ಜೊಕೋವಿಕ್ ನ್ನು ಮಣಿಸಿ ಮೊದಲ ಬಾರಿ ವಿಂಬಲ್ಡನ್ ಮುಡಿಗೇರಿಸಿಕೊಂಡ ಕಾರ್ಲೋಸ್ ಅಲ್ಕರಾಜ್

0
30

5 ಸೆಟ್ ಗಳಲ್ಲಿ ನಾಕ್ ಜೊಕೋವಿಕ್ ಅವರನ್ನು ಮಣಿಸಿರುವ  ಕಾರ್ಲೋಸ್

ಲಂಡನ್, ಜು. 17 – ಟೆನಿಸ್ ನ ಪುರುಷರ ಸಿಂಗಲ್ಸ್ ವಿಭಾಗದ ಫೈನಲ್ಸ್ ನಲ್ಲಿ ಹಾಲಿ ಚಾಂಪಿಯನ್ ನೊವಾಕ್ ಜೊಕೋವಿಕ್ ನ್ನು ಮಣಿಸಿರುವ, ಮೊದಲ ಬಾರಿಗೆ ಫೈನ,ಲ್ಸ್ ಪ್ರವೇಶಿಸಿದ್ದ ಕಾರ್ಲೋಸ್ ಅಲ್ಕರಾಜ್ ವಿಂಬಲ್ಡನ್ ನ್ನು ಮುಡಿಗೇರಿಸಿಕೊಂಡಿದ್ದಾರೆ.

ಈ ಪಂದ್ಯ ಬ್ಯಾಟಲ್ ಆಫ್ ಜನರೇಷನ್ ಎಂದೇ ವಿಶ್ಲೇಷಿಸಲ್ಪಟ್ಟಿತ್ತು. ನೊವಾಕ್ ಜೊಕೋವಿಕ್ ಅತಿ ಹೆಚ್ಚು ಅನುಭವ ಹೊಂದಿದ್ದರೆ, ಕಾರ್ಲೋಸ್ ಅಲ್ಕರಾಜ್ ಅತ್ಯಂತ ಕಿರಿಯ ಹಾಗೂ ಮೊದಲ ಬಾರಿಗೆ ವಿಂಬಲ್ಡನ್ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿದ್ದರು.

5 ಸೆಟ್ ಗಳಲ್ಲಿ ನಾಕ್ ಜೊಕೋವಿಕ್ ಅವರನ್ನು ಮಣಿಸಿರುವ  ಕಾರ್ಲೋಸ್ ಅಲ್ಕರಾಜ್, ಕಳೆದ ವರ್ಷ ಯುಎಸ್ ಓಪನ್ ಟೈಟಲ್ ನ್ನು ಗೆದ್ದಿದ್ದರು ಈಗ ಪುರುಷರ ವಿಭಾಗದಲ್ಲಿ ವಿಂಬಲ್ಡನ್ ನ್ನು ಮುಡಿಗೇರಿಸಿಕೊಂಡ 3 ನೇ ಅತ್ಯಂತ ಕಿರಿಯ ಚಾಂಪಿಯನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

LEAVE A REPLY

Please enter your comment!
Please enter your name here