ವಾಟ್ಸಪ್ ಗೆ ಚಾಲೆಂಜ್: ಅತ್ಯಂತ ಸುರಕ್ಷಿತ ಮೆಸೇಜಿಂಗ್ ಆ್ಯಪ್ ಅಭಿವೃದ್ಧಿ ಪಡಿಸಿದ ಭಾರತೀಯ ಸೇನೆ

0
110

ನವದೆಹಲಿ: ದೇಶದಲ್ಲಿ ಸೈಬರ್ ಅಪರಾಧಗಳನ್ನು ತಗ್ಗಿಸುವ ದೃಷ್ಟಿಕೋನದಿಂದ ಮತ್ತು ಗ್ರಾಹಕರ ಸುರಕ್ಷತೆಯ ದೃಷ್ಟಿಯಿಂದ ಭಾರತೀಯ ಅತ್ಯಂತ ಸುರಕ್ಷಿತ ಮೆಸೇಜಿಂಗ್ ಆ್ಯಪ್ ಅನ್ನು ಅಭಿವೃದ್ಧಿ ಪಡಿಸಿದೆ.

ಹೌದು..ಪ್ರಧಾನಿ ಮೋದಿ ಅವರ ಕನಸಿನ ಯೋಜನೆಗಳಲ್ಲಿ ಒಂದಾದ ‘ಆತ್ಮನಿರ್ಭಾರ ಭಾರತ್’ ಅನ್ವೇಷಣೆಯಲ್ಲಿ ಭಾರತೀಯ ಸೇನೆಯು ಆಂಡ್ರಾಯ್ಡ್ ಪ್ಲಾಟ್‌ಫಾರ್ಮ್‌ಗಾಗಿ ಸುರಕ್ಷಿತ ಧ್ವನಿ, ಪಠ್ಯ ಮತ್ತು ವಿಡಿಯೋ ಕರೆ ಸೇವೆಗಳನ್ನು ಬೆಂಬಲಿಸುವ ವಿಶೇಷ ಆ್ಯಪ್ ವೊಂದನ್ನು ಅಭಿವೃದ್ಧಿ ಪಡಿಸಿದೆ. ಈ ಆ್ಯಪ್ ಗೆ  Secure Application for the Internet (SAI) ಸಾಯಿ ಎಂದು ಹೆಸರಿಡಲಾಗಿದೆ.

ಈ ಬಗ್ಗೆ ಗುರುವಾರ ಕೇಂದ್ರ ರಕ್ಷಣಾ ಸಚಿವಾಲಯ ಮಾಹಿತಿ ನೀಡಿದ್ದು, ವಾಟ್ಸಾಪ್, ಟೆಲಿಗ್ರಾಮ್, ಸ್ಯಾಮ್ವಾಡ್ ಮತ್ತು ಜಿಮ್ಸ್ ನಂತಹ ಮೆಸೇಜಿಂಗ್ ಆ್ಯಪ್ ಗಳ ರೀತಿಯಲ್ಲೇ ಈ ಸಾಯಿ ಕೂಡ ಕಾರ್ಯ ನಿರ್ವಹಿಸಲಿದೆ. ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಮೆಸೇಜಿಂಗ್ ಪ್ರೊಟೊಕಾಲ್ ಅನ್ನು ಬಳಕೆ ಮಾಡುವುದರಿಂದ  ಇದರಲ್ಲಿನ ಎಲ್ಲ ರೀತಿಯ ದತ್ತಾಂಶಗಳು ಸಂಪೂರ್ಣ ಸುರಕ್ಷಿತವಾಗಿರುತ್ತದೆ. ಸ್ಥಳೀಯ ಆಂತರಿಕ ಸರ್ವರ್‌ಗಳು ಮತ್ತು ಕೋಡಿಂಗ್‌ನೊಂದಿಗೆ ಸುರಕ್ಷತಾ ವೈಶಿಷ್ಟ್ಯಗಳ ಮೇಲೆ ಸಾಯಿ ಕಾರ್ಯನಿರ್ವಹಿಸಲಿದೆ. ಈ ವಿಶಿಷ್ಟ ಆ್ಯಪ್ ಅನ್ನು  ಸಿಇಆರ್ಟಿ-ಇನ್ ಎಂಪಾನಲ್ಡ್ ಆಡಿಟರ್ ಮತ್ತು ಆರ್ಮಿ ಸೈಬರ್ ಗ್ರೂಪ್  ಪರಿಶೀಲಿಸಿದೆ ಎಂದು ಹೇಳಿರುವ ರಕ್ಷಣಾ ಸಚಿವಾಲಯ ಶೀಘ್ರದಲ್ಲೇ ಈ ಆ್ಯಪ್ ನ ಐಒಎಸ್ ಅವತರಣಿಕೆಯನ್ನು ಕೂಡ ಬಿಡುಗಡೆ ಮಾಡಲಾಗುತ್ತದೆ. ಈ ಸಂಬಂಧ ಪ್ರಕ್ರಿಯೆಗಳು ಚಾಲ್ತಿಯಲ್ಲಿವೆ ಎಂದು ಹೇಳಿದೆ.

“ಸೇವೆಯೊಳಗೆ ಸುರಕ್ಷಿತ ಸಂದೇಶ ಕಳುಹಿಸಲು ಅನುಕೂಲವಾಗುವಂತೆ ಸಾಯಿ ಆ್ಯಪ್ ಅನ್ನು ಅಭಿವೃದ್ಧಿಪಡಿಸಲಾಗಿದ್ದು, ಆ್ಯಪ್ ನ ಕಾರ್ಯಾಚರಣೆ ಪರಿಶೀಲಿಸಿದ ರಕ್ಷಣಾ ಸಚಿವರು ಮತ್ತು ಕರ್ನಲ್ ಸಾಯಿ ಶಂಕರ್ ಅವರು ಆ್ಯಪ್ ನಿರ್ಮಾಣ ತಂಡವನ್ನ ಅಭಿನಂದಿಸಿದ್ದಾರೆ

LEAVE A REPLY

Please enter your comment!
Please enter your name here