ಮೈಸೂರು,ಅ.7- ವಿಶ್ವ ವಿಖ್ಯಾತ ಮೈಸೂರು ದಸರಾ ಮುಗಿದ ಮಾರನೆ ದಿನವೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ತಡರಾತ್ರಿ ಯುವಕನ ಭೀಕರ ಕೊಲೆಯಾಗಿದೆ. ಗುಜರಿ ಬಳಿ ಯುವಕನನ್ನು ಕರೆಸಿಕೊಂಡು ಸ್ನೇಹಿತ ಈ ಕೃತ್ಯ ಎಸಗಿದ್ದಾನೆ. ನಿನ್ನೆ ತಡರಾತ್ರಿ ಲಷ್ಕರ್ ಪೊಲೀಸ್ ಠಾಣಾ ವ್ಯಾಪ್ತಿಯ ಗುಜರಿ ಬಳಿ ಯುವಕನ ಭೀಕರ ಕೊಲೆ ನಡೆದಿದೆ. ಸ್ನೇಹಿತನ ಮೂಲಕ ಕರೆಸಿಕೊಂಡ ಕೊಲೆಗಡುಕರು ಗುಜರಿ ಬಳಿ ಅಟ್ಯಾಕ್ ಮಾಡಿ ಚಾಕುವಿನಿಂದ ಇರಿದು ಕೊಂದಿದ್ದಾರೆ.
ಶಾಂತಿನಗರದ ನಿವಾಸಿ ಸಧಾಖತ್ (28) ಕೊಲೆಯಾದ ದುರ್ದೈವಿ. ಸ್ನೇಹಿತ ಹನೀಫ್ ಎಂಬುವನ ಮೂಲಕ ಮನೆಯಿಂದ ಕರೆಸಿಕೊಂಡು ಕೃತ್ಯವೆಸಗಿದ್ದಾರೆ. ಹನೀಫ್ ಗೂ ಸಹ ಚಾಕುವಿನಿಂದ ಇರಿಯಲಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ಆಟೋಗಳಿಗೆ ರೆಜ್ಸಿನ್ ಹೊಲಿಯುವ ಸಧಾಖತ್ ನಿನ್ನೆ ರಾತ್ರಿ ಎಂದಿನಂತೆ ಮನೆ ಸೇರಿಕೊಂಡಿದ್ದಾರೆ. 10 ಗಂಟೆ ನಂತರ ಮೊಬೈಲ್ ಮೂಲಕ ನಿರಂತರವಾಗಿ ಸಂಪರ್ಕಿಸಿ ಮಾತನಾಡಲು ಬರುವಂತೆ ಒತ್ತಾಯಿಸಿದ್ದಾರೆ.
ಕೊನೆಗೆ ಸ್ನೇಹಿತ ಹನೀಫ್ ಮೂಲಕ ಒತ್ತಡ ಹೇರಿ ಕರೆಸಿಕೊಂಡಿದ್ದಾರೆ. ಗುಜರಿ ಬಳಿ ಬರುತ್ತಿದ್ದಂತೆಯೇ ಮೂವರು ವ್ಯಕ್ತಿಗಳು ಅಟ್ಯಾಕ್ ಮಾಡಿದ್ದಾರೆ. ತೀವ್ರವಾಗಿ ಗಾಯಗೊಂಡ ಸದಾಖತ್ ಗೆ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಫಲಕಾರಿಯಾಗದೆ ಸದಾಖತ್ ಮೃತಪಟ್ಟಿದ್ದಾರೆ ಸ್ನೇಹಿತ ಹನೀಫ್ ರನ್ನ ಲಷ್ಕರ್ ಠಾಣೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಹಂತಕರ ಪತ್ತೆಗೆ ಲಷ್ಕರ್ ಠಾಣಾ ಪೊಲೀಸರು ಜಾಲ ಬೀಸಿದ್ದಾರೆ…