ಯದುವೀರ್‌ ಅವರನ್ನು ಭೇಟಿ ಮಾಡಿದ ಸಚಿವ ಪ್ರಭು ಚವ್ಹಾಣ್

0
48
ಮೈಸೂರು ಫೆ 17 – ಮೈಸೂರಿನ ಅರಮನೆಯಲ್ಲಿ ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್  ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರನ್ನು ಭೇಟಿ ಮಾಡಿ ಅಮೃತ್ ಮಹಲ್ ತಳಿಗಳ ಬಗ್ಗೆ ಚರ್ಚೆ ನಡೆಸಿದರು.
ಸುಮಾರು 45 ಸಾವಿರ ಎಕರೆ ಗೋಮಾಳ ಅಮೃತ್ ಮಹಲ್ ತಳಿಗಳ ಅಭಿವೃದ್ಧಿಗೆ ಮಿಸಲಿಡಲಾಗಿತ್ತು ಎಂದು
ಯದುವೀರ್‌ ಹೇಳಿದರು. ಹಳ್ಳಿಕಾರ್ ಮತ್ತು ಅಮೃತ್ ಮಹಲ್ ತಳಿಗಳ ಸಂರಕ್ಷಣೆಗೆ ಎಲ್ಲರೀತಿಯ ಸಹಕಾರವನ್ನು ತಮ್ಮ ಭೇರುಂಡ ಫೌಂಡೇಷನ್ ವತಿಯಿಂದ ನೀಡುತ್ತೇವೆ ಎಂದು ಸಚಿವರಿಗೆ ಯದುವೀರ್ ಹೇಳಿದರು.
ಯುದ್ಧದ ಸಂದರ್ಭದಲ್ಲಿ ಅಮೃತ್ ಮಹಲ್ ಗೋವುಗಳನ್ನು ಬಳಸಿಕೊಂಡು ವೈರಿಗಳನ್ನು ಹಿಮ್ಮೆಟ್ಟಿಸಿದ ಉದಾಹರಣೆಗಳಿವೆ ಎಂದು ಯದುವೀರ್ ಹೇಳಿದ್ದು ವಿಶೇಷ.
ಅಮೃತ್ ಮಹಲ್ ಕಾವಲಿನಲ್ಲಿ ಸುಮಾರು 5000 ಎಕರೆಯಲ್ಲಿ ಮೇವು ಬೆಳೆಯುವ ಉದ್ದೇಶವಿದೆ ಎಂದು ಸಚಿವರು ಹೇಳಿದರು. ಗೋಹತ್ಯೆ ನಿಷೇಧ ಕಾಯ್ದೆ ರಾಜ್ಯದಲ್ಲಿ ಜಾರಿಯಾಗಿದ್ದಕ್ಕೆ ಯದುವೀರ್ ಸಚಿವರಿಗೆ ಅಭಿನಂದನೆ ಸಲ್ಲಿಸಿದರು. ಈ ಕಾಯ್ದೆಯ ಅನುಷ್ಠಾನ ನಮ್ಮಲ್ಲಿರುವ ದೇಸಿ ತಳಿಗಳ ಸಂರಕ್ಷಣೆಗೆ ನಾಂದಿ ಹಾಡಿದಂತಾಗಿದೆ ಎಂದು ಯದುವೀರ್  ಹರ್ಷ ವ್ಯಕ್ತಪಡಿಸಿದರು.
http://www.egoomorors.com

LEAVE A REPLY

Please enter your comment!
Please enter your name here