ಬೆಂಗಳೂರು, ಮಾ.27 – ರಾಸಲೀಲೆ ಸಿಡಿ ಪ್ರಕರಣದಲ್ಲಿ ರಾಜ್ಯ ಸರ್ಕಾರ ಉತ್ತರ ಪ್ರದೇಶ ಮಾಡೆಲ್ ಅನುಸರಿಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಉತ್ತರ ಪ್ರದೇಶದಲ್ಲಿ ಕುಲದೀಪ್ ಸಿಂಗ್ ನಿಂದ ಅತ್ಯಾಚಾರಕ್ಕೆ ಒಳಪಟ್ಟ ಸಂತ್ರಸ್ತೆಯನ್ನು ಯೋಗಿ ಸರ್ಕಾರ ನಡೆಸಿಕೊಂಡ ಮಾದರಿಯಲ್ಲೇ ರಾಜ್ಯ ಬಿಜೆಪಿ ಸರ್ಕಾರ ಸಿಡಿ ಯುವತಿಯನ್ನು ನಡೆಸಿಕೊಳ್ಳುತ್ತಿದೆ ಎಂದು ಟೀಕಿಸಿದೆ.
ಯುಪಿಯಲ್ಲಾದಂತೆ ಇಲ್ಲೂ ಯುವತಿ ಜೀವಕ್ಕೆ ಅಪಾಯವಾಗುವ ಮುನ್ನ ರಮೇಶ್ ಜಾರಕಿಹೊಳಿಯನ್ನು ಬಂಧಿಸುವಂತೆ ಒತ್ತಾಯಿಸಿದೆ. ಸರ್ಕಾರವನ್ನೇ ನಾಶ ಮಾಡುತ್ತೇನೆ ಎಂದು ಬೆದರಿಕೆ ಒಡ್ಡುವ ಮಾಜಿ ಮಂತ್ರಿ ಸಾಕ್ಷಿ ನಾಶ ಮಾಡದೆ ಇರುವರೆ?ಎಂದು ಪ್ರಶ್ನಿಸಿದೆ.
ಈ ಮಧ್ಯೆ ನಾವು ಸಾರ್ವಜನಿಕ ಜೀವನದಲ್ಲಿ ಇರುವವರು ನೊಂದವರು, ಕಷ್ಟದಲ್ಲಿರುವವರು ಸಹಾಯ ಕೇಳಿ ಬರುವುದು ಸಾಮಾನ್ಯ. ಅದೇ ರೀತಿ ಆ ನೊಂದ ಯುವತಿಯೂ ನನ್ನನ್ನು ಸಂಪರ್ಕಿಸಲು ಪ್ರಯತ್ನಿಸಿರಬಹುದು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಪ್ರತಿದಿನ ಮನೆ ಹಾಗೂ ಕಚೇರಿಗೆ ಹಲವರು ತಮ್ಮ ಸಮಸ್ಯೆ ನೋವು ಹೇಳಿಕೊಂಡು ಬರುತ್ತಾರೆ. ಹಾಗೆ ಬಂದವರಿಗೆ ಕಷ್ಟ ಆಲಿಸುವುದು ನಮ್ಮ ಕರ್ತವ್ಯ ಎಂದು ಅವರು ತಿಳಿಸಿದ್ದಾರೆ.