ಕರುಳಿನ ಆರೋಗ್ಯ ಕಾಪಾಢಿಕೊಳ್ಳಲು ನೈಸರ್ಗಿಕ ಆಹಾರ ಸೇವಿಸಿ

0
35

ನಾವು ನಮ್ಮ ಆರೋಗ್ಯವನ್ನು ಮತ್ತು ನಮ್ಮ ಚೈತನ್ಯವನ್ನು ಕಾಪಾಡಿಕೊಳ್ಳಲು ಬಗೆ ಬಗೆಯ ಆಹಾರ ಗಳನ್ನು ಪ್ರತಿ ದಿನ ತಿನ್ನುತ್ತೇವೆ. ಅದರಲ್ಲಿ ಕೊಬ್ಬಿನ ಅಂಶ ತುಂಬಿದ ಆಹಾರಗಳು, ಎಣ್ಣೆಯಲ್ಲಿ ಕರಿದ ಆಹಾರಗಳು, ಸಂಸ್ಕರಿಸಿದ ಆಹಾರಗಳು ಇತ್ಯಾದಿ ಸೇರಿರುತ್ತವೆ. ಇವುಗಳಿಂದ ನಮ್ಮ ಆರೋಗ್ಯ ಹಾಳಾಗುವುದು ಖಂಡಿತ.

ಏಕೆಂದರೆ ಇವುಗಳು ನಮ್ಮ ದೇಹದಲ್ಲಿ ಅದರಲ್ಲೂ ರಕ್ತನಾಳಗಳಲ್ಲಿ ಸೇರಿಕೊಂಡು ದೇಹದ ಅಂಗಾಂಗಗಳಿಗೆ ತೊಂದರೆ ನೀಡುತ್ತವೆ. ಹಾಗಾಗಿ ಒಳ್ಳೆಯ ಆಹಾರಗಳನ್ನು ಸೇವನೆ ಮಾಡಬೇಕು. ಮುಖ್ಯವಾಗಿ ನಮ್ಮ ದೇಹವನ್ನು ನಾವು ಆಗಾಗ ಸ್ವಚ್ಛ ಮಾಡಿಕೊಳ್ಳುತ್ತಿರಬೇಕು. ಇಲ್ಲಿ ನಮ್ಮ ಕರುಳಿನ ಭಾಗವನ್ನು ಸ್ವಚ್ಛ ಮಾಡುವ ನೈಸರ್ಗಿಕ ಆಹಾರ ಪದಾರ್ಥಗಳ ಬಗ್ಗೆ ತಿಳಿಸಿ ಕೊಡಲಾಗಿದೆ, ಮುಂದೆ ಓದಿ…

ಉಪ್ಪಿನ ನೀರು ಅಥವಾ ಸಾಧಾರಣ ನೀರು

  • ಹೆಚ್ಚಾಗಿ ನೀರು ಕುಡಿಯುವುದರಿಂದ ಕರುಳಿನ ಭಾಗದಲ್ಲಿ ರುವ ವಿಷಕಾರಿ ಅಂಶಗಳು ದೇಹದಿಂದ ಹೊರ ಹೋಗುತ್ತವೆ ಮತ್ತು ಇದರಿಂದ ಜೀರ್ಣಶಕ್ತಿ ಹೆಚ್ಚಾಗುತ್ತದೆ.
  • ಪ್ರತಿದಿನ ಉಗುರು ಬೆಚ್ಚಗಿನ ನೀರನ್ನು ಎಂಟು ಗ್ಲಾಸ್ ಕುಡಿಯುವ ಅಭ್ಯಾಸ ಮಾಡಿಕೊಳ್ಳಬೇಕು. ಆದರೆ ಯಾರಿಗೆ ಮಲಬದ್ಧತೆ ಸಮಸ್ಯೆ ಇರುತ್ತದೆ ಅಂತಹ ವರು ನೀರಿಗೆ ಚಿಟಿಕೆ ಉಪ್ಪು ಹಾಕಿ ಕುಡಿಯುವುದು ಒಳ್ಳೆಯದು.
  • ಬೆಳಗ್ಗೆ ತಿಂಡಿ ತಿನ್ನುವ ಮುಂಚೆ ಖಾಲಿ ಹೊಟ್ಟೆಯಲ್ಲಿ ಉಪ್ಪು ನೀರನ್ನು ಕುಡಿದರೆ ಸಾಕಷ್ಟು ಅನುಕೂಲ ವಾಗುತ್ತದೆ.​

ಕರುಳಿನ ಆರೋಗ್ಯ ಕಾಪಾಡಿಕೊಳ್ಳಲು ಇಷ್ಟು ಮಾಡಿ ಸಾಕು!

ನಿಂಬೆಹಣ್ಣಿನ ಡ್ರಿಂಕ್

  • ನಿಂಬೆಹಣ್ಣು ಸಹ ನಮ್ಮ ದೇಹದಿಂದ ವಿಷಕಾರಿ ಅಂಶ ಗಳನ್ನು ತೆಗೆದು ಹಾಕುತ್ತದೆ ಜೊತೆಗೆ ಮೆಟಬಾಲಿಸಂ ಪ್ರಕ್ರಿಯೆಯನ್ನು ಹೆಚ್ಚಿಸಿ ವಿಟಮಿನ್ ಸಿ ನಮಗೆ ಹೆಚ್ಚಾಗಿ ಸಿಗುವಂತೆ ಮಾಡುತ್ತದೆ.
  • ಆರೋಗ್ಯಕರವಾದ ಜೀರ್ಣಶಕ್ತಿ ನಮ್ಮದಾಗುತ್ತದೆ. ನಮ್ಮ ದೇಹದಲ್ಲಿ ಜೀರ್ಣಾಂಗ ರಸಗಳು ಉತ್ಪತ್ತಿಯಾಗುವಂತೆ ಸಹ ಇದು ನೋಡಿಕೊಳ್ಳುತ್ತದೆ. ನೈಸರ್ಗಿಕವಾಗಿ ನಮ್ಮ ಕರುಳಿನ ಭಾಗವನ್ನು ಸ್ವಚ್ಛ ಮಾಡುತ್ತದೆ.
  • ಹಸಿ ತರಕಾರಿ ಜ್ಯೂಸ್ ಮತ್ತು ಸ್ಮೂಥಿ

  • ನಮ್ಮ ದೇಹದ ಜೀರ್ಣಶಕ್ತಿಯನ್ನು ಹೆಚ್ಚಿಸುವಲ್ಲಿ ಹಸಿ ತರಕಾರಿ ಜ್ಯೂಸ್ ಪ್ರಮುಖವಾಗಿ ಕೆಲಸ ಮಾಡುತ್ತದೆ.
  • ಇದರಲ್ಲಿ ನಾರಿನ ಅಂಶ ಹೆಚ್ಚಾಗಿದ್ದು, ನಮ್ಮ ತ್ವಚೆಗೆ ಅನುಕೂಲವಾದ ಪೌಷ್ಟಿಕ ಸತ್ವಗಳು ಸಹ ಇದರಲ್ಲಿ ಸಿಗುತ್ತದೆ.
  • ಉದಾಹರಣೆಗೆ ಸೌತೆಕಾಯಿ, ಟೊಮೇಟೊ, ಪಾಲಕ್ ಸೊಪ್ಪು, ಕ್ಯಾರೆಟ್, ಬೀಟ್ರೂಟ್ ಇತ್ಯಾದಿಗಳು ನಮ್ಮ ಕರುಳನ್ನು ಸ್ವಚ್ಛ ಮಾಡುತ್ತವೆ.

ಹಣ್ಣುಗಳ ಜ್ಯೂಸ್‌

  • ಹಣ್ಣುಗಳ ಜ್ಯೂಸ್‌‌ನಲ್ಲಿ ಸಿಗುವ ಆರೋಗ್ಯಕಾರಿ ಪ್ರಯೋಜನ ಗಳ ಬಗ್ಗೆ ನಮಗೆಲ್ಲಾ ಗೊತ್ತೇ ಇದೆ. ತನ್ನಲ್ಲಿ ನೈಸರ್ಗಿಕ ಸಿಹಿ ಅಂಶಗಳನ್ನು ಒಳಗೊಂಡಿ ರುವ, ಇಂತಹ ಹಣ್ಣಿನ ಜ್ಯೂಸ್ ಅನ್ನು ಕುಡಿಯುವು ದರಿಂದ ಕರುಳನ್ನು ಶುದ್ಧವಾಗಿ ಇಡಲು ಸಹಯಾ ವಾಗುತ್ತದೆ.
  • ಪ್ರಮುಖವಾಗಿ ಹಣ್ಣಿನ ಜ್ಯೂಸ್‌ನಲ್ಲಿ ಇರುವಂತಹ ಆರೋಗ್ಯಕಾರಿ ಕಿಣ್ವಗಳು ಹಾಗೂ ಶುದ್ಧೀಕರಿಸುವ ಉಪ್ಪಿ ನಾಂಶವು, ಕರುಳಿನಲ್ಲಿ ಕಂಡುಬರುವ ವಿಷಕಾರಿ ತ್ಯಾಜ್ಯ ಗಳನ್ನು ದೂರ ಮಾಡುವುದು. ಹೀಗಾಗಿ ಪ್ರತಿದಿನ ನೈಸರ್ಗಿಕವಾಗಿ ಸಿಗುವ ಹಣ್ಣು ಗಳಿಂದ ಮಾಡಿದ ಜ್ಯೂಸ್ ಅನ್ನು ಕುಡಿಯುವ ಅಭ್ಯಾಸ ಮಾಡಿಕೊಂಡರೆ ಒಳ್ಳೆಯದು.​

ದಿನಕ್ಕೊಂದು ಸೇಬು ಹಣ್ಣು ತಿನ್ನಿ

ದಿನಕ್ಕೊಂದು ಸೇಬು ಹಣ್ಣು ತಿನ್ನಿ
  • ದಿನಕ್ಕೊಂದು ಸೇಬು ತಿಂದರೆ ವೈದ್ಯರಿಂದ ದೂರವಿರ ಬಹುದು ಎನ್ನುವ ನಾಣ್ಣುಡಿ ನಮಗೆಲ್ಲಾ ಗೊತ್ತೇ ಇದೆ. ಪ್ರಮುಖವಾಗಿ ಈ ಹಣ್ಣಿನಲ್ಲಿ ಸಿಗುವ ಹಲವಾರು ಬಗೆಯ ಪೌಷ್ಟಿಕ ಸತ್ವಗಳು ಹಾಗೂ ಆರೋಗ್ಯ ಕಾರಿ ಅಂಶಗಳು, ದೇಹವನ್ನು ಅನಾರೋಗ್ಯದಿಂದ ಕಾಪಾಡುವುದು.
  • ಇನ್ನು ಸೇಬು ಹಣ್ಣಿನಲ್ಲಿ ಇರುವಂತಹ ಪೆಕ್ಟಿನ್ ಎನ್ನುವ, ಆರೋಗ್ಯಕಾರಿ ಅಂಶವು ಕರುಳನ್ನು ವಿಷ ಕಾರಿ ಅಂಶ ದಿಂದ ದೂರವಿಡುವುದು ಹಾಗೂ ಕರುಳಿಗೆ ಸಮಸ್ಯೆ ಬರದೇ ಇರುವ ಹಾಗೆ ಕಾಪಾಡುವುದು.
  • ಪ್ರಮುಖವಾಗಿ ಸೇಬು ಹಣ್ಣಿನಲ್ಲಿ ಯಥೇಚ್ಛವಾಗಿ ನಾರಿ ನಾಂಶ ಕಂಡು ಬರುವುದರಿಂದ, ಇವು ಜೀರ್ಣ ಕ್ರಿಯೆ ವ್ಯವಸ್ಥೆಯನ್ನು ಸುಧಾರಣೆ ಮಾಡಲು ನೆರವಾಗುವುದು.
  • ಆಪಲ್ ಸೈಡರ್ ವಿನೆಗರ್

    ಆಪಲ್ ಸೈಡರ್ ವಿನೆಗರ್
    • ಇದು ಆರೋಗ್ಯಕರವಾದ ಕರುಳಿನ ಬ್ಯಾಕ್ಟೀರಿಯಾ ಬೆಳ ವಣಿಗೆಯಲ್ಲಿ ಸಹಾಯ ಮಾಡುತ್ತದೆ. ಇದರ ಜೊತೆಗೆ ಕರುಳಿನ ಭಾಗವನ್ನು ಸ್ವಚ್ಛ ಮಾಡುತ್ತದೆ.
    • ಇದರಲ್ಲಿ ಆಂಟಿ ಆಕ್ಸಿಡೆಂಟ್ ಮತ್ತು ಆಂಟಿ ಬಯೋಟಿಕ್ ಗುಣ ಲಕ್ಷಣಗಳು ಹೆಚ್ಚಾಗಿದ್ದು, ಕರುಳಿನ ಕಾರ್ಯ ಚಟು ವಟಿಕೆ ಉತ್ತಮವಾಗಿಸುವಲ್ಲಿ ಇದರ ಪಾತ್ರ ತುಂಬಾ ದೊಡ್ಡದಾಗಿ ರುತ್ತದೆ. ದೇಹದ ಜೀರ್ಣಾಂಗ ವ್ಯವಸ್ಥೆ ಇದರಿಂದ ಅಚ್ಚುಕಟ್ಟಾಗಿ ನಡೆಯುತ್ತದೆ.​

LEAVE A REPLY

Please enter your comment!
Please enter your name here