ಥರ್ಮಲ್ ಸ್ಕ್ರೀನಿಂಗ್ ಮಾಡುವುದು, ಸರ್ಕಾರದ ಮಾರ್ಗಸೂಚಿ ಪಾಲಿಸುವುದು ಕಡ್ಡಾಯ. ಸರ್ಕಾರದ ಗೈಡ್ ಲೈನ್ಸ್ ಉಲ್ಲಂಘಿಸಿದೇ ಕ್ರಮ ಕೈಗೊಳ್ಳುವುದಾಗಿ ಸರ್ಕಾರ ತಿಳಿಸಿದೆ.