`ವೆಡ್ಡಿಂಗ್ ಗಿಫ್ಟ್’ ನೀಡಲಿದ್ದಾರೆ ವಿಕ್ರಂಪ್ರಭು: ವಿಶೇಷ ಪಾತ್ರದಲ್ಲಿ ಓಂ ಖ್ಯಾತಿಯ ಪ್ರೇಮ ಅಭಿನಯ

0
30

* ವಿಭಿನ್ನ ಕಥಾಹಂದರದ ಈ ಚಿತ್ರಕ್ಕೆ ನಿಶಾನ್ ನಾಣಯ್ಯ ನಾಯಕ. ಸೋನು ಗೌಡ ನಾಯಕಿ. ವಿಶೇಷ ಪಾತ್ರದಲ್ಲಿ ಓಂ ಖ್ಯಾತಿಯ ಪ್ರೇಮ ಅಭಿನಯ.

ವಿಕ್ರಂಪ್ರಭು ನಿರ್ಮಿಸಿ, ನಿರ್ದೇಶಿಸುತ್ತಿರುವ “ವೆಡ್ಡಿಂಗ್ ಗಿಫ್ಟ್” ಚಿತ್ರದ ಚಿತ್ರೀಕರಣ ನವೆಂಬರ್ 15 ರಿಂದ ಆರಂಭವಾಗಲಿದೆ. ಬೆಂಗಳೂರು, ಉಡುಪಿ, ಮಂಗಳೂರು, ಮೈಸೂರು ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ.
ನಿಶಾನ್ ನಾಣಯ್ಯ ಈ ಚಿತ್ರದ ನಾಯಕನಾಗಿ ನಟಿಸುತ್ತಿದ್ದು, ಸೋನು ಗೌಡ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ವಿಶೇಷ ಪಾತ್ರದಲ್ಲಿ ಪ್ರೇಮ(ಓಂ ಖ್ಯಾತಿ) ಕಾಣಿಸಿಕೊಳ್ಳಲಿದ್ದಾರೆ. ಪವಿತ್ರ ಲೋಕೇಶ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಈ ಚಿತ್ರದ ಸಲುವಾಗಿ ನಿಶಾನ್ ನಾಣಯ್ಯ, ಸೋನು ಗೌಡ ಹಾಗೂ ಪ್ರೇಮ ಅವರ ಫೋಟೊ ಶೂಟ್ ಅದ್ದೂರಿಯಾಗಿ ನಡೆಯಿತು.
ಇಪ್ಪತ್ತು ವರ್ಷಗಳಿಂದ ಸೇಲ್ಸ್ ಹಾಗೂ ಸ್ಟಾಕ್ ಮಾರ್ಕೆಟಿಂಗ್ ನಲ್ಲಿ ಅನುಭವ‌ ಹೊಂದಿರುವ ನಿರ್ದೇಶಕ ವಿಕ್ರಂಪ್ರಭು ಮೂಲತಃ ಮಂಗಳೂರಿನವರು. ಈಗ ಪುಣೆಯಲ್ಲಿ ವಾಸ. ಕಾನ್ಫಿಡದಲ್ಲಿ ನಿರ್ದೇಶನ ತರಭೇತಿ ಹಾಗೂ ZIMA ದಲ್ಲಿ ಸಂಕಲನ ಕಾರ್ಯದ ಬಗ್ಗೆ ತಿಳಿದುಕೊಂಡಿರುವ ಅವರು,  ಹಿರಿಯ ನಿರ್ದೇಶಕ ಎಸ್ ವಿ ರಾಜೇಂದ್ರಸಿಂಗ್ ಬಾಬು ಅವರ ಬಳಿ ಕಾರ್ಯ ನಿರ್ವಹಿಸಿದ್ದಾರೆ.
ಈ ಚಿತ್ರಕ್ಕೆ ನಿರ್ದೇಶಕರು, ಕಥೆ ಬರೆದಿದ್ದು, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಸಂಜಯ್ ಶರ್ಮ, ಅಭಯ್ ದೇವ್ ಪುರಿ, ಅಶೀಶ್ ಪಾವಸ್ಕರ್ ಬರೆದಿದ್ದಾರೆ. ಸತೀಶ್ ಹೆಚ್ ವಿ ಹಾಗೂ ಆಂಟೋನಿ ಎಮ್ ಈ ಚಿತ್ರದ ಸಹ ನಿರ್ದೇಶಕರು.
ಮೂರು ಹಾಡುಗಳಿದ್ದು, ಬಾಲಚಂದ್ರ ಪ್ರಭು ಸಂಗೀತ ನೀಡಲಿದ್ದಾರೆ. ಖ್ಯಾತ ಸಾಹಿತಿ ಜಯಂತ ಕಾಯ್ಕಿಣಿ ಅವರ ಗೀತರಚನೆ ಹಾಗೂ ಉದಯಲೀಲ ಅವರ ಛಾಯಾಗ್ರಹಣ “ವೆಡ್ಡಿಂಗ್ ಗಿಫ್ಟ್” ಚಿತ್ರಕ್ಕಿರಲಿದೆ.

LEAVE A REPLY

Please enter your comment!
Please enter your name here