ಬಿಜೆಪಿಯ ಭ್ರಷ್ಟಾಚಾರಕ್ಕೆ ಬೇಸತ್ತು ಜನ ಕಾಂಗ್ರೆಸ್ ಗೆಲ್ಲಿಸಿದ್ದಾರೆ: ಎಚ್.ವಿಶ್ವನಾಥ್

0
34

ಮೈಸೂರು,ಜೂ. 6 – ಬಿಜೆಪಿಯ ದುರಹಂಕಾರ, ಭ್ರಷ್ಟಾಚಾರಕ್ಕೆ ಬೇಸತ್ತು ಜನ ಕಾಂಗ್ರೆಸ್ ಗೆ ಅಧಿಕಾರ ನೀಡಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ  ಹೆಚ್.ವಿಶ್ವನಾಥ್ ಹೇಳಿದರು.

ಮೈಸೂರಿನಲ್ಲಿ ಇಂದು ಮಾತನಾಡಿದ ಹೆಚ್.ವಿಶ್ವನಾಥ್, ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ 5 ಗ್ಯಾರೆಂಟಿಗಳ ಭರವಸೆಗಳ ಮೂಲಕ ಅಧಿಕಾರಿಕ್ಕೆ ಬಂದಿದೆ. ಅದರಂತೆ ಈಗ ಅವುಗಳ ಜಾರಿ ಮಾಡುವ ನಿಟ್ಟಿನಲ್ಲಿ ಸರ್ಕಾರ ಮುಂದಾಗಿದೆ. ಬಿಜೆಪಿಯವರೂ ಕೂಡ ಹಲವು ಭರವಸೆಗಳ ನೀಡಿದ್ದರು. ಆದರೆ ಬಿಜೆಪಿ ದುರಹಂಕಾರ, ಭ್ರಷ್ಟಾಚಾರದ ವಿರುದ್ಧ ಜನ ಕಾಂಗ್ರೆಸ್ ಗೆ ಅಧಿಕಾರ ಕೊಟ್ಟದ್ದಾರೆ. ಬಿಜೆಪಿಯವರು ಮಾಡಿರುವುದಾರೂ ಏನು..? ನಾನು ಅಲ್ಲೇ ಇದ್ದು ಬಂದಿದ್ದೇನೆ. ಕಳೆದ ಮೂರುವರೆ ವರ್ಷಗಳಲ್ಲಿ ಏನೂ ಕೆಲಸ ಮಾಡಲಿಲ್ಲ ಎಂದು ಟೀಕಿಸಿದರು.

ಗೋಹತ್ಯೆ ಕಾಯ್ದೆ ಮರು ಜಾರಿ ಕುರಿತು ಸರ್ಕಾರ ಮತ್ತೆ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳುತ್ತದೆ. ಅದರ ಬಗ್ಗೆ ಈಗಾಗಲೇ ಮುಖ್ಯಮಂತ್ರಿಗಳು ಹೇಳಿದ್ದಾರೆ. ಆದರೆ ಬಿಜೆಪಿ ಇದರ ಬಗ್ಗೆ ಅಪಸ್ವರ ಎತ್ತುತ್ತಿರುವುದು ಸರಿಯಲ್ಲ ಎಂದು ಎಂಎಲ್ ಸಿ ಹೆಚ್. ವಿಶ್ವನಾಥ್ ಕಿಡಿಕಾರಿದರು.

LEAVE A REPLY

Please enter your comment!
Please enter your name here