ಅಶ್ವಿನ್ ಗೆ ಐಸಿಸಿ ಫೆಬ್ರವರಿ ತಿಂಗಳ ಆಟಗಾರ ಪ್ರಶಸ್ತಿ

0
51

ನವದೆಹಲಿ, ಮಾ.9 – ಅಂತರಾಷ್ಟ್ರೀಯ ಕ್ರಿಕೆಟ್ ಸಂಸ್ಥೆ(ಐಸಿಸಿ) ಪ್ರತಿ ತಿಂಗಳು ಪ್ರತಿಭಾನ್ವಿತ ಆಟಗಾರರನ್ನು ಗುರುತಿಸಿ ಗೌರವಿಸುವ ‘ಐಸಿಸಿ ತಿಂಗಳ ಆಟಗಾರ’ ಪ್ರಶಸ್ತಿಯನ್ನು ಈ ಬಾರಿ(ಫೆಬ್ರವರಿ ತಿಂಗಳ ಪ್ರಶಸ್ತಿ) ಟೀಂ ಇಂಡಿಯಾ ಹಿರಿಯ ಆಫ್‌ ಸ್ಪಿನ್ನರ್‌ ಆರ್‌ ಅಶ್ವಿನ್‌ ಅವರು ಪಡೆದುಕೊಂಡಿದ್ದಾರೆ.

ಫೆಬ್ರವರಿ ತಿಂಗಳ ಆಟಗಾರ ಪ್ರಶಸ್ತಿಗಾಗಿ ಆಫ್‌ ಸ್ಪಿನ್ನರ್‌ ಆರ್‌ ಅಶ್ವಿನ್‌, ಇಂಗ್ಲೆಂಡ್‌ ನಾಯಕ ಜೋ ರೂಟ್‌ ಹಾಗೂ ವೆಸ್ಟ್ ಇಂಡೀಸ್‌ ತಂಡದ ಕೈಲ್‌ ಮೇಯರ್ಸ್ ಅವರನ್ನು ಐಸಿಸಿ ನಾಮ ನಿರ್ದೇಶನ ಮಾಡಿತ್ತು. ಆದರೆ ಅಂತಿಮವಾಗಿ ಆರ್ ಅಶ್ವಿನ್ ಅವರು ಪ್ರಶಸ್ತಿ ಗೆದ್ದಿದ್ದಾರೆ,

ಇನ್ನು ಇಂಗ್ಲೆಂಡ್‌ನ ಟಮ್ಮಿ ಬ್ಯೂಮಾಂಟ್ ಅವರು ಫೆಬ್ರವರಿ ತಿಂಗಳ ಮಹಿಳಾ ಆಟಗಾರ್ತಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.

 

ಆರ್‌ ಅಶ್ವಿನ್‌ ಅವರು ಕಳೆದ ಫೆಬ್ರುವರಿಯಲ್ಲಿ ಇಂಗ್ಲೆಂಡ್‌ ವಿರುದ್ಧ ಚೆನ್ನೈನಲ್ಲಿ ನಡೆದಿದ್ದ ಆರಂಭಿಕ ಎರಡು ಟೆಸ್ಟ್ ಪಂದ್ಯಗಳಲ್ಲಿ ಐದು ವಿಕೆಟ್‌ ಸಾಧನೆಯೊಂದಿಗೆ ಒಟ್ಟು 24 ವಿಕೆಟ್‌ಗಳನ್ನು ಪಡೆದಿದ್ದಾರೆ. ಅಲ್ಲದೇ, ಎರಡನೇ ಹಣಾಹಣಿಯಲ್ಲಿ ವೃತ್ತಿ ಜೀವನದ ಐದನೇ ಟೆಸ್ಟ್ ಶತಕ ಬಾರಿಸಿ ಭಾರತದ ಗೆಲುವಿಗೆ ನೆರವಾಗಿದ್ದರು.

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆರ್ ಅಶ್ವಿನ್ ದ್ವಿತೀಯ ಟೆಸ್ಟ್ ನ ದ್ವಿತೀಯ ಇನ್ನಿಂಗ್ಸ್ ನಲ್ಲಿ 106 ರನ್ ಬಾರಿಸಿದ್ದರು. ಅಲ್ಲದೆ ಟೆಸ್ಟ್ ನಲ್ಲಿ 400 ವಿಕೆಟ್ ಮೈಲಿಗಲ್ಲು ಕೂಡ ಸ್ಥಾಪಿಸಿದ್ದರು. ಜನವರಿ ತಿಂಗಳ ಮೊದಲ ಪ್ರಶಸ್ತಿ ಭಾರತದ ಯುವ ಬ್ಯಾಟ್ಸ್ಮನ್ ರಿಷಭ್ ಪಂತ್ ಗೆ ಸಿಕ್ಕಿತ್ತು.

LEAVE A REPLY

Please enter your comment!
Please enter your name here