ಸೊಸೆ ಭವಾನಿಗೆ ಮೈಸೂರು ಚಾಮರಾಜ ಕ್ಷೇತ್ರದಿಂದ ಕಣಕ್ಕಿಳಿಸಲು ಎಚ್‌ಡಿಡಿ ನಿರ್ಧಾರ

0
9112

ಹಾಸನ, ಏ.14 – ಹಾಸನ ಕ್ಷೇತ್ರದ ಟಿಕೆಟ್‌ಗಾಗಿ ಬೇಡಿಕೆ ಇಟ್ಟಿರುವ ಭವಾನಿ ರೇವಣ್ಣ ಅವರನ್ನು ಮೈಸೂರಿನ ಚಾಮರಾಜ ಕ್ಷೇತ್ರದಿಂದ ಕಣಕ್ಕೆ ಇಳಿಸಲು ವರಿಷ್ಠ ಎಚ್‌.ಡಿ.ದೇವೇಗೌಡ ಅವರು ನಿರ್ಧರಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧೆ ಮಾಡಲೇಬೇಕೆಂದು ಭವಾನಿ ರೇವಣ್ಣ ಪಟ್ಟು ಹಿಡಿದಿರುವ ಹಿನ್ನೆಲೆಯಲ್ಲಿ ಅವರನ್ನು ಹಾಸನ ಕ್ಷೇತ್ರದ ಬದಲು ಬೇರೆ ಒಂದು ಕ್ಷೇತ್ರದಿಂದ ಕಣಕ್ಕಿಳಿಸುವ ಸಾಧ್ಯತೆ ಇದೆ. ಭವಾನಿ ಮನವೊಲಿಸಿ ಚಾಮರಾಜ ಕ್ಷೇತ್ರದಲ್ಲಿ ಕಣಕ್ಕಿಳಿಸಲು ಕಸರತ್ತು ಆರಂಭವಾಗಿದೆಯಂತೆ.

ಸ್ವರೂಪ್‌ ಅವರನ್ನು ಹಾಸನದಿಂದ ಹಾಗೂ ಭವಾನಿ ಅವರನ್ನು ಚಾಮರಾಜ ಕ್ಷೇತ್ರದಿಂದ ಕಣಕ್ಕೆ ಇಳಿಸುವ ನಿರ್ಧಾರ ಮಾಡಲಾಗಿದೆ. ಈ ಮೂಲಕ ಅಸಮಾಧಾನ ನಿವಾರಣೆಗೆ ಮುಂದಾಗಿದ್ದಾರೆ, ಚಾಮರಾಜ ಕ್ಷೇತ್ರದಲ್ಲಿ ಒಕ್ಕಲಿಗರ ಸಂಖ್ಯೆ ಹೆಚ್ಚಳ ಹಿನ್ನೆಲೆ ಗೆಲ್ಲುವ ನಿರೀಕ್ಷೆ ಇದೆ. ಆದರೆ, ಭವಾನಿ ಇದನ್ನು ಒಪ್ಪಲಿದ್ದಾರೆಯೇ ಎನ್ನುವುದು ಸ್ಪಷ್ಟವಾಗಿಲ್ಲ ಎನ್ನಲಾಗಿದೆ.

ಮೈಸೂರಿನ ಚಾಮರಾಜ ಕ್ಷೇತ್ರದಲ್ಲಿ ಒಕ್ಕಲಿಗ ಮತಗಳು ಹೆಚ್ಚಿದ್ದು, ಜೆಡಿಎಸ್‍ಗೆ ವರದಾನ ಆಗಲಿದೆ ಎಂಬುದು ಜೆಡಿಎಸ್‌ ಮುಖಂಡರ ಲೆಕ್ಕಾಚಾರ. ಈ ಕುರಿತು ಭವಾನಿ ರೇವಣ್ಣ ಪ್ರತಿಕ್ರಿಯಿಸಲು ನಿರಾಕರಿಸಿದರು.

LEAVE A REPLY

Please enter your comment!
Please enter your name here