ಮಡಿಕೇರಿ: ರಾಜಾ ಸೀಟ್‌ನ ಹೊರಗೆ ಮಾರಾಮಾರಿ : ವಿಡಿಯೋ ವೈರಲ್

0
68

ಮಡಿಕೇರಿ,ಜೂ. 5 – ಮಡಿಕೇರಿಯ ಜನಪ್ರಿಯ ಪ್ರವಾಸಿ ತಾಣವಾದ ರಾಜಾ ಸೀಟ್‌ನಲ್ಲಿ ಭಾನುವಾರ ಸಂಜೆ ಗಲಾಟೆ ನಡೆದಿದ್ದು ಕಪ್ಪು ಚುಕ್ಕೆಯಾಗಿ ಮಾರ್ಪಟ್ಟಿದೆ. ಈ ಪ್ರದೇಶದಲ್ಲಿ ಇಬ್ಬರು ಸ್ಥಳೀಯರ ನಡುವೆ ಗಲಾಟೆ ನಡೆದಿದ್ದು, ಹಲ್ಲೆಯ ವೀಡಿಯೋ ವೈರಲ್ ಆಗಿದ್ದರೂ ನೂರಾರು ಮಂದಿ ಪ್ರವಾಸಿ ತಾಣಕ್ಕೆ ಭಾನುವಾರ ಭೇಟಿ ನೀಡಿದ್ದರು.

ರಾಜಾ ಸೀಟ್‌ನ ಕಾವಲುಗಾರ ಮತ್ತು ಸ್ಥಳೀಯ ಬೀದಿ ವ್ಯಾಪಾರಿ ನಡುವೆ ಗಲಾಟೆ ನಡೆದಿದೆ. ಸಂಜೆಯ ಸಮಯದಲ್ಲಿ ವಾಚ್‌ಮನ್ ಜಯಣ್ಣ ಚಿಪ್ಸ್ ಖರೀದಿಸಲು ರಾಜಾ ಸೀಟ್‌ನ ಹೊರಗಿನ ಅಂಗಡಿಗೆ ಭೇಟಿ ನೀಡಿದ್ದರು. ಬೀದಿ ವ್ಯಾಪಾರಿಯಿಂದ ವಾಚ್ ಮನ್ ಆಲೂಗಡ್ಡೆ ಚಿಪ್ಸ್ ಖರೀದಿಸಿದರು. ಆದರೆ, ಖರೀದಿಸಿದ ಚಿಪ್ಸ್ ಗೆ ಹಣ ಪಾವತಿಸುವ ವಿಚಾರದಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ.

ಜಯಣ್ಣ ಅವರ ಪತ್ನಿ ಸುಶೀಲಾ ಕೂಡ ರಾಜಾ ಸೀಟ್‌ನ ಹೊರಗೆ ಅಂಗಡಿ ನಡೆಸುತ್ತಿದ್ದು, ಇಬ್ಬರ ನಡುವೆ ಜಗಳ ನಡೆಯದಂತೆ ತಡೆಯಲು ಯತ್ನಿಸಿದ್ದಾರೆ. ಜಯಣ್ಣ ಹಾಗೂ ಜಮ್ಷಾದ್‌ ಇಬ್ಬರೂ ದೊಣ್ಣೆಯಿಂದ ಹಲ್ಲೆಗೆ ಮುಂದಾಗಿದ್ದಾರೆ.ಈ ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ನಡುವೆ ಜಯಣ್ಣನ ಪತ್ನಿ ಮಡಿಕೇರಿ ಪೊಲೀಸರಿಗೆ ದೂರು ನೀಡಿದ್ದು, ಆರೋಪಿ ಜಮ್ಶಾದ್ ಹಾಗೂ ಮತ್ತೋರ್ವ ಬೀದಿಬದಿ ವ್ಯಾಪಾರಿ ಖಲೀಲ್ ತನ್ನ ಪತಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.

ಆರೋಪಿ ಜಮ್ಶಾದ್ ನನ್ನು ಪೊಲೀಸರು ಬಂಧಿಸಿದ್ದು, ತನಿಖೆ ಮುಂದುವರಿದಿದೆ. ಗಾಯಾಳು ಜಯಣ್ಣ ಮೈಸೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆಯ ನಂತರ ಬೀದಿ ವ್ಯಾಪಾರಿಗಳು ರಾಜಾ ಸೀಟ್‌ನ ಹೊರಗೆ ನಿತ್ಯ ವ್ಯಾಪಾರ ಮಾಡುವುದನ್ನು ನಿಷೇಧಿಸಲಾಗಿದೆ.

ಪ್ರವಾಸಿ ತಾಣದ ಹೊರಗೆ ಎರಡು ದಶಕಗಳಿಂದ ಅನೇಕ ಮಾರಾಟಗಾರರು ವ್ಯಾಪಾರ ಮಾಡಿ ತಮ್ಮ ಜೀವನೋಪಾಯ ನಡೆಸುತ್ತಿದ್ದಾರೆ. ಅವರು ‘ಚುರ್ಮುರಿ’ ಮತ್ತು ಇತರ ವಸ್ತುಗಳನ್ನು ಒಳಗೊಂಡಂತೆ ಪ್ರವಾಸಿಗರಿಗೆ ಆಹಾರ ನೀಡುತ್ತಾರೆ. ಆದರೆ, ಕೊಡಗು ಡಿಸಿ ಡಾ.ಬಿ.ಸಿ.ಸತೀಶ ಅವರು ರಾಜಾ ಸೀಟ್‌ನ ಹೊರಗೆ ವ್ಯಾಪಾರ ಮಾಡಲು ಟೆಂಡರ್‌ಗೆ ಆದೇಶಿಸಿರುವಾಗಲೇ ಹಲ್ಲೆ ಘಟನೆಯು ಮಾರಾಟಗಾರರ ಜೀವನೋಪಾಯಕ್ಕೆ ತಡೆ ಒಡ್ಡಿದೆ.

ಪ್ರವಾಸೋದ್ಯಮದ ಬೆಳವಣಿಗೆಯಿಂದ ಸ್ಥಳೀಯರಿಗೆ ಸಹಾಯ ಮಾಡಬೇಕಾಗಿದ್ದರೂ, ಜಿಲ್ಲೆಯಲ್ಲಿ ಅದು ವಿಭಿನ್ನವಾಗಿದೆ. ಮಡಿಕೇರಿ ನಗರದ ಇತ್ತೀಚಿನ ಬೆಳವಣಿಗೆಗಳಿಂದಾಗಿ ತಮ್ಮ ವೈಟ್ ಬೋರ್ಡ್ ನ 4X4 ಜೀಪ್‌ಗಳಲ್ಲಿ ಪ್ರವಾಸಿಗರನ್ನು ಮಾಂದಲಪಟ್ಟಿಗೆ ಕರೆದೊಯ್ಯುತ್ತಿದ್ದ 200 ಕ್ಕೂ ಹೆಚ್ಚು ಯುವಕರು ನಿರುದ್ಯೋಗಿಗಳಾಗಿದ್ದಾರೆ. ರಾಜಾ ಸೀಟ್‌ನ ಹೊರಗಿನ 20 ಕ್ಕೂ ಹೆಚ್ಚು ಕುಟುಂಬಗಳು ಈಗ ತಮ್ಮ ಜೀವನೋಪಾಯವನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ.

LEAVE A REPLY

Please enter your comment!
Please enter your name here