ಸಾಮಾಜಿಕ ತುಡಿತ-ಹಸಿರುಕ್ರಾಂತಿಯ ಆಧುನಿಕ ಹರಿಕಾರ ರಘುಲಾಲ್‌ ರಾಘವನ್‌

0
36

* ಹಸಿರೀಕರಣದ ಜೊತೆಗೆ ಬಡವ ಬಲ್ಲಿದರನ್ನು ಆರ್ಥಿಕವಾಗಿ ಮೇಲೆತ್ತುವ ಹಪಹಪಿ, ಮಕ್ಕಳಿಗೆ ಶೈಕ್ಷಣಿಕ ಬೆಂಬಲ ಹಾಗೂ ಸಾಮಾಜಿ ಕಳಕಳಿ ಅಪಾರವಾಗಿ ಮೈಗೂಡಿಸಿಕೊಂಡಿರುವ ಮೈಸೂರಿನ ಖ್ಯಾತ ರಘುಲಾಲ್‌ ಸಂಸ್ಥೆಯ ರಾಘವನ್‌ ರಾಜ್ಯೋತ್ಸವ ಪುರಸ್ಕಾರಕ್ಕೆ ಸಿಗಬೇಕಿದೆ.

ಮೈಸೂರು, ಸೆ. 17  – ಜಾಗತೀಕ ತಾಪಮಾನ, ಹಸಿರೀಕರಣ, ಪರಿಸರ ಎಂದೆಲ್ಲ ಮಾತನಾಡುವವರು ದೊಡ್ಡ ದೊಡ್ಡ ಭಾಷಣ ಮಾಡುವವರೇ ಹೆಚ್ಚಾಗಿರುವ ಇಂದಿನ ದಿನ ಮಾನದಲ್ಲಿ ಪ್ರಕೃತಿಯನ್ನು ಸಂರಕ್ಷಿಸುವುದರ ಜೊತೆಗೆ ಅಪಾರ ಸಾಮಾಜಿಕ ಕಳಕಳಿಯನ್ನೂ ಮೈಗೂಡಿಸಿಕೊಂಡಿರುವ ರಾಘವನ್‌ ಅವರಂಥವರು ಬಹಳ ಅಪರೂಪ.
ಹಿತ್ತಲ ಗಿಡ ಮದ್ದಲ್ಲ ಎನ್ನುವ ಮಾತಿಗೆ ಸೂಕ್ತವಾಗಿರುವ ರಘುಲಾಲ್‌ ಅಂಡ್‌ ಕಂಪನಿಯ ಮಾಲೀಕರಾದ ರಾಘವನ್ ಅವರ ವೈವಿದ್ಯಮಯ ಸೇವೆ ಅನನ್ಯ ಹಾಗೂ ಶ್ಲಾಘನೀಯವಾದದ್ದು. ಮೈಸೂರು ನಗರವನ್ನು ಹಸಿರೀಕರಣಗೊಳಿಸುವ ಪ್ರವೃತ್ತಿಯನ್ನು ಕಳೆದ ಹದಿನೈದು ವರ್ಷಗಳಿಂದಲೂ ಹೊಂದಿದ್ದಾರೆ. ಗಿಡ ನೆಡುವುದು ಅದಕ್ಕೆ ಟ್ರೀ ಗಾರ್ಡ್‌ ಅಳವಡಿಸಿ ಗಿಡ ಹಾಳಾಗದಂತೆ ಸುತ್ತಲೂ ರಕ್ಷಾಕವಚವನ್ನು ಹಾಕುತ್ತಾ ಬಂದಿದ್ದಾರೆ. ಅಷ್ಟು ಮಾತ್ರವಲ್ಲದೆ ಗಿಡಗಳು ಒಣಗದಂತೆ ನೀರುಣಿಸುವ ಜವಾಬ್ದಾರಿಯನ್ನೂ ನಿರ್ವಹಿಸುತ್ತಿದ್ದಾರೆ.
ತಮ್ಮದೇ ಆದ ʻರಘುಲಾಲ್‌ ಅಂಡ್‌ ಕಂಪನಿʼ ಹೊಂದಿರುವ ಅವರು ಅಲ್ಲಿನ ವ್ಯಾಪಾರ ವಹಿವಾಟನ್ನು ನೋಡಿಕೊಳ್ಳುವುದರ ಜೊತೆಗೆ ಹಲವು ಸಾಮಾಜಿಕ ಕಾರ್ಯಗಳಲ್ಲೂ ತೊಡಗಿಕೊಂಡಿದ್ದಾರೆ.
ಇವರ ಪ್ರಕೈತಿ ಪ್ರೇಮದ ವ್ಯಾಪ್ತಿ ಮೈಸೂರು ಜಿಲ್ಲೆಯನ್ನು ದಾಟಿ ಸುತ್ತಲಿನ ಚಾಮರಾಜನಗರ, ಕೊಡಗು ಹಾಗು ಮಂಡ್ಯಾ ಜಿಲ್ಲೆಗಳಿಗೂ ವ್ಯಾಪಿಸಿದೆ.
ಸಾಮಾಜಿಕ ಕಳಕಳಿ: ಪ್ರಕೃತಿ ಪ್ರೇಮ ಒಂದಿದ್ದರೆ ಸಾಲದು ಈ ಪ್ರೇಮದ ಉದ್ದೇಶ ಭೂನಿವಾಸಿಗಳಾದ ಮಾನರಿಗೆ ಹೆಚ್ಚು ಉಪಯುಕ್ತ ನಿಜ ಆದರೆ ಅದನ್ನು ಅನುಭವಿಸಲು ಜನರೂ ಇರಬೇಕಲ್ಲವೆ. ಹಾಗಾಗಿ ಅಗತ್ಯವಿರುವವರಿಗೆ ಉಚಿತವಾಗಿ ಔಷಧಿಗಳನ್ನು ನೀಡವುದೂ, ತೀರ ಕಷ್ಟದಲ್ಲಿದ್ದು ಹಾಸಿಗೆ ಹಿಡಿದವರಿಗೆ ನೆರವು ನೀಡುತ್ತಾ ವಂದಿದ್ದಾರೆ.
ಇನ್ನು ಚೆನ್ನಾಗಿ ಓದುವ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವುದು. ಶಾಲಾ-ಕಾಲೇಜುಗಳಿಗೆ ಬೆಂಚ್‌, ಡೆಸ್ಕ್‌ ಹಾಗೂ ಟೇಬಲ್‌ ಚೇರ್‌ಗಳನ್ನೂ ನೀಡಿದ್ದಾರೆ. ಓದಿನಲ್ಲಿ ಆಸಕ್ತಿ ಇರುವ ಮಕ್ಕಳಿಗೆ ಬೇಕಾದ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿಕೊಡುವುದರ ಕಡೆಗೂ ಗಮನ ಹರಿಸುತ್ತಲೇ ಇರುತ್ತಾರೆ.
ಬಡ ವ್ಯಾಪಾರಿಗಳಿಗಾಗಿ ತಳ್ಳುವ ಗಾಡಿ:
ಇತ್ತೀಚೆಗೆ ಮತ್ತೊಂದು ಸಾಹಸಕ್ಕೆ ಕೈ ಹಚ್ಚಿರುವ ರಾಘವನ್‌ ಅವರು ರಸ್ತೆಯಲ್ಲಿ ಗಾಡಿ ತಳ್ಳಿಕೊಂಡು ವ್ಯಾಪಾರ ಮಾಡುವವರಗಾಗಿ ತಳ್ಳುವ ಗಾಡಿಯನ್ನು ಉಚಿತವಾಗಿ ನೀಡುತ್ತಿದ್ದಾರೆ. ರಸ್ತೆಯಲ್ಲಿ ಗಾಡಿಯನ್ನು ತಳ್ಳಿಕೊಂಡು ವಿವಿಧ ವ್ಯಾಪಾರವನ್ನು ಮಾಡುವ ಬಡವರು ಅಸಹಾಯಕರಿಗೆ ಕೊಡುಗೆಯಾಗಿ ನೀಡುತ್ತಿದ್ದಾರೆ.
ಇತ್ತೀಚೆಗೆ ಭಾರತೀಯ ರಸಾಯನಶಾಸ್ತ್ರಜ್ಞರು ಮತ್ತು ಔಷಧ ತಜ್ಞರ ಸಂಘದಿಂದ ಅತ್ಯುತ್ತಮ ರಸಾಯನಶಾಸ್ತ್ರಜ್ಞ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಇದು ಉನ್ನತ ವ್ಯಕ್ತಿಗೆ, ಉನ್ನತವಾದ ಸಂಸ್ಥೆಯೊಂದು ನೀಡುವ ಅತ್ಯುತ್ತಮ ಗೌರವವಾಗಿದೆ. ಅನೇಕ ಸಂಘ ಸಂಸ್ಥೆಗಳು ಹಾಗೂ ಸಂಘಟನೆಗಳು ಇವರ ವೈವಿದ್ಯ ಸೇವೆಯನ್ನು ಪರಿಗಣಿಸಿ ಪ್ರಶಸ್ತಿ ಪುರಸ್ಕಾರ ನೀಡಿದೆ. ರಾಘವನ್‌ಅವರ ಪರಿಸರ ಕಾಳಜಿಯಂತೂ ಶ್ಲಾಘನೀಯವಾದದ್ದು ಹಸಿರು ಕ್ರಾಂತಿಯ ಆಧುನಿಕ ಹರಿಕಾರ ಎಂದೇ ಗುರುತಿಸಲ್ಪಡುವ ರಾಘವನ್‌ ಅವರನ್ನು ರಾಜ್ಯ ಸರ್ಕಾರ ಗುರುತಿಸಿ ರಾಜ್ಯೋತ್ಸವ ಪುರಸ್ಕಾರ ನೀಡಿದಲ್ಲಿ ಪುರಸ್ಕರಿಸುವ ಅಗತ್ಯವಿದೆ.

LEAVE A REPLY

Please enter your comment!
Please enter your name here