ನಾನು ಜೀವಂತವಾಗಿದ್ದೇನೆ, ಗರ್ಭಕಂಠ ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸಿದೆ – ಪೂನಂ ಪಾಂಡೆ ವಿಡಿಯೋ ವೈರಲ್

0
2

ನವದೆಹಲಿ,ಫೆ.3- ಮಾಡೆಲ್ ಕಂ ರಿಯಾಲಿಟಿ ಶೋ ಕಿರುತೆರೆ ತಾರೆ ಪೂನಂ ಪಾಂಡೆ ಇಂದು ಇದ್ದಕ್ಕಿದ್ದಂತೆ ತಾನು ಗರ್ಭಕಂಠದ ಕ್ಯಾನ್ಸರ್‌ನಿಂದ ಮೃತಪಟ್ಟಿಲ್ಲ, ಜೀವಂತವಾಗಿದ್ದೇನೆ ಎಂದು ವಿಡಿಯೊ ಮಾಡಿ ಪೋಸ್ಟ್ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾಳೆ. ಪೂನಂ ಪಾಂಡೆ ಮ್ಯಾನೇಜರ್ ನಿನ್ನೆ ಇನ್ಸ್ಟಾಗ್ರಾಂ ಪೋಸ್ಟ್ ಹಾಕಿ ಪೂನಂ ಪಾಂಡೆ ಗರ್ಭಕಂಠದ ಕ್ಯಾನ್ಸರ್ ನಿಂದ ಮೃತಪಟ್ಟಿದ್ದಾರೆ ಎಂದು ತಿಳಿಸಲು ಅತೀವ ದುಃಖವಾಗುತ್ತಿದೆ ಎಂದಿದ್ದರು.

ಇದಾಗಿ ದಿನ ಕಳೆಯುವುದರಲ್ಲಿ ಇಂದು ಪೋಸ್ಟ್ ಮಾಡಿರುವ ನಟಿ ಪೂನಂ ಪಾಂಡೆ “ನಾನು ಜೀವಂತವಾಗಿದ್ದೇನೆ. ನಾನು ಗರ್ಭಕಂಠದ ಕ್ಯಾನ್ಸರ್ ನಿಂದ ಸತ್ತಿಲ್ಲ. ದುರದೃಷ್ಟವಶಾತ್, ಗರ್ಭಕಂಠದ ಕ್ಯಾನ್ಸರ್‌ನಿಂದ ನೂರಾರು, ಸಾವಿರಾರು ಮಹಿಳೆಯರು ಸಾಯುತ್ತಿದ್ದಾರೆ. ನಿಮ್ಮೆಲ್ಲರಿಗೂ ಆಘಾತ ಕೊಟ್ಟದ್ದಕ್ಕಾಗಿ ನನ್ನನ್ನು ಕ್ಷಮಿಸಿ, ನಾನು ನೋಯಿಸಿದವರಿಗೆ ಕ್ಷಮೆಯಾಚಿಸುತ್ತೇನೆ.

ಗರ್ಭಕಂಠದ ಕ್ಯಾನ್ಸರ್ ನಿಂದ ಅಷ್ಟೊಂದು ಮಹಿಳೆಯರು ತೊಂದರೆ ಅನುಭವಿಸುತ್ತಿದ್ದರೂ ನಾವು ಆ ಬಗ್ಗೆ ಮಾತನಾಡುವುದೇ ಇಲ್ಲ, ನಮ್ಮಲ್ಲಿ ಅನೇಕರಿಗೆ ಅದರ ಬಗ್ಗೆ ಅರಿವು ಇಲ್ಲ, ಅದರ ಬಗ್ಗೆ ಜಾಗೃತಿ ಮೂಡಿಸುವುದು ನನ್ನ ಉದ್ದೇಶವಾಗಿತ್ತು ಎಂದು ವಿಡಿಯೊದಲ್ಲಿ ಹೇಳಿಕೊಂಡಿದ್ದಾಳೆ.

ನಿನ್ನೆ ರಾತ್ರಿ ಪೂನಂ ಸಾವಿನ ಸುದ್ದಿ ಸುಳ್ಳು ನಿಜಯವಲ್ಲ ಎಂಬ ಸುದ್ದಿ ಹರಿದಾಡಿತ್ತು. ಮೂರು ದಿನಗಳ ಹಿಂದೆ ಗೋವಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅನೇಕರು ಮಾಡೆಲ್ ನ್ನು ನೋಡಿದ್ದರಿಂದ ಸಂದೇಹಗಳು ಬಂದಿದ್ದವು. ಅದಕ್ಕೆ ಸಂಬಂಧಧಪಟ್ಟ ವಿಡಿಯೊಗಳನ್ನು ಮತ್ತು ಪಾರ್ಟಿಯೊಂದರಲ್ಲಿ ಭಾಗಿಯಾಗಿದ್ದ ವಿಡಿಯೊಗಳನ್ನು ಹಂಚಿಕೊಂಡು ಇದು ಸುಳ್ಳು ಸುದ್ದಿ ಎಂದು ಹೇಳಿಕೊಂಡಿದ್ದರು.

2011ರಲ್ಲಿ ಭಾರೀ ಸದ್ದು ಮಾಡಿದ್ದ ಪೂನಂ: 2011 ರ ಕ್ರಿಕೆಟ್ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಗೆದ್ದರೆ ಬೆತ್ತಲೆಯಾಗಿ ಕಾಣಿಸಿಕೊಳ್ಳುವುದಾಗಿ ಹೇಳಿ 32 ವರ್ಷ ವಯಸ್ಸಿನ ಪೂನಂ ಸುದ್ದಿಯಾಗಿದ್ದಳು. ಮುಂದಿನ ವರ್ಷ ತನ್ನ ನೆಚ್ಚಿನ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ಐಪಿಎಲ್ ಗೆದ್ದಾಗ ನಗ್ನ ಫೋಟೋವನ್ನು ಪೋಸ್ಟ್ ಮಾಡಿದ್ದಳು. ತನ್ನ ಅರೆನಗ್ನ ಫೋಟೋ, ವಿಡಿಯೊ ಮತ್ತು ವಿವಾದಿತ ಮಾತುಗಳಿಂದ ಸದಾ ಸುದ್ದಿಯಲ್ಲಿರುತ್ತಿದ್ದ ಪೂನಂ ಇತ್ತೀಚೆಗೆ ಅಷ್ಟೊಂದು ಸುದ್ದಿಯಲ್ಲಿರಲಿಲ್ಲ. 2022 ರಲ್ಲಿ, ಪೂನಂ ಕಂಗನಾ ರಣಾವತ್ ನಿರೂಪಕಿಯಾಗಿ ನಡೆಸಿಕೊಟ್ಟ ರಿಯಾಲಿಟಿ ಶೋ ‘ಲಾಕ್ ಅಪ್’ ನಲ್ಲಿ ಭಾಗವಹಿಸುವ ಮೂಲಕ ಗಮನ ಸೆಳೆದಿದ್ದಳು.

LEAVE A REPLY

Please enter your comment!
Please enter your name here