ಗ್ಯಾಂಗ್ ರೇಪ್ ಪ್ರಕರಣ: ಬಾಲ ಆರೋಪಿ ಸೇರಿ ಐವರ ಬಂಧನ; ಡಿಜಿ & ಐಜಿಪಿ ಪ್ರವೀಣ್ ಸೂದ್ ಪತ್ರಿಕಾ ಗೋಷ್ಠಿಯಲ್ಲಿ ಬಹಿರಂಗ

0
95

ಮೈಸೂರು,ಆ.28-  ಮೈಸೂರಿನಲ್ಲಿ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲ ಆರೋಪಿ ಸೇರಿ ಐದು ಮಂದಿಯನ್ನ ಬಂಧಿಸಲಾಗಿದೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ತಿಳಿಸಿದ್ದಾರೆ.

ಮೈಸೂರಿನ ಎಸ್ಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ ಮಾಹಿತಿ ನೀಡಿದ ಮಹಾನಿರ್ದೇಶಕ ಪ್ರವೀಣ್ ಸೂದ್, ಪ್ರಕರಣ ಸಂಬಂಧ 5 ಮಂದಿಯನ್ನು ಬಂಧಿಸಿದ್ದೇವೆ. ಐವರು ಆರೋಪಿಗಳ ಪೈಕಿ ಒಬ್ಬ ಬಾಲಾರೋಪಿ. ಆರೋಪಿಗಳ ಪತ್ತೆಗೆ 7 ತಂಡ ರಚಿಸಲಾಗಿತ್ತು.

ಆ.24 ರಂದು 7-8ಗಂಟೆ ನಡುವೆ ಘಟನೆ ನಡೆದಿದೆ. 3 ಲಕ್ಷ ದುಡ್ಡು ಕೇಳಿದ್ರು ಯುವಕ‌, ಯುವತಿ ಹಣ ನೀಡಿಲ್ಲ. ಇದುವರೆಗೂ ನಮಗೆ ಸಂತ್ರಸ್ಥೆಯಿಂದ ಒಂದು ಮಾಹಿತಿ ಸಿಕ್ಕಿಲ್ಲ. ಸಂತ್ರಸ್ತೆಯ ಸ್ನೇಹಿತನಿಂದ ಸ್ವಲ್ಪ ಮಾಹಿತಿ ಸಿಕ್ಕಿತು. ಐದು ಮಂದಿ ಬಂಧನವಾಗಿದೆ. ಹೈಕೋರ್ಟ್ ಆದೇಶದಂತೆ ಜಾಸ್ತಿ ಮಾಹಿತಿ ನೀಡಲಾಗಲ್ಲ. ಐವರೂ ಕೂಡಾ ತಮಿಳುನಾಡಿನ ತಿರುಪುರದವರು.

ಪ್ರಕರಣದಲ್ಲಿ 6 ಮಂದಿ ಆರೋಪಿಗಳಿದ್ದಾರೆ. ಈ ಪೈಕಿ ಓರ್ವ ತಲೆಮರಿಸಿಕೊಂಡಿದ್ದಾನೆ.ಟೆಕ್ನಿಕಲ್ ಸೈಂಟಿಫಿಕ್ ಎವಿಡೆನ್ಸ್ ಮೇಲೆ ಆರೋಪಿಗಳನ್ನ ಬಂಧಿಸಲಾಗಿದೆ. ಆರೋಪಿಗಳು  ಆಗಾಗ್ಗೆ ಮೈಸೂರಿಗೆ ಬರ್ತಾ ಇದ್ದರು. ಇವರೆಲ್ಲಾ ಲೇಬರ್ ಕ್ಲಾಸ್ ನವರು, ಚಾಲಕರು, ಕೂಲಿ ಕೆಲಸದವರು.

ಪ್ರಾಥಮಿಕ ಮಾಹಿತಿ ಪ್ರಕಾರ ಓರ್ವ ಅಪ್ರಾಪ್ತ ಇದ್ದಾನೆ. 17 ವರ್ಷದ ಯುವಕ. ಆದ್ರೆ ಈ ಬಗ್ಗೆ ಇನ್ನೂ ಪರಿಶೀಲನೆ ಮಾಡಬೇಕು.ಓರ್ವ 8ನೇ ಕ್ಲಾಸ್ ಮತ್ತೋರ್ವ 7ನೇ ಕ್ಲಾಸ್ ಮತ್ತೋರ್ವ ಏನು ಓದಿಲ್ಲ. ಎಲ್ಲಾ ಆರೋಪಿಗಳು ಕ್ರಿಮಿನಲ್ ಹಿನ್ನೆಲೆ ಹೊಂದಿರುವ ಬಗ್ಗೆ ಮಾಹಿತಿ ಇದೆ.  ಎಂದು ಪ್ರವೀಣ್ ಸೂದ್ ತಿಳಿಸಿದರು.

LEAVE A REPLY

Please enter your comment!
Please enter your name here