ಮಹಿಷಾ ದಸರಾ ಆಚರಣೆಗೆ ಬಿಡಲ್ಲ ಎಂದ ಸಂಸದ ಪ್ರತಾಪ್ ಸಿಂಹ ವಿರುದ್ಧ ಎಂ.ಲಕ್ಷ್ಮಣ್ ವಾಗ್ದಾಳಿ

0
10

ಮೈಸೂರು,ಸೆ. 13 – ಮಹಿಷಾ ದಸರಾ ಆಚರಣೆ ಮಾಡಲು ನಾವು ಬಿಡುವುದಿಲ್ಲ  ಎಂದ ಸಂಸದ ಪ್ರತಾಪ್ ಸಿಂಹ ವಿರುದ್ಧ ಕೆಪಿಸಿಸಿ ವಕ್ತಾರ  ಎಂ.ಲಕ್ಷ್ಮಣ್ ವಾಗ್ದಾಳಿ ನಡೆಸಿದ್ದಾರೆ.

ಮೈಸೂರಿನಲ್ಲಿ ಇಂದು ಮಾತನಾಡಿದ ಎಂ.ಲಕ್ಷ್ಮಣ್, ದಸರಾ ಹತ್ತಿರ ಬರುತ್ತಿದೆ. ಜನರು ದಿಕ್ಕು ತಪ್ಪಿಸಲು ಜನರ ಭಾವನೆಗಳಿಗೆ ಧಕ್ಕೆ ತರಲು ಮುಂದಾಗಬೇಡಿ. ಜನರಿಗೆ ಮಹಿಷಾ ದಸರಾ ಆಚರಣೆ ಮಾಡಬೇಡಿ ಎಂದು ಹೇಳುವ ನಿಮಗೆ ನಾಚಿಕೆ ಆಗ್ಬೇಕು. ಇಷ್ಟೆಲ್ಲಾ ಮಾತನಾಡುವವರು ಚಾಮುಂಡೇಶ್ವರಿ ಬೆಟ್ಟದ ಪ್ರವೇಶದ್ವಾರದ ಆರಂಭದಲ್ಲಿಯೇ ಏಕೆ ಮಹಿಷಾಸುರನ‌ ಪ್ರತಿಮೆ ನಿರ್ಮಾಣ ಮಾಡಿದ್ದಾರೆ. ಇದಕ್ಕೆ ಮೊದಲು ಉತ್ತರ ನೀಡಿ ಎಂದು ಸವಾಲು ಹಾಕಿದರು.

ಜನರಿಗೆ ಆಚರಣೆ ಮಾಡಬೇಡಿ, ಅದನ್ನು ತಿನ್ನಬೇಡಿ, ಆ ಬಟ್ಟೆ ಹಾಕಬೇಡಿ, ಈ ತರಹ ಪೂಜೆ ಮಾಡಬೇಡಿ ಅಂತಾ ಹೇಳಿ ಜನರ ಭಾವನೆಗಳ ನಡುವೆ ಕಲಹ ತರಬೇಡಿ. ಸಂವಿಧಾನದಡಿಯಲ್ಲಿ ಎಲ್ಲದಕ್ಕೂ ಅವಕಾಶ ಇದೆ. ನಿಮ್ಮ ತೆವಲಿಗೆ ಏನೇನೂ‌ ಮಾಡದೇ ಸುಮ್ಮನಿರಿ. ನಿಮ್ಮ‌ಪಕ್ಷ ಆಡಳಿತದಲ್ಲಿದ್ದಾಗ ನೀವು ರೌಡಿಸಂ ಮಾಡಿದಾಗ ಯಾರಾದ್ತೂ ಕೇಳಿದ್ರಾ. ಜನರ ಮೇಲೆ ವ್ಯಾನ್ ಹತ್ತಿಸಲು ಹೋದ ಆರೋಪದಲ್ಲಿ ನಿಮ್ಮ ಮೇಲೆ ಎಫ್.ಐ.ಆರ್ ಇದೆ ಮರೆತು ಬಿಟ್ರಾ ಎಂದು ಎಂ.ಲಕ್ಷ್ಮಣ್  ಕಿಡಿಕಾರಿದರು.

LEAVE A REPLY

Please enter your comment!
Please enter your name here