‘ನಾನು ಬದುಕಿದ್ದೇನೆ…’ ; ಸಾವಿನ ನಾಟಕದ ಹಿಂದಿನ ರಹಸ್ಯವೇನು?ಪೂನಂ ಪಾಂಡೆ ಹೀಗೇಕೆ ಮಾಡಿದರು?

0
16

ಬಾಲಿವುಡ್ ನಟಿ ಪೂನಂ ಪಾಂಡೆ ಅವರು ಶುಕ್ರವಾರ (ಫೆ.2) ಬೆಳಗ್ಗೆ ನಿಧನರಾಗಿರುವ ಬಗ್ಗೆ ಸುದ್ದಿ ಹರಡಿತ್ತು. ಪೂನಂ ಪಾಂಡೆ ಅವರ ಇನ್‌ಸ್ಟಾಗ್ರಾಮ್‌ನಲ್ಲಿಯೇ ಈ ಸುದ್ದಿಯನ್ನು ಹಂಚಿಕೊಳ್ಳಲಾಗಿತ್ತು. ಆದರೆ ಪೂನಂ ಸಾವಿನ ಬಗ್ಗೆ ಸಾಕಷ್ಟು ಅನುಮಾನಗಳಿದ್ದವು. ಇದೀಗ ಅದೆಲ್ಲದಕ್ಕೂ ಉತ್ತರ ಸಿಕ್ಕಿದೆ. ಪೂನಂ ಪಾಂಡೆ ಸತ್ತಿಲ್ಲ. ‘ನಾನು ಬದುಕಿದ್ದೇನೆ..’ ಎಂದು ಹೇಳಿಕೊಂಡಿದ್ದಾರೆ.

ಪೂನಂ ಪಾಂಡೆ ಹೀಗೇಕೆ ಮಾಡಿದರು?

ದಿಢೀರ್‌ ಅಂತ ಇನ್‌ಸ್ಟಾಗ್ರಾಮ್‌ನಲ್ಲಿ ಪ್ರತ್ಯಕ್ಷವಾದ ಪೂನಂ ಪಾಂಡೆ, “ನಾನು ಇಲ್ಲೇ ಇದ್ದೇನೆ, ಬದುಕಿದ್ದೇನೆ. ನಾನು ಗರ್ಭಕಂಠದ ಕ್ಯಾನ್ಸರ್‌ನಿಂದ ಸಾವನ್ನಪ್ಪಿಲ್ಲ. ಆದರೆ, ನೂರಾರು ಮಹಿಳೆಯರು ಈ ಗರ್ಭಕಂಠದ ಕ್ಯಾನ್ಸರ್‌ನ ಕಾರಣದಿಂದ ನಿಧನರಾಗುತ್ತಿದ್ದಾರೆ. ಅವರಿಂದ ಏನೂ ಮಾಡಲು ಸಾಧ್ಯವಾಗದೇ ಈ ರೀತಿ ಆಗುತ್ತಿಲ್ಲ. ಅವರಿಗೆ ಆ ಬಗ್ಗೆ ಏನು ಮಾಡಬೇಕು ಎಂಬ ಅರಿವು ಇಲ್ಲದೆಯೇ ಜೀವ ಕಳೆದುಕೊಳ್ಳುತ್ತಿದ್ದಾರೆ” ಎಂದು ಗರ್ಭಕಂಠದ ಕ್ಯಾನ್ಸರ್‌ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡಿದ್ದಾರೆ.

ನನ್ನ ಸಾವಿನ ಸುದ್ದಿಯ ಬಗ್ಗೆ ಹೆಮ್ಮೆ ಇದೆ

“ನಾನು ಯಾರಿಗಾದರೂ ನೋವು ನೀಡಿದ್ದರೆ, ಕ್ಷಮೆ ಇರಲಿ. ಗರ್ಭಕಂಠದ ಕ್ಯಾನ್ಸರ್‌ ಬಗ್ಗೆ ನಾವು ಹೆಚ್ಚು ಮಾತನಾಡುತ್ತಿಲ್ಲ, ಅದರ ಬಗ್ಗೆ ಎಚ್ಚರಿಸುವುದು ನನ್ನ ಉದ್ದೇಶವಾಗಿತ್ತು. ಹೌದು, ನಾನು ಸಾವಿನ ಕುರಿತ ಸುಳ್ಳು ಸುದ್ದಿಯನ್ನು ಹಬ್ಬಿಸಿದೆ. ಇದು ವಿಪರೀತ ಅಂತ ನನಗೂ ಗೊತ್ತಿದೆ. ಆದರೆ ನೀವೆಲ್ಲ ದಿಢೀರ್ ಅಂತ ಗರ್ಭಕಂಠದ ಕ್ಯಾನ್ಸರ್ ಬಗ್ಗೆ ಮಾತನಾಡಲು ಆರಂಭಿಸಿದ್ದೀರಿ.. ಈ ಕಾಯಿಲೆ ನಿಮ್ಮನ್ನು ಸದ್ದಿಲ್ಲದೇ ಬಲಿ ಪಡೆಯುತ್ತದೆ. ಈ ರೋಗದ ಮೇಲೆ ಆದಷ್ಟು ಬೇಗ ಬೆಳಕು ಚೆಲ್ಲಬೇಕಾಗಿದೆ. ನನ್ನ ಸಾವಿನ ಸುದ್ದಿಯಿಂದ ಈ ರೋಗದ ಬಗ್ಗೆ ಚರ್ಚೆ ಶುರು ಮಾಡಿರುವುದಕ್ಕೆ ನನಗೆ ಹೆಮ್ಮೆ ಇದೆ” ಎಂದು ಪೂನಂ ಪಾಂಡೆ ಹೇಳಿಕೊಂಡಿದ್ದಾರೆ.

ಸಾವಿನ ಬಗ್ಗೆ ಅನುಮಾನ ಇತ್ತು!

ಇನ್ನು, ಪೂನಂ ಸಾವಿನ ಸುದ್ದಿ ಹರಿದಾಡುತ್ತಿದ್ದಂತೆಯೇ, ಸಾಕಷ್ಟು ಅನುಮಾನಗಳು ಮೂಡಿದ್ದವು. ‘ಪೂನಂ ಸತ್ತಿಲ್ಲ..’ ಎಂದೇ ಅನೇಕರು ವಾದಿಸಿದ್ದರು. ಮೂರ್ನಾಲ್ಕು ದಿನಗಳ ಹಿಂದೆ ಪೂನಂ ಪಾಂಡೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ಅಲ್ಲದೆ, ಅವರಲ್ಲಿ ಯಾವುದೇ ರೋಗ ಲಕ್ಷಣಗಳು ಕಾಣಿಸಿಕೊಂಡಿರಲಿಲ್ಲ. ಆಗ ಸಂದರ್ಶನ ನೀಡಿದ್ದ ಅವರು, ‘ಕೆಲವೇ ದಿನಗಳಲ್ಲಿ ಬಿಗ್ ಸರ್ಪ್ರೈಸ್ ನೀಡಲಿದ್ದೇನೆ’ ಎಂದಿದ್ದರು. ಇನ್ನು, ಕ್ಯಾನ್ಸರ್ ರೋಗಿಗಳು ದಿಢೀರ್ ಅಂತ ಸಾಯುವುದಿಲ್ಲ. ಪೂನಂ ಸಾವಿನ ಕೇಳಿಬಂದಿತ್ತಾದರೂ, ಅವರ ಮೃತದೇಹವನ್ನು ಯಾರೂ ನೋಡಿರಲಿಲ್ಲ. ಇವೆಲ್ಲಾ ಅಂಶಗಳಿಂದ ಪೂನಂ ಬದುಕಿದ್ದಾರೆ ಎಂಬ ಅನುಮಾನ ಬಲವಾಗಿ ಕಾಡಿತ್ತು.

LEAVE A REPLY

Please enter your comment!
Please enter your name here