ಬಹುಕೃತ ವೇಷಂ ಡಿಲೇರಿಯಂ ಫೋಬಿಯಾ ಕಥೆ

0
53

ಈ ಹಿಂದೆ ಗೌಡ್ರುಸೈಕಲ್ ಎಂಬ ಪಕ್ಕಾ ಗ್ರಾಮೀಣ ಸೊಗಡಿನ ಚಿತ್ರವನ್ನು ಮಾಡಿದ್ದ ತಂಡದ ಬಹುತೇಕರು ಸೇರಿ ತಯಾರಿಸಿದ  ಮತ್ತೊಂದು ಚಿತ್ರ ಬಹುಕೃತ ವೇಷಂ.  ಸೈಕಲಾಜಿಕಲ್ ಥ್ರಿಲ್ಲರ್  ಕಥಾಹಂದರ  ಈ ಚಿತ್ರದಲ್ಲಿದ್ದು,  ಬಿಗ್‌ಬಾಸ್ ಖ್ಯಾಾತಿಯ  ವೈಷ್ಣವಿಗೌಡ ಹಾಗೂ  ಗೌಡ್ರುಸೈಕಲ್ ನಾಯಕ  ಶಶಿಕಾಂತ್  ಚಿತ್ರದ ಪ್ರಮುಖ ಪಾತ್ರಗಳಲ್ಲಿ  ಕಾಣಿಸಿಕೊಂಡಿದ್ದಾರೆ. ಈ ಚಿತ್ರವನ್ನು ಪ್ರಶಾಂತ್ ಕೆ. ಎಳ್ಳಂಪಳ್ಳಿ  ನಿರ್ದೇಶನ ಮಾಡಿದ್ದಾರೆ.  ಇವರು  ಈ ಹಿಂದೆ  ಗೌಡ್ರುಸೈಕಲ್ ಚಿತ್ರಕ್ಕೂ  ನಿರ್ದೇಶಕರಾಗಿದ್ದರು. ಇತ್ತೀಚೆಗೆ ಬಹುಕೃತ ವೇಷಂ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ರೇಣುಕಾಂಬ ಥಿಯೇಟರಿನಲ್ಲಿ ನೆರವೇರಿತು.

     ಈ ಸಂದರ್ಭದಲ್ಲಿ  ನಾಯಕ  ಶಶಿಕಾಂತ್ ಮಾತನಾಡಿ  ನನ್ನದು  2 ಷೇಡ್  ಇರೊ ಪಾತ್ರ, ಡಿಲೇರಿಯಂ ಫೋಬಿಯಾ ಎನ್ನುವ ಖಾಲೆಯ ಮೇಲೆ ಮಾಡಿರುವ ಚಿತ್ರವಿದು, ನಾವು ಈ ಕಥೆ  ಮಾಡಿಕೊಂಡು ನಿರ್ಮಾಪಕರ ಬಳಿ ಹೋದಾಗ  ಮೊದಲು ಒಪ್ಪಲಿಲ್ಲ, ನಂತರ ನಮ್ಮ ಹಿಂದಿನ ಚಿತ್ರಕ್ಕೆ ಪತ್ರಿಕೆಗಳಲ್ಲಿ ಪ್ರಕಟವಾದ  ವಿಮರ್ಶೆಗಳನ್ನು ತಂದು ತೋರಿಸಿದಾಗ ಒಪ್ಪಿದರು. ಮಾದ್ಯಮಗಳ ಕಾರಣದಿಂದ ದೊಡ್ಡ  ಚಿತ್ರವೊಂದು ಆರಂಭವಾಯಿತು, ನಿರ್ಮಾಪಕರು ಒಂದೊಳ್ಳೇ ಸಿನಿಮಾ ಮಾಡಿಕೊಡಿ  ಎಂದು ಹೇಳಿ ಎಲ್ಲಾ ಜವಾಬ್ದಾಾರಿ ನಮಗೇ ವಹಿಸಿದ್ದರು.

 ಕಥೆ ಬರೆಯುವಾಗ  ಈ ಪಾತ್ರಕ್ಕೆ ವೈಷ್ಣವಿಗೌಡ ಅವರೇ ಸೂಕ್ತ ಅಂದುಕೊಂಡಿದ್ದೆವು, ಅವರ ಬಳಿ ಹೋಗಿ ಕಥೆ ಹೇಳಿದಾಗ ಅವರೂ ಸಹ ಒಪ್ಪಿದರು. ಚಿತ್ರಕ್ಕೆ  70 ದಿನಗಳ ಕಾಲ ಚಿತ್ರೀಕರಣ ಮಾಡಿದ್ದೇವೆ,  ವೈಷ್ಣವಿಗೌಡ  ಅವರು ಸಿಂಗಲ್ ಶಾಟ್‌ನಲ್ಲಿ ಅದ್ಭುತವಾಗಿ ಅಭಿನಯ  ನೀಡಿದ್ದಾಾರೆ ಎಂದರು. ಚಿತ್ರದ ಕಥೆ, ಚಿತ್ರಕಥೆ ಬರೆದಿರುವ  ಅಧ್ಯಾಯ ತೇಜ್ ಮಾತನಾಡಿ  ನನ್ನ ಸ್ನೇಹಿತನೊಬ್ಬನಿಗೆ ಈ ಥರದ ಖಾಯಿಲೆ ಇತ್ತು. ಪ್ರತಿದಿನ ಅವನ ಮೇಲೆ ಅವನೇ ಫೈಟ್ ಮಾಡ್ತಿರ್ತಾನೆ. ಇದನ್ನು ಸ್ನೇಹಿತ ಶಶಿಕಾಂತ್ ಬಳಿ ಹೇಳಿದೆ. ಆತನೂ ಸಿನಿಮಾ ಮಾಡಲು ಒಪ್ಪಿದ, ಕಂಟೆಂಟ್ ಸಿನಿಮಾವನ್ನು ಕಮರ್ಷಿಯಲ್ಲಾಾಗಿ ಮಾಡಿದ್ದೇವೆ ಎಂದು ಹೇಳಿದರು.

  ಚಿತ್ರದ ಪ್ರೀಕ್ಲೈಮ್ಯಾಕ್ಸನಲ್ಲಿ ನಾಲ್ಕುವರೆ ನಿಮಿಷದ ಒಂದೇ ಶಾಟ್ ಇದೆ. ಅದರಲ್ಲಿ  ವೈಷ್ಣವಿಗೌಡ  ಅವರು ನಗು, ಅಳು ಸೇರಿಸಿ ಪೈಪೋಟಿಗೆ ಬಿದ್ದವರಂತೆ  ಅಭಿನಯಿಸಿದ್ದಾರೆ.  ಹೆಚ್. ನಂದ ಹಾಗೂ ಡಿ. ಕೆ. ರವಿ  ಅವರು ಚಿತ್ರವನ್ನು  ನಿರ್ಮಾಣ‌ ಮಾಡಿದ್ದಾರೆ.  ವೈಶಾಖ್ ವಿ.ಭಾರ್ಗವ್ ಈ ಚಿತ್ರದ ನಾಲ್ಕು ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದರೆ,  ಕಿರಣ್ ಕೃಷ್ಣಮೂರ್ತಿ ಅವರು ಚಿತ್ರಕ್ಕೆ ಹಿನ್ನೆಲೆ ಸಂಗೀತ ಒದಗಿಸಿದ್ದಾರೆ. ಛಾಯಾಗ್ರಾಹಕ  ಹರ್ಷಕುಮಾರ್‌ಗೌಡ ಪ್ರತಿ ದೃಶ್ಯವನ್ನು ಕುತೂಹಲಕರವಾಗಿ ಸೆರೆಹಿಡಿದಿದ್ದಾರೆ. ಜ್ಞಾನೇಶ್ ಬಿ.  ಚಿತ್ರದ ಸಂಕಲನ ಮಾಡಿದ್ದಾರೆ.

LEAVE A REPLY

Please enter your comment!
Please enter your name here