ಕರೋನಾ ಇಂಪ್ಯಾಕ್ಟ್ : ಮುದ್ರಣ, ಹಂಚಿಕೆ ಸ್ಥಗಿತಗೊಳಿಸಿದ ಮೈಸೂರಿನ ಪತ್ರಿಕೆ..!

0
139

ಮೈಸೂರು, ಮಾ.27 : ಕರೋನಾ ವೈರಸ್ ಹರಡುವ ಭೀತಿ ಕಾರಣ ಮೈಸೂರು ಮೂಲದ ಪ್ರಾದೇಶಿಕ ಪತ್ರಿಕೆಗಳ ಮುದ್ರಣ ಕಾರ್ಯ ಸ್ಥಗಿತಗೊಳಿಸಲಾಗಿದೆ.
ಇದೇ ವೇಳೆ ನಗರದ ಪತ್ರಿಕೆ ವಿತರಕರು ಸಹ ಪೇಪರ್ ಹಾಕಲು ಹಿಂದೇಟು ಹಾಕಿದ್ದರಿಂದ ಕಳೆದೆರೆಡು ದಿನಗಳಿಂದ ಮೈಸೂರಿನಲ್ಲಿ ಪತ್ರಿಕೆ ವಿತರಣೆ ಬಹುತೇಕ ಸ್ಥಗಿತಗೊಂಡಿದೆ.

Advertisements

ನಗರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರಾದೇಶಿಕ ಪತ್ರಿಕೆಗಳಾದ ‘ ಮೈಸೂರಿನ ಮಿತ್ರ ‘ ಹಾಗೂ ‘ ಸ್ಟಾರ್ ಆಫ್ ಮೈಸೂರು’ ಕ್ರಮವಾಗಿ ದಿನ ಹಾಗೂ ಸಂಜೆ ಪತ್ರಿಕೆಯ ಮುದ್ರಣ ಸ್ಥಗಿತಗೊಳಿಸಲಾಗಿದೆ. ಈ ತಿಂಗಳ 31 ರ ವರೆಗೂ ಈ ಪತ್ರಿಕೆಗಳ ಮುದ್ರಣ ಸ್ಥಗಿತಗೊಳಿಸಿ ಸಿಬ್ಬಂದಿಗೆ ರಜೆ ಘೋಷಿಸಲಾಗಿದೆ. ಆ ಮೂಲಕ ಸಂಸ್ಥೆ ಸಿಬ್ಬಂದಿಗಳ ಆರೋಗ್ಯ ಬಗೆಗೂ ಸಂಸ್ಥೆಯ ಮಾಲೀಕರು ಹಾಗೂ ಸಂಪಾದಕರು ಕಾಳಜಿ ವಹಿಸಿದ್ದು ಸಾರ್ವಜನಿಕ ವಲಯದಲ್ಲಿ ಶ್ಲಾಘನೆಗೆ ಕಾರಣವಾಗಿದೆ.

ಈ ನಡುವೆ ಸಾಮಾಜಿಕ ಮಾಧ್ಯಮಗಳಲ್ಲಿ ಪತ್ರಿಕೆಗಳ ಮೂಲಕವು ಕರೋನಾ ವೈರಸ್ ಹರಡುತ್ತದೆ. ಆದ್ದರಿಂದ ಪತ್ರಿಕೆ ತರಿಸುವುದನ್ನು ನಿಲ್ಲಿಸಿ ಎಂಬ ಚರ್ಚೆ ಪ್ರಾರಂಭಗೊಂಡಿದ್ದು, ಇದರ ವಿರುದ್ಧ ಕನ್ನಡದ ಪತ್ರಿಕೆಗಳ ಸಂಪಾದಕರು ಒಗ್ಗೂಡಿ, ಸಾಮಾಜಿಕ ಮಾಧ್ಯಮಗಳಲ್ಲಿ ಬಂದ ಸುದ್ದು ಸುಳ್ಳು. ಪತ್ರಿಕೆಗಳಿಂದ ಕರೋನ ಹರಡುವುದಿಲ್ಲ ಎಂದು ಸಂಪಾದಕೀಯವನ್ನು ಬರೆದಿದ್ದರು. ಇದಕ್ಕೆ ಪೂರಕವಾಗಿ ರಾಜಕಾರಣಿಗಳ ಸಹ ಹೇಳಿಕೆ ನೀಡಿದ್ದರು. ಆದರೂ ಜನ ಸಮಧಾನಗೊಳ್ಳಲಿಲ್ಲ.

ಪರಿಣಾಮ ಕರೋನಾ ಕಾರಣದಿಂದ ನಗರದ ಜನತೆ ದಿನಪತ್ರಿಕೆ ಕೊಳ್ಳಲು ಹಿಂದೇಟು ಹಾಕುವುದು ಮುಂದುವರಿಯಿತು. ಜತೆಗೆ ಈಗಾಗಲೇ ಮನೆಗೆ ಪತ್ರಿಕೆ ತರಿಸಿಕೊಳ್ಳುತ್ತಿದ್ದವರು ಸಹ ಪೇಪರ್ ಅನ್ನು ಸ್ಥಗಿತಗೊಳಿಸಿದರು.
ಆದ್ದರಿಂದ ಇಂಥ ಪರಿಸ್ಥಿತಿಯಲ್ಲಿ ಪತ್ರಿಕೆ ವಿತರಿಸುವುದು ಅಸಾಧ್ಯ ಎಂದು ಮೈಸೂರು ನಗರದ ಪತ್ರಿಕೆ ವಿತರಕರು ಕೆಲ ದಿನಗಳ ಹಿಂದೆ ಸಭೆ ಸೇರಿ ತೀರ್ಮಾನಿಸಿದ್ದರು. ಜತೆಗೆ ಪೇಪರ್ ಹಾಕುವ ಹುಡುಗರ ಆರೋಗ್ಯ ಸಲುವಾಗಿಯಾದ್ರು ಸರಕಾರ ಆದೇಶಿಸಿರುವ ಲಾಕ್ ಡೌನ್ ದಿನಾಂಕದ ವರೆಗೆ ಪತ್ರಿಕೆ ವಿತರಣೆ ಮಾಡುವುದು ಬೇಡ ಎಂಬ ತೀರ್ಮಾನಕ್ಕೆ ಬರಲಾಯಿತು. ಈ ಕಾರಣ ಕಳೆದೆರೆಡು ದಿನಗಳಿಂದ ನಗರದಲ್ಲಿ ಮನೆಮನೆಗೆ ಪತ್ರಿಕೆ ಹಂಚುವುದು ಬಹುತೇಕ ಸ್ಥಗಿತಗೊಂಡಿದೆ.

Advertisements

LEAVE A REPLY

Please enter your comment!
Please enter your name here