ಬೆಂಗಳೂರು,ಜು.17- 2021-22 ನೇ ಸಾಲಿನ ಆಯವ್ಯಯ ಕಂಡಿಕೆ -148 ರಲ್ಲಿ ಹೇಳಿದಂತೆ ರಾಜ್ಯ ಸರ್ಕಾರ ಒಕ್ಕಲಿಗ ಸಮುದಾಯದ ಸರ್ವತೋಮುಖ ಅಭಿವೃದ್ಧಿಗಾಗಿ ನಿಗಮ ಸ್ಥಾಪಿಸಿ ಆದೇಶಿಸಿದೆ. ಅದರಂತೆ ನಿಗಮದ ಚಟುವಟಿಕೆಗಳಿಗೆ ರೂ .50.00 ಕೋಟಿ ವೆಚ್ಚ ಮಾಡಲು ಯೋಜಿಸಲಾಗಿದೆ ಎಂದು ಹಿಂದುಳಿದ ವರ್ಗಗಳ ಇಲಾಖೆ ಆದೇಶದಲ್ಲಿ ತಿಳಿಸಿದೆ.
ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯಲ್ಲಿ ಒಕ್ಕಲಿಗ , ಒಕ್ಕಲಿಗ ಸರ್ಪ ಒಕ್ಕಲಿಗೆ , ಹಳ್ಳಿಕಾರ್ ಒಕ್ಕಲಿಗ , ನಾಮಧಾರಿ ಒಕ್ಕಲಿಗ , ಗಂಗಲಕ್ಕಾರ್ ಒಕ್ಕಲಿಗ , ದಾಸ್ ಒಕ್ಕಲಿಗ ರರಿ ಒಕ್ಕಲಿಗ , ಮರಸು ಒಕ್ಕಲಿಗ , ಗೌಡ ಹಳ್ಳಿಕಾರ್ , ಕುಂಚಿಟಿಗ , ಗೌಡ , ಕಾಪು , ಹೆಗಡ , ಕಮ್ಮ , ರಶ್ಮಿ , ಗೌಂಡರ್ , ನಾಮಧಾರಿ ಗೌಡ , ಉಪ್ಪಿನ ಕೊಳಗ / ಉತ್ತಮ ಕೊಳಗ ಜಾತಿಗಳಿಗೆ ಪ್ರವರ್ಗ 3 ‘ ಎ ‘ ನಲ್ಲಿ ( ಕ್ರ.ಸಂ : 1 ರ ( ಎ ) ಯಿಂದ ( ಟಿ ) ವರೆಗೂ ಮೀಸಲಾತಿಯನ್ನು ಕಲ್ಪಿಸಲಾಗಿರುತ್ತದೆ.
ಒಕ್ಕಲಿಗ ಸಮುದಾಯದ ನಿಗಮ ಸ್ಥಾಪಿಸುವ ಪ್ರಸ್ತಾವನೆಯನ್ನು ಕೂಲಂಕುಷವಾಗಿ ಪರಿಶೀಲಿಸಿ ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯ ಪ್ರವರ್ಗ 3 ಎ ನಲ್ಲಿ ಕ್ರ.ಸಂ : 1 ರ ( ಡಿ ) ಯಿಂದ ( 1 ) ವರೆಗೆ ನಮೂದಾಗಿರುವ ಒಕ್ಕಲಿಗ , ವಕ್ಕಲಿಗ , ಸರ್ಪ ಒಕ್ಕಲಿಗ , ಹಳ್ಳಿಕಾರ್ ಒಕ್ಕಲಿಗ , ನಾಮಧಾರಿ ಒಕ್ಕಲಿಗ , ಗಂಗಡಕಾರ್ ಒಕ್ಕಲಿಗ , ದಾಸ್ ಒಕ್ಕಲಿಗ , ರಡಿ ಒಕ್ಕಲಿಗ , ಮರಸು ಒಕ್ಕಲಿಗ , ಗೌಡ , ಹಳ್ಳಿಕಾರ್ , ಕುಂಚಿಟಿಗ , ಗೌಡ , ಕಾಪು , ಹೆಗಡೆ , ಕಮ್ಮ , ರಡಿ ಗೌಂಡರ್ , ನಾಮಧಾರಿ ಗೌಡ ಉಪ್ಪಿನ ಕೊಳೆಗ / ಉತ್ತಮ ಕೊಳಗ ಸಮುದಾಯಗಳ ಸರ್ವತೋಮುಖ ಅಭಿವೃದ್ಧಿಗಾಗಿ , ಒಕ್ಕಲಿಗ ಅಭಿವೃದ್ಧಿ ನಿಗಮ ” ವನ್ನು ಸ್ಥಾಪಿಸಿ ಆದೇಶಿಸಿದೆ.
ಒಕ್ಕಲಿಗ ಅಭಿವೃದ್ದಿ ನಿಗಮವನ್ನು ಕಂಪನಿ ಕಾಯ್ದೆ 2013 ರಡಿಯಲ್ಲಿ ನೋಂದಾಯಿಸಿ ಸ್ಥಾಪಿಸುವಂತೆ ಆದೇಶದಲ್ಲಿ ಸರ್ಕಾರ ಸೂಚಿಸಿದೆ.