ಇಸ್ರೇಲ್ ಭರ್ಜರಿ ಬೇಟೆ: ಅ.7ರ ದಾಳಿಯ ರೂವಾರಿ ಹಮಾಸ್ ಕಮಾಂಡರ್ ಮಿಲಿಟರಿ ಕಾರ್ಯಾಚರಣೆಯಲ್ಲಿ ಹತ

0
21

ಟೆಲ್ ಅವೀವ್, ಅ. 31 – ಹಮಾಸ್ ಉಗ್ರ ಸಂಘಟನೆಯನ್ನು ಕಿತ್ತೊಗೆಯುವ ಶಪತ ಮಾಡಿರುವ ಇಸ್ರೇಲ್ ಸೇನೆ ಗಾಜಾ ಪಟ್ಟಿ ಮೇಲೆ ಮಿಲಿಟರಿ ಕಾರ್ಯಾಚರಣೆ ನಡೆಸುತ್ತಿದೆ. ಅದರಂತೆ ಗಾಜಾಪಟ್ಟಿಯೊಳಗೆ ನುಗ್ಗಿರುವ ಐಡಿಎಫ್ ಸಾಮಾಜಿಕ ಪೋಸ್ಟ್‌ನಲ್ಲಿ ಹಮಾಸ್ ಭಯೋತ್ಪಾದಕನ ಹತ್ಯೆ ಮಾಡಲಾಗಿದ್ದು ಆತನ ಹೆಸರು ಮತ್ತು ಫೋಟೋವನ್ನು ಹಂಚಿಕೊಂಡಿದೆ.

ಗುಪ್ತಚರ ಆಧಾರದ  ಯುದ್ಧ ವಿಮಾನಗಳು ಉಗ್ರರ ಅಡಗುತಾಣದ ಮೇಲೆ ದಾಳಿ ಮಾಡುತ್ತಿದೆ. ಈ ದಾಳಿಯಲ್ಲಿ ಉತ್ತರ ವಿಭಾಗದ ಬೀಟ್ ಲಾಹಿಯಾ ಬೆಟಾಲಿಯನ್‌ನ ನಸೀಮ್ ಅಬು ಅಜಿನಾ ಹತ್ಯೆಯಾಗಿದ್ದಾನೆ ಎಂದು ಹೇಳಲಾಗುತ್ತದೆ.

ಕಮಾಂಡರ್ ನಸೀಮ್ ಹತ್ಯೆ
ಹತ್ಯೆಗೀಡಾದ ಭಯೋತ್ಪಾದಕ ಹಮಾಸ್‌ನ ಹಿರಿಯ ಕಮಾಂಡರ್ ಎಂದು ಇಸ್ರೇಲಿ ರಕ್ಷಣಾ ಪಡೆ ಹೇಳಿಕೊಂಡಿದೆ. ಕಿಬ್ಬುಟ್ಜ್ ಸೇರಿದಂತೆ ಮೋಶವ್ ನೆಟೀವ್ ಹಠಾರಾ ದಾಳಿಯಲ್ಲಿ ಪ್ರಮುಖ ಪಾತ್ರವಹಿಸಿದ್ದನು. IDF ವಕ್ತಾರ ಡೇನಿಯಲ್ ಹಗರಿ ಅವರು, ಅಮ್ಮನ್ ಮತ್ತು ಶಿನ್ ಬೇಟ್ ನ ಗುಪ್ತಚರ ಆಧಾರದ ಮೇಲೆ, ಕಳೆದ ರಾತ್ರಿ ಹಮಾಸ್ ನ ಉತ್ತರ ವಿಭಾಗದ ಕಮಾಂಡರ್ ನಸ್ಸಿಮ್ ಅಬು ಅಜಿನಾ ನನ್ನು ಹತ್ಯೆ ಮಾಡಲಾಗಿದೆ ಎಂದು ಬರೆದುಕೊಂಡಿದ್ದಾರೆ. ಅಕ್ಟೋಬರ್ 7ರಂದು ಕಿಬ್ಬುಟ್ಜ್, ಎರೆಜ್ ಮತ್ತು ಮೋಶವ್ ನೆಟೀವ್ ಹತಾರಾ ಮೇಲೆ ದಾಳಿ ನಡೆಸುವಲ್ಲಿ ನಸೀಮ್ ಸೇರಿದಂತೆ ಅನೇಕ ಭಯೋತ್ಪಾದಕರು ಭಾಗಿಯಾಗಿದ್ದರು.

ದಿ ಜೆರುಸಲೆಮ್ ಪೋಸ್ಟ್ ಪ್ರಕಾರ, ನಸೀಮ್ ವೈಮಾನಿಕ ದಾಳಿ ನಡೆಸುವಲ್ಲಿ ಪರಿಣತನಾಗಿದ್ದನು. ಹಮಾಸ್‌ನ ಮಾನವರಹಿತ ವೈಮಾನಿಕ ವಾಹನ ಮತ್ತು ಡ್ರೋನ್ ಅಭಿವೃದ್ಧಿಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದನು. ನಸೀಮ್‌ನ ಹತ್ಯೆ ಮೂಲಕ IDF ಹಮಾಸ್‌ಗೆ ದೊಡ್ಡ ಹೊಡೆತವನ್ನು ನೀಡಿದೆ

ಇಸ್ರೇಲ್-ಹಮಾಸ್ ಯುದ್ಧದಲ್ಲಿ 8000 ಮಂದಿ ಸಾವು
ಅಕ್ಟೋಬರ್ 7ರಂದು, ಹಮಾಸ್ ಭಯೋತ್ಪಾದಕರು ದಕ್ಷಿಣ ಇಸ್ರೇಲ್ನಲ್ಲಿ ಗಾಳಿ, ನೀರು ಮತ್ತು ಭೂಮಿಯಿಂದ ನಿರಾಯುಧ ಇಸ್ರೇಲಿಗಳ ಮೇಲೆ ದಾಳಿ ಮಾಡಿದ್ದರು. ನಂತರ ಇಸ್ರೇಲ್ ಪ್ರತಿದಾಳಿಗೆ ಮುಂದಾಗಿದ್ದು ಅಂದಿನಿಂದ ಅಕ್ಟೋಬರ್ 31ರ ನಡುವೆ, ಇಸ್ರೇಲ್ ಮತ್ತು ಗಾಜಾದಲ್ಲಿ 8,000ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಅವರಲ್ಲಿ ಹೆಚ್ಚಿನವರು ಸಾಮಾನ್ಯರಾಗಿದ್ದಾರೆ

LEAVE A REPLY

Please enter your comment!
Please enter your name here