ಒಡಿಶಾ ರೈಲು ಅಪಘಾತದ ಸಿಬಿಐ ತನಿಖೆಗೆ ರೈಲ್ವೆ ಮಂಡಳಿ ಶಿಫಾರಸು

0
25

ನವದೆಹಲಿ, ಜೂ. 4 – ಭಾರತ ದೇಶ ಇದುವರೆಗೆ ನೋಡಿರದಂತಹ ರೈಲು ದುರಂತವೊಂದನ್ನು ಕಂಡಿದೆ. ಒಡಿಶಾ ಬಾಲಾಸೂರ್‌ ಬಳಿ ತ್ರಿವಳಿ ರೈಲು ದುರಂತ ನಡೆದಿದ್ದು, ಅಪಘಾತ ಕುರಿತು ಸಿಬಿಐ ತನಿಖೆಗೆ ಲ್ವೆ ಮಂಡಳಿ ಶಿಫಾರಸು ಮಾಡಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

ಈಗಾಗಲೇ ಪ್ರಾಥಮಿಕ ಕಾರಣ ತಿಳಿದು ಬಂದಿದ್ದು, ಮೂಲ ಕಾರಣವನ್ನು ಗುರುತಿಸಲಾಗಿದೆ. ಆದಷ್ಟು ಶೀಘ್ರದಲ್ಲೇ ಅಪಘಾತದ ಕಾರಣಗಳ, ಪೂರ್ತಿ ಸಂಗತಿಗಳನ್ನು ಬಹಿರಂಗಪಡಿಸಲಾಗುವುದು ಎಂದು ವೈಷ್ಣವ್ ಈ ಹಿಂದೆ ಹೇಳಿದ್ದರು. ಈಗಾಗಲೇ ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದುರಂತಕ್ಕೆ ಕಾರಣರಾದವರನ್ನು ಬಿಡುವುದಿಲ್ಲ ಎಂದು ಅವರು ಹೇಳಿದ್ದನ್ನು ಇಲ್ಲಿ ಸ್ಮರಿಸಬುದು.

ಜೋರಾಗಿ ಶಬ್ದವಾಯಿತು, ಆನಂತರ ರೈಲಿನಲ್ಲಿ ಮೇಲೆ ಮಲಗಿದ್ದವರು ಕೆಳಗೆ ಬಿದ್ದರು ದೇಶವೇ ಇದುವರೆಗೆ ನೋಡಿರದಂತಹ ರೈಲು ದುರಂತವೊಂದನ್ನು ಕಂಡಿದೆ. ಇದೀಗ ಒಡಿಶಾ ರೈಲು ದುರಂತದ ಬಗ್ಗೆ ಜಮಿಯತ್ ಉಲಮಾ-ಇ-ಹಿಂದ್ ಅಧ್ಯಕ್ಷ ಮೌಲಾನಾ ಮಹಮೂದ್ ಅಸಾದ್ ಮದನಿ ಸಂತಾಪ ವ್ಯಕ್ತಪಡಿಸಿದ್ದಾರೆ. ಅಪಘಾತಕ್ಕೆ ಕಾರಣವೇನು ಎಂಬುದರ ಬಗ್ಗೆ ಪ್ರಾಮಾಣಿಕ ತನಿಖೆಗೆ ಅವರು ಒತ್ತಾಯಿಸಿದ್ದಾರೆ. ಜಮಿಯತ್ ಉಲಮಾ-ಹಿಂದ್‌ನ ನಿಯೋಗ ಸಂತಾಪ ಜಮಿಯತ್ ಉಲಮಾ-ಹಿಂದ್‌ನ ನಿಯೋಗವು ಭಾನುವಾರ ಕಟಕ್‌ನಲ್ಲಿ ಗಾಯಾಳುಗಳು ದಾಖಲಾದ ಆಸ್ಪತ್ರೆಗೆ ಭೇಟಿ ನೀಡಿ ಸಂತ್ರಸ್ತರ ಆರೋಗ್ಯ ವಿಚಾರಿಸಿದರು. ನಂತರ ಮಾತನಾಡಿದ ಅವರು, ಒಡಿಶಾದ ಬಾಲಸೋರ್‌ನಲ್ಲಿ ಸಂಭವಿಸಿದ ಸರಣಿ ರೈಲುಗಳ ಅವಘಡ ಬಗ್ಗೆ ಕಳವಳ ವ್ಯಕ್ತಪಡಿಸಿದರು.

ದುರಂತದಲ್ಲಿ ನೂರಾರು ಮಂದಿ ಸಾವಿಗೀಡಾಗಿದ್ದು, ಅಪಘಾತದ ನಿಖರ ಕಾರಣ ಕುರಿತು ಪ್ರಾಮಾಣಿಕ ತನಿಖೆ ನಡೆಸಬೇಕು. ಮತ್ತು ಯಾವುದೇ ನ್ಯೂನತೆಗಳನ್ನು ಸರಿಪಡಿಸಬೇಕು. ಅಲ್ಲದೇ ಗಾಯಾಳುಗಳಿಗೆ ಅಗತ್ಯವಿರುವ ಎಲ್ಲ ಉತ್ತಮ ಚಿಕಿತ್ಸೆಗಳನ್ನು ಒದಗಿಸಬೇಕು ಎಂದು ಅವರು ಮನವಿ ಮಾಡಿದರು.

ಜಮಿಯತ್ ಉಲಮಾ ಒಡಿಶಾ ರಾಜ್ಯದ ಕೆಡೆಟ್‌ಗಳು ಸಂತ್ರಸ್ತರಿಗೆ ಎಲ್ಲ ರೀತಿಯ ನೆರವಿಗೆ ಮುಂದಾಗಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ಕರೆತರುವುದು ಸೇರಿದಂತೆ ಮೊದಲಾದ ಹಂತದ ಸಹಾಯಕ್ಕೆ ಮುಂದಾಗಿದ್ದಾರೆ. ಜನರನ್ನು ಆಸ್ಪತ್ರೆಗೆ ಕರೆದೊಯ್ಯಲು ಹೆಚ್ಚಿನ ಆಂಬ್ಯುಲೆನ್ಸ್‌ಗಳನ್ನು ಒದಗಿಸಲಾಗಿದೆ ಎಂದರು

LEAVE A REPLY

Please enter your comment!
Please enter your name here