ಕಕ್ಷೆ ಬದಲಾವಣೆ: ಎಸ್ಎಸ್ಎಲ್ ವಿ ಮಿಷನ್ ಉಪಗ್ರಹಗಳ ಬಳಕೆ ಸಾಧ್ಯವಿಲ್ಲ: ಇಸ್ರೋ

0
15

ಶ್ರೀಹರಿಕೋಟ,ಆ. 7 – ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಂದು ಉಡಾವಣೆ ಮಾಡಿರುವ ಎಸ್ಎಸ್ಎಲ್ ವಿ-ಡಿ1 ಉಪಗ್ರಹವನ್ನು ವೃತ್ತಾಕಾರದ ಕಕ್ಷೆಯ ಬದಲಿಗೆ ದೀರ್ಘವೃತ್ತದ ಕಕ್ಷೆಗೆ ಸೇರಿಸಿದ್ದು, ಅದನ್ನು ಬಳಕೆ ಮಾಡಲು ಸಾಧ್ಯವಿಲ್ಲ ಎಂದು ಸಂಸ್ಥೆ ತಿಳಿಸಿದೆ.

Advertisements

ಇಂದಿನ ಉಡಾವಣೆಗೆ ಸಂಬಂಧಿಸಿದಂತೆ ವಿಶ್ಲೇಷಣೆ ನಡೆಸಿ  ಶಿಫಾರಸುಗಳನ್ನು ನೀಡಲು ಸಮಿತಿಯೊಂದನ್ನು ರಚನೆ ಮಾಡಲಾಗಿದೆ, ಶಿಫಾರಸುಗಳನ್ನು ಆಧರಿಸಿ ಇಸ್ರೋ ಎಸ್ಎಸ್ಎಲ್ ವಿ-ಡಿ2 ಉಪಗ್ರಹದೊಂದಿಗೆ ಶೀಘ್ರವೇ ಬರಲಿದೆ ಎಂದು ಹೇಳಿದೆ.


ಎಸ್ಎಸ್ಎಲ್ ವಿ-ಡಿ1 ಉಪಗ್ರಹಗಳನ್ನು 356ಕಿ.ಮೀx 76 ಕಿ.ಮೀ ನ ದೀರ್ಘ ವೃತ್ತಾಕಾರದ  ಕಕ್ಷೆಯಲ್ಲಿರಿಸಿದೆ. ಆದರೆ ಅದು 356 ಕಿ.ಮೀ ವೃತ್ತಾಕಾರಾದ ಕಕ್ಷೆಗೆ ಸೇರಬೇಕಿತ್ತು. ಈ ಉಪಗ್ರಹಗಳನ್ನು ಬಳಕೆ ಮಾಡಲು ಸಾಧ್ಯವಿಲ್ಲ.  ಸಂವೇದಕ ವೈಫಲ್ಯವನ್ನು ಗುರುತಿಸಲು ಲಾಜಿಕ್ ನ ವಿಫಲತೆಯಿಂದ ಈ ಅವಘಡ ಉಂಟಾಗಿದೆ ಎಂದು ಇಸ್ರೋ ಟ್ವಿಟರ್ ಮೂಲಕ ಪ್ರಕಟಿಸಿದೆ.

ಇಸ್ರೋ ಅಧ್ಯಕ್ಷ ಎಸ್ ಸೋಮನಾಥ್ ಅವರ ವಿವರವಾದ ಹೇಳಿಕೆಯನ್ನು ಶೀಘ್ರವೇ ಅಪ್ಲೋಡ್ ಮಾಡುವುದಾಗಿ ಇಸ್ರೋ ತಿಳಿಸಿದೆ.
ಎಸ್‌ಎಸ್‌ಎಲ್‌ವಿ-ಡಿ1 ಇಒಎಸ್ -02 ಉಪಗ್ರಹವನ್ನು ಮತ್ತು ವಿದ್ಯಾರ್ಥಿಗಳೇ ತಯಾರಿಸಿರುವ AzadiSAT ಉಪಗ್ರಹವನ್ನು ಉಡಾವಣೆ ಮಾಡಿತ್ತು.

Advertisements

LEAVE A REPLY

Please enter your comment!
Please enter your name here