ಮಹಿಳಾ ಮೀಸಲಾತಿ ಮಸೂದೆ: ಮಹಿಳೆಯರ ಭರವಸೆಗೆ ದೊಡ್ಡ ದ್ರೋಹ-ಕಾಂಗ್ರೆಸ್

0
11

ನವದೆಹಲಿ, ಸೆ.19 – ಕೇಂದ್ರ ಸರ್ಕಾರ ಮಂಗಳವಾರ ಲೋಕಸಭೆಯಲ್ಲಿ ಮಂಡಿಸಿದ ಮಹಿಳಾ ಮೀಸಲಾತಿ ಮಸೂದೆ “ಚುನಾವಣಾ ಜುಮ್ಲಾ” ಎಂದು ಟೀಕಿಸಿದ ಕಾಂಗ್ರೆಸ್, “ಮಹಿಳೆಯರ ಭರವಸೆಗೆ ದೊಡ್ಡ ದ್ರೋಹ” ಮಾಡಲಾಗಿದೆ ಎಂದು ಆರೋಪಿಸಿದೆ.

ಜನಗಣತಿ ಮತ್ತು ಡಿಲಿಮಿಟೇಶನ್ ನಡೆಸಿದ ನಂತರವೇ ಮಹಿಳಾ ಮೀಸಲಾತಿ ಜಾರಿಗೆ ಬರಲಿದೆ ಎಂದು ಕೇಂದ್ರ ಸರ್ಕಾರ ಹೇಳಿರುವುದು ಮಹಿಳೆಯರಿಗೆ ಮಾಡಿದ ದ್ರೋಹ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

2024ರ ಚುನಾವಣೆಗೂ ಮುನ್ನವೇ ಜನಗಣತಿ ಮತ್ತು ಡಿಲಿಮಿಟೇಶನ್‌ ನಡೆಯಲಿದೆಯೇ? ಎಂದು ಪ್ರಶ್ನಿಸಿರುವ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್‌, ನರೇಂದ್ರ ಮೋದಿ ಸರ್ಕಾರ 2021ರ ನಂತರ ದಶಕ ಕಳೆದರೂ ಜನಗಣತಿಯನ್ನು ಇನ್ನೂ ನಡೆಸಿಲ್ಲ ಎಂದು ಹೇಳಿದ್ದಾರೆ.

X ನಲ್ಲಿ ಪೋಸ್ಟ್ ಮಾಡಿದ ಜೈರಾಮ್ ರಮೇಶ್, “ಚುನಾವಣಾ ಜುಮ್ಲಾಗಳಲ್ಲಿ, ಇದು ಎಲ್ಲಕ್ಕಿಂತ ದೊಡ್ಡದು ಜುಮ್ಲಾ! ಕೋಟ್ಯಂತರ ಭಾರತೀಯ ಮಹಿಳೆಯರು ಮತ್ತು ಯುವತಿಯರ ಭರವಸೆಗಳಿಗೆ ದ್ರೋಹ” ಎಸಿಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

“ನಾವು ಮೊದಲೇ ಹೇಳಿದಂತೆ, ಮೋದಿ ಸರ್ಕಾರವು 2021 ರ ನಂತರ ದಶಕ ಕಳೆದರೂ ಜನಗಣತಿಯನ್ನು ನಡೆಸಿಲ್ಲ. G20 ನಲ್ಲಿ ದಶಕ ಕಳೆದರೂ ಜನಗಣತಿ ಕೈಗೊಳ್ಳಲು ವಿಫಲವಾದ ಏಕೈಕ ದೇಶ ಭಾರತ. ಈಗ ಜನಗಣತಿ ಅನುಸರಿಸಿ ಮಹಿಳಾ ಮೀಸಲಾತಿ ಜಾರಿಗೆ ಬರಲಿದೆ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಈ ಜನಗಣತಿ ಯಾವಾಗ ನಡೆಯುತ್ತದೆ?” ರಮೇಶ್ ಪ್ರಶ್ನಿಸಿದ್ದಾರೆ.

LEAVE A REPLY

Please enter your comment!
Please enter your name here