ಕೋವಿಡ್-19: 24 ಗಂಟೆಗಳಲ್ಲಿ 909 ಹೊಸ ಪ್ರಕರಣಗಳು, ಭಾರತದಲ್ಲಿ ಸೋಂಕಿತರ ಸಂಖ್ಯೆ 8,000ಕ್ಕೇರಿಕೆ, 273 ಮಂದಿ ಬಲಿ

0
84

ನವದೆಹಲಿ; ಲಾಕ್’ಡೌನ್ ಇದ್ದರೂ ಕೊರೋನಾ ವೈರಸ್ ತಾಂಡವ ನೃತ್ಯ ಪ್ರದರ್ಶಿಸುತ್ತಿದ್ದು,  ಕಳೆದ 24 ಗಂಟೆಗಳಲ್ಲಿ 909 ಮಂದಿಯಲ್ಲಿ ಹೊಸದಾಗಿ ಸೋಂಕು ಕಂಡು ಬಂದಿದೆ. ಇದರಿಂದಾಗಿ ದೇಶದಲ್ಲಿ ಸೋಂಕಿತರ ಸಂಖ್ಯೆ 8 ಸಾವಿರಕ್ಕೆ ಏರಿಕೆಯಾಗಿದೆ. 

ಮತ್ತೊಂದೆಡೆ ಮಹಾಮಾರಿ 36 ಮಂದಿಯನ್ನು ಬಲಿ ಪಡೆದುಕೊಂಡಿದೆ, ಹೀಗಾಗಿ ದೇಶಕ್ಕೆ ಕೊರೋನಾ ಕಾಲಿರಿಸಿದ ಬಳಿಕ ಅದಕ್ಕೆ ಬಲಿಯಾದವರ ಸಂಖ್ಯೆ 273ಕ್ಕೆ ಏರಿಕೆಯಾಗಿದ್ದು, 300ರ ಗಡಿಗೆ ಬಂದು ತಲುಪಿದೆ. 

ಜಾಗತಿಕವಾಗಿ ಗಮನಿಸಿದರೆ, ಬಾರತದಲ್ಲಿನ ಸೋಂಕಿನ ಸಂಖ್ಯೆ ಹಾಗೂ ಸಾವಿಗೀಡಾದವರ ಸಂಖ್ಯೆ ತೀರಾ ಕಡಿಮೆ ಪ್ರಮಾಣದಲ್ಲಿಯೇ ಇದೆ ಎಂದು ತಜ್ಞರು ತಿಳಿಸಿದ್ದಾರೆ. 

ಮಹಾರಾಷ್ಟ್ರದಲ್ಲಿ ಶನಿವಾರ 187ಮಂದಿಗೆ ಹೊಸದಾಗಿ ಸೋಂಕು ಕಂಡುಬಂದಿದ್ದು, ಒಟ್ಟು ಸೋಂಕಿತರ ಸಂಖ್ಯೆ 1761ಕ್ಕೆ ಹೆಚ್ಚಳವಾಗಿದೆ. ಮುಂಬೈವೊಂದರಲ್ಲೇ 1146 ಮಂದಿ ಸೋಂಕಿತರಿದ್ದಾರೆ. 

ಪುಣೆಯಲ್ಲಿ 228 ಮಂದಿ ಇದ್ದಾರೆ. 17 ಮಂದಿ ಸಾವಿಗೀಡಾಗಿದ್ದು, ಮೃತರ ಸಂಖ್ಯೆ 127ಕ್ಕೇರಿಕೆಯಾಗಿದೆ. ಮುಂಬೈವೊಂದರಲ್ಲೇ ಶಿವಾರ 12 ಮಂದಿ ಮರಣವನ್ನಪ್ಪಿದ್ದಾರೆ. ಈ ನಡುವೆ ದೆಹಲಿಯಲ್ಲಿ 166 ಸೋಂಕಿತರು ಪತ್ತೆಯಾಗಿದ್ದು, ಒಟ್ಟು ಕೊರೋನಾ ಪೀಡಿತರ ಸಂಖ್ಯೆ 1000ದ ಗಡಿ ದಾಟಿ 1069ಕ್ಕೆ ಹೆಚ್ಚಲವಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ ಈವರೆಗೆ 14 ಮಂದಿ ಸಾವಿಗೀಡಾಗಿದ್ದಾರೆ.

LEAVE A REPLY

Please enter your comment!
Please enter your name here