ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದ್ದು, ಇದು ದಿ ಬೆಸ್ಟ್‌ ಬಹುರೂಪಿ: ಅಡ್ಡಂಡ ಸಿ ಕಾರ್ಯಪ್ಪ

0
18

ಮೈಸೂರು,ಮಾ.21 – ಬಹುರೂಪಿ ರಾಷ್ಟ್ರೀಯ ರಂಗೋತ್ಸವ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದ್ದು, ಇಲ್ಲಿವರೆಗಿನ ‘ದಿ ಬೆಸ್ಟ್‌ ಬಹುರೂಪಿ’ ಎನ್ನಿಸಿಕೊಂಡಿದೆ ಎಂದು  ರಂಗಾಯಣ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ ಹೇಳಿದ್ದಾರೆ.

ಬಹುರೂಪಿ ಮುಕ್ತಾಯಗೊಂಡ ಹಿನ್ನೆಲೆ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ‘ಯಾವುದೇ ಕಪ್ಪುಚುಕ್ಕೆ ಇಲ್ಲದೆ, ಯಾರೂ ಒಂದೇ ಒಂದು ಚಕಾರ ಎತ್ತದೆ, ದೋಷವಿಲ್ಲದೆ ಬಹುರೂಪಿ ಸಂಪನ್ನಗೊಂಡಿದೆ. ಮೊದಲ ದಿನದಿಂದಲೇ ಎಲ್ಲವೂ ಅಂದುಕೊಂಡಂತೆಯೇ ಆಗಿದೆ. ಅದರಲ್ಲಿಯೂ ತಾಯಿ ಎನ್ನುವ ವಿಷಯ ಬಹುವಾಗಿ ಆಪ್ತವಾಗಿತ್ತು. ತಾಯಿ ಆಶಯ ಕೇವಲ ವಿಚಾರಗೋಷ್ಠಿಗಳಿಗೆ ಮಾತ್ರವಲ್ಲದೆ ಚಲನಚಿತ್ರೋತ್ಸವ, ಕಲಾಪ್ರದರ್ಶನ ಸೇರಿದಂತೆ ಎಲ್ಲದರಲ್ಲಿಯೂ ಕಂಡುಬಂತು ಎಂದರು.

ಇದು ಮತ್ತೊಂದು ದಸರಾ ಎನ್ನುವಂತೆ ಜನರು ಸಂಭ್ರಮಿಸಿದ್ದಾರೆ. ರಾಷ್ಟ್ರೀಯ ನಾಟಕ ಶಾಲೆಯ ಪರಿಣಿತರು, ಅಂತಾರಾಷ್ಟ್ರೀಯ ಮಟ್ಟದ ನಿರ್ದೇಶಕರು, ಕಲಾವಿದರು ಮೈಸೂರಿಗೆ ಆಗಮಿಸಿ ಕಾರ್ಯಕ್ರಮ ನೀಡಿದ್ದಾರೆ. ರಂಗಾಯಣದಲ್ಲಿನ ಮನೆಯ ವಾತಾವರಣವನ್ನು ಗಮನಿಸಿ ಪ್ರಶಂಸಿಸಿದ್ದಾರೆ ಎಂದು ತಿಳಿಸಿದರು.

ಎಲ್ಲ ಕಲಾವಿದರನ್ನೂ ಸಮಾನ ಭಾವನೆಯಿಂದ ನೋಡಿ ಗೌರವಿಸಲಾಗಿದೆ. ಜಾನಪದ ಕಲೋತ್ಸವದಲ್ಲಿ ಭಾಗವಹಿಸಿದವರಿಗೂ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದವರಿಗೂ ಏಕ ರೂಪದ ಗೌರವ ನೀಡುವುದರೊಂದಿಗೆ ಒಂದೇ ರೀತಿಯ ವ್ಯವಸ್ಥೆ ಮಾಡಲಾಗಿತ್ತು. ಸಾವಿರಾರು ಪ್ರೇಕ್ಷಕರು ಒಂದೂ ಅಪಸ್ವರ ಎತ್ತದೆ ಕಾರ್ಯಕ್ರಮಗಳನ್ನು ವೀಕ್ಷಿಸಿದರು. ಇಂಥ ರಂಗಾಯಣ ನಮಗೆ ಬೇಕಿತ್ತು ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಾಮಾನ್ಯ ಪ್ರೇಕ್ಷಕರು ಸೇರಿದಂತೆ ಸಚಿವರ ತನಕ ಹಲವು ಮಂದಿ ಬಹುರೂಪಿ ಕುರಿತು ಶ್ಲಾಘಿಸಿದ್ದಾರೆ ಎಂದು ಹೇಳಿದರು.

ರಂಗಾಯಣದಲ್ಲಿನ ಮಳಿಗೆಗಳಲ್ಲಿ ಉತ್ತಮ ವ್ಯಾಪಾರವಾಗಿದೆ. ಅತ್ಯಂತ ಕಡಿಮೆ ಬಾಡಿಗೆಯಲ್ಲಿ ಮಳಿಗೆಗಳನ್ನು ನೀಡಲಾಗಿತ್ತು. ನಾಟಕ, ಚಲನಚಿತ್ರೋತ್ಸವ, ಆಹಾರ ಮೇಳ ಸೇರಿದಂತೆ ಎಲ್ಲವನ್ನೂ ಮೈಸೂರಿಗರು ಇಷ್ಟಪಟ್ಟಿದ್ದಾರೆ. ಇಲ್ಲಿಯವರೆಗೆ ಆಗಿರುವ ಬಹುರೂಪಿಯಲ್ಲಿಈ ಬಾರಿ ಅತಿ ಹೆಚ್ಚು ಅಂದರೆ 37 ನಾಟಕಗಳ ಪ್ರದರ್ಶನ ಆಗಿದೆ. ಇಲ್ಲಿಯವರೆಗೆ 24 ನಾಟಕಗಳ ಪ್ರದರ್ಶನವೇ ಹೆಚ್ಚಾಗಿತ್ತು. ಬಿವಿ ಕಾರಂತ ರಂಗಚಾವಡಿಯನ್ನು ಹೆಚ್ಚುವರಿಯಾಗಿ ನಿರ್ಮಿಸಿ ಅಲ್ಲಿಯೂ ಕಾರ್ಯಕ್ರಮಗಳನ್ನು ನಡೆಸಿರುವುದು ಇಷ್ಟವಾಗಿದೆ ಎಂದರು.

ಪರ್ವ ರಾಷ್ಟ್ರ ಸಂಚಾರ
ಸಾಹಿತಿ ಎಸ್ಎಲ್‌ ಭೈರಪ್ಪ ಅವರ ಕಾದಂಬರಿ ಆಧಾರಿತ ‘ಪರ್ವ’ ನಾಟಕದ ಪ್ರದರ್ಶನ ಏ. 9ರಿಂದ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಆರಂಭವಾಗಲಿದೆ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ ತಿಳಿಸಿದರು. ಏ. 9 ಹಾಗೂ 10 ರಂದು ದಾವಣಗೆರೆಯಿಂದ ಪರ್ವ ನಾಟಕದ ಪ್ರದರ್ಶನ ಆರಂಭವಾಗಲಿದೆ. ರಾಜ್ಯದ 12 ಕಡೆಗಳಲ್ಲಿ ಪ್ರದರ್ಶನಗೊಂಡ ನಂತರ ಜೂನ್‌ನಲ್ಲಿ ರಾಷ್ಟ್ರ ಮಟ್ಟದಲ್ಲಿ ಪ್ರದರ್ಶನ ಕಾಣಲಿದೆ. ಮುಂಬಯಿ, ಲಖನೌ, ಚೆನ್ನೈ, ಭೂಪಾಲ, ದಿಲ್ಲಿ ಸೇರಿ ವಿವಿಧಡೆಗಳಲ್ಲಿ ಪ್ರದರ್ಶನಕ್ಕೆ ವ್ಯವಸ್ಥೆಯಾಗಿದೆ ಎಂದರು.

ಯಾರ ಶತ್ರುತ್ವ ಇಲ್ಲ
ನನಗೆ ಯಾರ ಮೇಲೆಯೂ ಶತ್ರುತ್ವ ಇಲ್ಲ. ಆದರೆ ನನಗೆ ಬೌಲಿಂಗ್‌ ಮಾಡಲು ಬಂದರೆ ಚೆಂಡನ್ನು ಸಿಕ್ಸರ್‌ಗೆ ಅಟ್ಟುತ್ತೇನೆಯೇ ಹೊರತು ವಿಕೆಟ್‌ ಒಪ್ಪಿಸಿ ಹಿಂದಿರುಗುವುದಿಲ್ಲ ಎಂದು ಅಡ್ಡಂಡ ಕಾರ್ಯಪ್ಪ ತಿಳಿಸಿದರು. ಟೀಕಿಸುವ, ಬಯ್ಯುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ಯಾವುದೇ ಇಸಂಗಳಿರಲಿ. ರಂಗಾಯಣ ಒಂದು ವರ್ಗಕ್ಕೆ ಸೀಮಿತವಾಗಿಲ್ಲ. ಈ ಹಿನ್ನೆಲೆಯಲ್ಲಿ ನಾನು ಯಾರೊಂದಿಗೆಯೂ ಶತ್ರುತ್ವ ಇಟ್ಟುಕೊಳ್ಳುವುದಿಲ್ಲ. ಆದರೆ, ಬೌಲಿಂಗ್‌ ಮಾಡಲು ಬಂದರೆ ಬಿಡುವುದಿಲ್ಲ. ಇದು ಕೂಡ ಕ್ರೀಡೆ ಎಂದೆ ಭಾವಿಸುತ್ತೇನೆ ಎಂದು ಹೇಳಿದರು.

LEAVE A REPLY

Please enter your comment!
Please enter your name here