ಕಲ್ಬುರ್ಗಿ,ಫೆ. 2 – ಕೇಂದ್ರದ ಬಜೆಟ್ ಸಾಮಾನ್ಯ ಜನಕ್ಕೆ ಮೂರುಕಾಸಿನ ಪ್ರಯೋಜನಕ್ಕಿಲ್ಲ. ಇನ್ನು ರಾಜ್ಯ ಬಜೆಟ್ ಬಗ್ಗೆಯೂ ನಿರೀಕ್ಷೆ ಹೊರಟು ಹೋಯ್ತು. ಅದು ಬಿಜೆಪಿ ಬಚಾವ್ ಬಜೆಟ್ ಹಾಗೂ ಬೊಮ್ಮಯಿ ಬಚಾವ್ ಬಜೆಟ್ ಆಗಿರುತ್ತೆ. ಇದರಿಂದ ಜನರಿಗೆ ನಯಾ ಪೈಸೆ ಉಪಯೋಗಿವಿಲ್ಲ ಎಂದು ಶಾಸಕ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದರು.
ನಗರದಲ್ಲಿ ಗುರುವಾರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಡಬಲ್ ಇಂಜಿನ್ ಸರ್ಕಾರದಿಂದ ಜನ ಬೇಸತ್ತಿದ್ದಾರೆ. ಬಜೆಟ್ ನಲ್ಲಿ ಕೊಟ್ಟ ಭರವಸೆ ಈಡೇರಿಸಿ. ಕನ್ನಡಿಗರು ಎಚ್ಚೆತ್ತು ಕೊಂಡಿದ್ದಾರೆ ಬಿಜೆಪಿ ಮೋಸದ ಬಗ್ಗೆ ಜನರಿಗೆ ಅರ್ಥವಾಗಿದೆ ಎಂದರು.
ರಮೇಶ್ ಜಾರಕಿಹೊಳಿ ಮತ್ತು ಡಿಕೆ ಶಿವಕುಮಾರ್ ನಡುವೆ ಸಿಡಿ ಫೈಟ್ ವಿಚಾರ ಕುರಿತು ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ಪ್ರಕರಣ ಸಿಬಿಐಗೆ ಕೊಡಲಿ ಎಂದು ಡಿಕೆ ಶಿವಕುಮಾರ್ ಅವರೇ ಹೇಳಿದ್ದಾರೆ. ಇಲ್ಲಿ ಕಾನೂನು ಇಲ್ವಾ..? ಅಮಿತ್ ಶಾ ರಿಂದ ಒತ್ತಡ ಹಾಕಿಸುವ ಅವಶ್ಯಕತೆ ಏನಿದೆ ಎಂದು ಪ್ರಶ್ನಿಸಿದರು.
Advertisements