ಹೆಲಿಕಾಪ್ಟರ್ ತಯಾರಿಕಾ ಕಾರ್ಖಾನೆಯಿಂದ ತುಮಕೂರು ಔದ್ಯೋಗಿಕ ಜಿಲ್ಲೆ: ನರೇಂದ್ರ ಮೋದಿ

0
20
ತುಮಕೂರು, ಫೆ. 6 – ಕರ್ನಾಟಕದಲ್ಲಿ ಡ್ರೋನ್‌ನಿಂದ ತೇಜಸ್ ವಿಮಾನಗಳ ತಯಾರಿಕೆ ನಡೆಯುತ್ತಿದೆ. ಹೂಡಿಕೆದಾರರಿಗೆ ರಾಜ್ಯವೇ ಮೊದಲ ಆಯ್ಕೆಯಾಗಿದ್ದು, ಹೆಲಿಕಾಪ್ಟರ್ ತಯಾರಿಕಾ ಕಾರ್ಖಾನೆ ಉದ್ಘಾಟನೆಯಿಂದ ತುಮಕೂರು ಔದ್ಯೋಗಿಕ ಜಿಲ್ಲೆಯಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಜಿಲ್ಲೆಯ ಗುಬ್ಬಿ ತಾಲೂಕಿನ ಬಿದರೆಹಳ್ಳ ಕಾವಲ್ ಬಳಿ ಹೆಚ್ ಎಎಲ್ ಹೆಲಿಕಾಪ್ಟರ್ ತಯಾರಿಕಾ ಕಾರ್ಖಾನೆ ಲೋಕಾರ್ಪಣೆ ಹಾಗೂ ತಿಪಟೂರು ಮತ್ತು ಚಿಕ್ಕನಾಯಕನಹಳ್ಳಿ ತಾಲೂಕಿನ ಕುಡಿಯುವ ನೀರು ಪೂರೈಸುವ ಜಲ ಜೀವನ್ ಮಿಷನ್ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಪ್ರಧಾನಿ ಮೋದಿ, ಕರ್ನಾಟಕ ಯುವ ಪ್ರತಿಭೆ, ಆವಿಷ್ಕಾರದ ತಾಣವಾಗಿದ್ದು, ಡಬಲ್ ಎಂಜಿನ್ ಸರ್ಕಾರ ರಾಜ್ಯದ ಪ್ರಗತಿಗಾಗಿ ಶ್ರಮಿಸುತ್ತಿದೆ. ಹೆಲಿಕಾಪ್ಟರ್ ತಯಾರಿಕಾ ಕಾರ್ಖಾನೆ ಉದ್ಘಾಟನೆಯಿಂದ ಸಾವಿರಾರು ಸಂಖ್ಯೆಯಲ್ಲಿ ಯುವ ಜನತೆಗೆ ಉದ್ಯೋಗ ದೊರೆಯಲಿದೆ. ಅಲ್ಲದೇ, ತುಮಕೂರು ಸುತ್ತಮುತ್ತ ವ್ಯಾಪಾರ ವಹಿವಾಟು ವೃದ್ಧಿಯಾಗಲಿದೆ ಎಂದರು.
ಕಳೆದ 9 ವರ್ಷಗಳಲ್ಲಿ ಏರೋಸ್ಪೆಸ್ ಬೆಳವಣಿಗೆಯಾಗಿದೆ. ರಕ್ಷಣಾ ಉಪಕರಣಗಳ ರಫ್ತು ಪ್ರಮಾಣ ಹೆಚ್ಚಾಗಿದೆ. ಆಧುನಿಕ ಅಸಾಲ್ಟ್ ರೈಫಲ್‌ಗಳು, ವಿಮಾನ ವಾಹಕ ನೌಕೆ, ಯುದ್ದ ವಿಮಾನಗಳವರೆಗೂ ದೇಶದಲ್ಲಿಯೇ ತಯಾರಿಸಲಾಗುತ್ತಿದೆ. ದೇಶದಲ್ಲಿಯೇ ರಕ್ಷಣಾ ಉಪಕರಣಗಳನ್ನು ತಯಾರಿಸಲಾಗುತ್ತಿದ್ದು, ಸೇನೆ ಕೂಡಾ ಬಳಸುತ್ತಿದೆ. ಹೆಚ್ ಎಎಲ್ ರಕ್ಷಣೆಯಲ್ಲಿ ನಮ್ಮ ಸ್ವಾವಲಂಬನೆಯನ್ನು ಹೆಚ್ಚಿಸಲಿದೆ ಎಂದ ಪ್ರಧಾನಿ ಮೋದಿ, ನಮ್ಮ ರಕ್ಷಣೆಗಾಗಿ ವಿದೇಶಗಳ ಮೇಲಿನ ಅವಲಂಬನೆ ಕಡಿಮೆ ಮಾಡಿಕೊಳ್ಳಬೇಕು, ಆತ್ಮನಿರ್ಭರ್ ಮೂಲಕ ಹೆಲಿಕಾಪ್ಟರ್ ತಯಾರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ 4 ಲಕ್ಷ ಕೋಟಿ ವ್ಯಾಪಾರ ವಹಿವಾಟು ನಡೆಯಲಿದೆ.
ಹೆಚ್ ಎಎಲ್ ಹೆಸರು ಬಳಸಿ ನಮ್ಮನ್ನು  ಬೆದರಿಸಲು ಯತ್ನಿಸಿದರು. ರ್ಕಾರದ ವಿರುದ್ಧ ಸುಳ್ಳು ಆರೋಪ ಮಾಡಲಾಗಿದೆ. ಸಂಸತ್ತಿನ ಹಲವು ಕೆಲಸದ ಸಮಯಗಳು ಅದಕ್ಕಾಗಿ ವ್ಯರ್ಥವಾಯಿತು. ಎಚ್‌ಎಎಲ್‌ನ ಹೆಲಿಕಾಪ್ಟರ್ ಫ್ಯಾಕ್ಟರಿ ಮತ್ತು ಅದರ ಹೆಚ್ಚುತ್ತಿರುವ ಶಕ್ತಿ ಸುಳ್ಳು ಆರೋಪ ಮಾಡಿದವರನ್ನು ಬಯಲು ಮಾಡಲಿದೆ ಎಂದು ಹೆಸರು ಹೇಳದೆ ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.

LEAVE A REPLY

Please enter your comment!
Please enter your name here