ಬೆಂಗಳೂರು ಮಳೆ ಹಾನಿ ಪ್ರದೇಶಗಳಿಗೆ ಸಿದ್ಧರಾಮಯ್ಯ ಭೇಟಿ; ಈಗಿನ ಸರ್ಕಾರ ಏನು ಮಾಡಿಲ್ಲ: ಆರೋಪ

0
27

ಬೆಂಗಳೂರು,ಸೆ.8 – ರಾಜ್ಯ ರಾಜಧಾನಿ ಬೆಂಗಳೂರು ಮಳೆಯ ಹೊಡೆತಕ್ಕೆ ಸಿಲುಕಿ ನಲುಗಿದ್ದು , ನಿರಂತರ ಸುರಿದ ಧಾರಾಕಾರ ಮಳೆಯಿಂದಾಗಿ ವಿವಿಧ ಬಡಾವಣೆಗಳು ಜಲಾವೃತಗೊಂಡು ಜನರು ತತ್ತರಿಸಿದ್ದಾರೆ.

ವಿಪಕ್ಷ ನಾಯಕ ಸಿದ್ಧರಾಮಯ್ಯ ಗುರುವಾರ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎಪ್ಸಿಲಾನ್ ಲೇ ಔಟ್ ನಲ್ಲಿ ಮಾಜಿ ಸಿಎಂ ಸಿದ್ಧರಾಮಯ್ಯ ಮಳೆ ಹಾನಿ ವೀಕ್ಷಣೆ ಮಾಡಿದ್ದಾರೆ. ಎಪ್ಸಿಲಾನ್ ಲೇಔಟ್ ನಲ್ಲಿ 4 ರಿಂದ 5 ಅಡಿಗಳಷ್ಟು ನೀರು ನಿಂತಿದ್ದು,  ಬೋಟ್ ಮೂಲಕ ಸಿದ್ಧರಾಮಯ್ಯ ತೆರಳಿ ಪರಿಶೀಲನೆ ನಡೆಸಿದರು.

ಬೆಂಗಳೂರಿನಲ್ಲಿಇನ್ನೂ ನಾಲ್ಕು ದಿನಗಳ ಕಾಲ ಗುಡುಗು ಮಿಂಚು ಸಹಿತ ಮಳೆಯಾಗುವ ಸಾಧ್ಯತೆ ಇದ್ದು,  ಹವಮಾನ ಇಲಾಖೆ 18 ಜಿಲ್ಲೆಗಳಲ್ಲಿ ಮಳೆ ಅಲರ್ಟ್ ಘೋಷಿಸಿದೆ.

ನಮ್ಮ ಕಾಲದಲ್ಲಿ ರಾಜಕಾಲುವೆ ತೆರವಿಗೆ ಕ್ರಮ:

ಬೆಂಗಳೂರಿನಲ್ಲಿ ರಾಜಕಾಲುವೆ ತೆರವಿಗೆ ನಮ್ಮ ಕಾಲದಲ್ಲಿ ಕ್ರಮ ಕೈಗೊಳ್ಳಲಾಗಿತ್ತು. ಆದರೆ ಈಗಿನ ಸರ್ಕಾರ ಮೂರು ವರ್ಷದಿಂದ  ಏನು ಮಾಡಿಲ್ಲ ಎಂದು ವಿಪಕ್ಷ ನಾಯಕ  ಸಿದ್ಧರಾಮಯ್ಯ ಆರೋಪ ಮಾಡಿದರು.

ಬೆಂಗಳೂರಿನ ಮಳೆಹಾನಿ ಪ್ರದೇಶಕ್ಕೆ ಮಾಜಿ ಸಿಎಂ ಸಿದ್ಧರಾಮಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಳ್ಳಂದೂರು ರಿಂಗ್ ರಸ್ತೆಯ ಎಕೋ ಸ್ಪೇಸ್ ಬಡಾವಣೆ, ಎಪ್ಸಿಲಾನ್ ಲೇ ಔಟ್ ಗೆ ಭೇಟಿ ನೀಡಿ ವೀಕ್ಷಿಸಿದರು. ಇದೀಗ ರೈನ್ ಬೋ ಲೇಔಟ್ ನಲ್ಲಿ ವೀಕ್ಷಣೆ ನಡೆಸಿದರು.

ಈ ವೇಳೆ ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ, ನಾವು ರಾಜಕಾಲುವೆ ತೆರವುಗೊಳಿಸಲು ನಮ್ಮ ಕಾಲದಲ್ಲಿ ಕ್ರಮ ಕೈಗೊಂಡಿದ್ವು ಈಗಿನ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ.  ಅಕ್ರಮ ಮನೆ ಕಟ್ಟಿದವರ ವಿರುದ್ಧ ಕ್ರಮ ಆಗಬೇಕು. ಸಿಎಂ ಹೇಳ್ತಾರೆ ಹಿಂದಿನ ಸರ್ಕಾರ ಕಾರಣ ಅಂತಾ . ಆದರೆ ಅವರೇನು ಮಾಡಿದ್ದಾರೆ ಎಂದು ಹೇಳಬೇಕಲ್ವಾ  ನಾವೇನು ಮಾಡಿದ್ದೇವೆ ಅಂತಾ ಜನರಿಗೆ ಹೇಳಬೇಕಲ್ವಾ. ಮೂರು ವರ್ಷದಿಂದ ಈ ಸರ್ಕಾರ ಏನು ಮಾಡಿಲ್ಲ. ಹೀಗಾಗಿ ನಮ್ಮ ಮೇಳೆ ಆರೋಪ ಮಾಡುತ್ತಿದ್ದಾರೆ.  ರಾಜಕಾಲುವೆ ಒತ್ತುವರಿ ಮಾಡಲು ಯಾರು ಕಾರಣ. ಇದನ್ನ ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇನೆ ಎಂದು ಹೇಳಿದರು.

LEAVE A REPLY

Please enter your comment!
Please enter your name here