ವಿಶ್ವದಲ್ಲಿ ಕೊರೋನಾ ಆರ್ಭಟ: 58 ಲಕ್ಷಕ್ಕೇರಿದ ಸೋಂಕಿತರ ಸಂಖ್ಯೆ, 3.60 ಲಕ್ಷ ಮಂದಿ ಬಲಿ

0
72

ಲಂಡನ್: ವಿಶ್ವದೆಲ್ಲೆಡೆ ಕೊರೋನಾ ವೈರಸ್ ತನ್ನ ಆರ್ಭಟವನ್ನು ಮುಂದುವರೆಸಿದ್ದು, ಈ ವರೆಗೂ 58 ಲಕ್ಷಕ್ಕೂ ಹೆಚ್ಚು ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಅಲ್ಲದೆ 3.8 ಲಕ್ಷ ಜನರು ಬಲಿಯಾಗಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ. 

ವಿಶ್ವದೆಲ್ಲೆಡೆ ಒಟ್ಟಾರೆಯಾಗಿ 58,60,213 ಮಂದಿ ಸೋಂಕಿಗೊಳಗಾಗಿದ್ದು, 25,40,993ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಇನ್ನು ಮಹಾಮಾರಿ ವೈರಸ್’ಗೆ 3,60,049 ಮಂದಿ ಬಲಿಯಾಗಿದ್ದಾರೆ. 

ಇತರೆ ರಾಷ್ಟ್ರಗಳಿಗೆ ಹೋಲಿಕೆ ಮಾಡಿದರೆ ಅಮೆರಿಕಾದಲ್ಲಿಯೇ ಹೆಚ್ಚು ಸೋಂಕಿತರಿದ್ದು, ಒಟ್ಟು 17,21,753 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಇನ್ನು ಬ್ರೆಜಿಲ್ 438,812, ರಷ್ಯಾ 379,051, ಸ್ಪೇನ್ 284,986, ಬ್ರಿಟನ್ 269,127, ಇಟಲಿ 231,732, ಫ್ರಾನ್ಸ್ 186,238, ಜರ್ಮನಿ 182,452 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. 

Advertisements

LEAVE A REPLY

Please enter your comment!
Please enter your name here