ಕೊಡಗು ಪೋಲೀಸ್‌ ಶ್ವಾನ ದಳದ ರ್ಯಾಂಬೋ ಗೆ ಗೌರವ ಪೂರ್ಣ ನಮನ!

0
40
ಮಡಿಕೇರಿ,ಅ.8-  ಜಿಲ್ಲಾ ಪೋಲೀಸ್‌ ಶ್ವಾನ ದಳದ   ರ್ಯಾಂಬೋ ಎಂಬ ಹೆಸರಿನ ೭ ವರ್ಷದ ಶ್ವಾನ  ಇಂದು ಹೃದಯಾಘಾತದಿಂದ ಮೃತಪಟ್ಟಿದೆ. ಈ ಶ್ವಾನವು  ಕೊಡಗು ಪೋಲೀಸ್‌ ಇಲಾಖೆಯ ಶ್ವಾನ ದಳದ  ನಾಲ್ಕು ಶ್ವಾನಗಳಲ್ಲಿ  ಒಂದಾಗಿದ್ದು  ಕಳೆದ ಕೆಲ ದಿನಗಳಿಂದ ಅಸ್ವಸ್ಥಗೊಂಡಿತ್ತು ಎನ್ನಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿದ  ಡಿಏಆರ್‌ ಇನ್ಸ್‌ಪೆಕ್ಟರ್‌ ರಾಚಯ್ಯ ಅವರು  ರ್ಯಾಂಬೋ ಸುಮಾರು ನಾನ್ನೂರಕ್ಕೂ ಹೆಚ್ಚಿನ ತಪಾಸಣೆ , ತನಿಖೆ ಕಾರ್ಯದಲ್ಲಿ ಕೆಲಸ ಮಾಡಿತ್ತು ಎಂದು ಹೇಳಿದರು. ಚುರುಕಾಗಿದ್ದ ಈ ನಾಯಿಯು  ವಿಐಪಿ ಭದ್ರತೆ, ಸ್ಪೋಟಕ ತಪಾಸಣೆ, ಬಂದೋಬಸ್ತ್‌ , ಕಳ್ಳತನ , ಕೊಲೆ ತನಿಖೆ ಕಾರ್ಯದಲ್ಲಿ  ಪೋಲೀಸರ ಒಡನಾಡಿ ಆಗಿತ್ತು. ಇದನ್ನು ಮೊದಲಿನಿಂದಲೂ  ಹ್ಯಾಂಡ್ಲರ್‌ ಸುಕುಮಾರ್‌ ಅವರು ನೋಡಿಕೊಳ್ಳುತಿದ್ದು  ಶ್ವಾನದ ಅಕಾಲಿಕ ಸಾವಿಗೆ ಕಂಬನಿ ಮಿಡಿದಿದ್ದಾರೆ.
 ಜಿಲ್ಲಾ ಸಶಸ್ತ್ರದಳದ ಆವರಣದಲ್ಲಿ ಇಂದು ಶ್ವಾನದ ಪಾರ್ಥಿವ ಶರೀರಕ್ಕೆ ಇಲಾಖೆ ಅಧಿಕಾರಿಗಳಿಂದ ಪುಷ್ಪಗುಚ್ಛವನ್ನು ಇರಿಸಿ ಇಲಾಖಾ ಗೌರವಗಳೊಂದಿಗೆ ಅಂತಿಮ ನಮನ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ  ಜಿಲ್ಲಾ ಪೊಲೀಸ್ ಅಧಿಕಾರಿ ಕ್ಷಮಾ ಮಿಶ್ರ  ಮತ್ತು ಸಿಬ್ಬಂದಿಯವರು ಪಾಲ್ಗೊಂಡಿದ್ದರು.
Advertisements

LEAVE A REPLY

Please enter your comment!
Please enter your name here