ಮೈಸೂರು ಮಹಾನಗರ ಪಾಲಿಕೆ ಸಂಪೂರ್ಣ ಬಿಜೆಪಿ ಪಾಲು:

0
88

ಬಿಜೆಪಿಯ ಶಿವಕುಮಾರ್ ಮೇಯರ್, ರೂಪ ಉಪಮೇಯರ್, ಬೆಂಬಲ ಕೊಟ್ಟ ಜೆಡಿಎಸ್ ಗೆ ಮುಖಭಂಗ

ಮೈಸೂರು, ಸೆ. 6 – ತೀವ್ರ ಕೂತೂಹಲದ ಜತೆಗೆ ದಾಖಲೆ ಬರೆದಿರುವ ಮೈಸೂರು ಮಹಾನಗರಪಾಲಿಕೆ ಸಂಪೂರ್ಣ ಕಮಲದ ತೆಕ್ಕೆಗೆ ಒಲಿದಿದ್ದು, ಬಿಜೆಪಿಯ ಶಿವಕುಮಾರ್ ಮೇಯರ್ ಆಗಿದ್ದು, ಅದೇ ಪಕ್ಷದ ರೂಪ ಅಚ್ಚರಿ ಬೆಳವಣಿಗೆಯೊಂದಿಗೆ ಉಪಮೇಯರ್ ಗದ್ದುಗೆ ಏರಿ ಸಂಪೂರ್ಣ ಪಾಲಿಕೆ ಕಮಲದ ಪಾಲಾಯಿತು.

ಮತ ಹಾಕುವ ಸಮಯದಲ್ಲಿ ಬಿಜೆಪಿಗೆ ಬೆಂಬಲ ನೀಡಿದ ಜೆಡಿಎಸ್ ಮುಖಭಂಗ ಅನುಭವಿಸಿದ್ದರೆ, ಮೇಯರ್ ಹಾಗೂ ಉಪಮೇಯರ್ ಎರಡೂ ಸ್ಥಾನಗಳನ್ನು ಅದೃಷ್ಟದಿಂದ ಪಡೆದಿರುವ ಬಿಜೆಪಿ ಒಳಗೆ ಖುಷಿ ಪಟ್ಟಿದ್ದರೂ ಮೇಲ್ನೋಟಕ್ಕೆ ತೋರಿಸಿಕೊಳ್ಳುವಂತಿಲ್ಲ ಎಂಬಂತಾಗಿದೆ.
ಈ ನಡುವೆ ಕಾಂಗ್ರೆಸ್ ನಾಯಕರು ಮುಸ್ಲಿಂ ಮಹಿಳೆಯನ್ನು ಕೊನೆ ಕ್ಷಣದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಸೇರಿ ಕೊಲೆ ಮಾಡಿದ್ದಾರೆಂದು ಅಣಕಿಸಿದ್ದಾರೆ. ಜೆಡಿಎಸ್ ರೇಷ್ಮಭಾನು ಅವರ ನಾಮಪತ್ರ  ಕೊನೆ ಕ್ಷಣದಲ್ಲಿ  ತಿರಸ್ಕೃತ ಗೊಂಡ ಹಿನ್ನಲೆಯಲ್ಲಿ ಬಿಜೆಪಿಯ ವಿ.ರೂಪಾ ಅವರು ಉಪಮೇಯರ್ ಆಗಿ ಅಚ್ಚರಿಯಲ್ಲಿ ಆಯ್ಕೆಯಾದರು.

LEAVE A REPLY

Please enter your comment!
Please enter your name here