ಪ್ರಾದೇಶಿಕ ನಿರ್ದೇಶಕರುಗಳಿಂದ ಬಾರಿ ಲೋಪದೋಷ: ಮಾರ್ಗಸೂಚಿ ಪಾಲನೆ ಕಡ್ಡಾಯಗೊಳಿಸಿ KSOU ಆದೇಶ

0
27
ಮೈಸೂರು,ಜ. 31 – ಪ್ರಾದೇಶಿಕ ಕೇಂದ್ರಗಳ ಆಡಳಿತ ನಿರ್ವಹಣೆ ಸಂಬಂಧ ಲೋಪದೋಷಗಳು ಕಂಡು ಬಂದ ಹಿನ್ನೆಲೆಯಲ್ಲಿ ಪ್ರಾದೇಶಿಕ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ತಾತ್ಕಾಲಿಕ, ಕಾಲಿಕ ವೇತನಶ್ರೇಣಿ ಪ್ರಾದೇಶಿಕ ನಿರ್ದೇಶಕರುಗಳಿಗೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮಾರ್ಗಸೂಚಿ ಕಡ್ಡಾಯಗೊಳಿಸಿ ಆದೇಶಿಸಿದೆ.
ಈ ಕುರಿತು ಆದೇಶಹೊರಡಿಸಿರುವ ಕೆಎಸ್ ಒಯು ಕುಲಸಚಿವರು,  ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಪ್ರಾದೇಶಿಕ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ತಾತ್ಕಾಲಿಕ, ಕಾಲಿಕ ವೇತನಶ್ರೇಣಿ ಪ್ರಾದೇಶಿಕ ನಿರ್ದೇಶಕರುಗಳ ಗಮನಕ್ಕೆ ಕೆಲ ವಿಷಯಗಳನ್ನುತಂದಿದ್ದಾರೆ.
ಇತ್ತೀಚೆಗೆ ಕೆಲವು ಪ್ರಾದೇಶಿಕ ನಿರ್ದೇಶಕರುಗಳು ತಮ್ಮ ವೈಯಕ್ತಿಕ ಕಾರಣಗಳಿಗಾಗಿ ನೀಡುವ ಮನವಿ/ದೂರುಗಳಿಗೆ ಪ್ರಾದೇಶಿಕ ಕೇಂದ್ರದ ಲೆಟರ್ ಹೆಡ್ ಬಳಸುತ್ತಿರುವುದು, ಪತ್ರಗಳಲ್ಲಿ ಮನವಿ/ದೂರುಗಳನ್ನು ಸಲ್ಲಿಸುತ್ತಿರುವುದು, ಕಚೇರಿ ವೇಳೆಯನ್ನು ಪಾಲಿಸದೇ ಇರುವುದು, ಪೂರ್ವಾನುಮತಿ ಪಡೆಯದೆ ರಜೆ ಪಡೆಯುವುದು/ಕೇಂದ್ರ ಕಚೇರಿಗೆ ಭೇಟಿ ನೀಡುವುದು ಇಂತಹ ಲೋಪದೋಷಗಳು ಹೆಚ್ಚಾಗಿ ಕಂಡು ಬರುತ್ತಿದೆ. ಇದು ಕಾರ್ಯ ವಿಧಾನಕ್ಕೆ ವಿರುದ್ಧವಾಗಿದ್ದು, ಈ ಹಿನ್ನೆಲೆಯಲ್ಲಿ ಈ ಕೆಳಕಂಡ ಕಚೇರಿ – ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಬೇಕು ಎಂದು ಪ್ರಾದೇಶಕಿ ನಿರ್ದೇಶಕರುಗಳಿಗೆ ಸೂಚಿಸಿದೆ.

  1. ತಮ್ಮ ಯಾವುದೇ ಪತ್ರ ವ್ಯವಹಾರಗಳಲ್ಲಾಗಲಿ ಅಥವಾ ಹಾಜರಾತಿ ಪುಸ್ತಕದಲ್ಲಾಗಲಿ ಹಸಿರು ಶಾಹಿಯ ಲೇಖನಿಯನ್ನು ಬಳಸಬಾರದು.
  2. ಕಚೇರಿಯ ಅಧಿಕೃತ ಕೆಲಸ ಕಾರ್ಯಗಳಿಗೆ ಮಾತ್ರ ಪ್ರಾದೇಶಿಕ ಕೇಂದ್ರ ಕಚೇರಿಯ ಲೆಟರ್ ಹೆಡ್ ಅನ್ನು ಬಳಸಬೇಕು. ವೈಯಕ್ತಿಕ ಕಾರಣ/ಕೋರಿಕೆ/ದೂರುಗಳಿಗೆ ವಿ.ವಿ.ಯ ಪ್ರಾದೇಶಿಕ ಕೇಂದ್ರಗಳ ಲೆಟರ್ ಹೆಡ್‌ ಗಳನ್ನು ಬಳಸಬಾರದು.
  3. ತಮ್ಮ ಮನವಿಗಳನ್ನು ನೇರವಾಗಿ ಕುಲಪತಿಗಳಿಗೆ ಬರೆಯುತ್ತಿದ್ದು, ಇದು ಕಛೇರಿಯ ಕಾರ್ಯ ವಿಧಾನಕ್ಕೆ ಪೂರಕವಾಗಿರದೇ ಪತ್ರಗಳ ವಿಲೇವಾರಿಗೆ ಅನಗತ್ಯವಾಗಿ ಹೆಚ್ಚಿನ ಸಮಯ ವ್ಯಯವಾಗುವುದರಿಂದ ಇನ್ನು ಮುಂದೆ ಯಾವುದೇ ಪತ್ರ ವ್ಯವಹಾರಗಳನ್ನು ಕುಲಸಚಿವರಿಗೆ ಮತ್ತು ಸಂದರ್ಭಾನುಸಾರ ಡೀನ್ (ಅಧ್ಯಯನ ಕೇಂದ್ರ) ಸಂಬಂಧಪಟ್ಟ ಮೇಲಾಧಿಕಾರಿಗಳಿಗೆ ಕಳುಹಿಸುವುದು. ಅಗತ್ಯವಿದ್ದಲ್ಲಿ ಮಾತ್ರ ಮನವಿ/ಪತ್ರದ ಪ್ರತಿಯನ್ನು ವಿಶೇಷಾಧಿಕಾರಿಗಳು, ಮಾನ್ಯ ಕುಲಪತಿಗಳ ಸಚಿವಾಲಯ, ಕರಾಮುವಿ ಇವರ ವಿಳಾಸಕ್ಕೆ ಕಳುಹಿಸುವುದು.
  4. ತಮ್ಮ ಮತ್ತು ತಮ್ಮ ಪ್ರಾದೇಶಿಕ ಕೇಂದ್ರದ ನೌಕರರ ಪ್ರತಿ ದಿನದ ಹಾಜರಾತಿಯ ವಿವರವನ್ನು ಡೀನ್ (ಅಧ್ಯಯನ ಕೇಂದ್ರ)ರವರ Whatsapp number 8762357996 or email Id deanscksoumys@gmail.com ಗೆ Forward ಮಾಡುವುದರ ಜೊತೆಗೆ ಪ್ರತಿ ತಿಂಗಳ ಹಾಜರಾತಿ ಮಾಹಿತಿಯನ್ನು (ದಿನಾಂಕ:30ಕ್ಕೆ ಕೊನೆಗೊಂಡಂತೆ)ತಮ್ಮ ದೃಢೀಕರಣದೊಂದಿಗೆ ಕಡ್ಡಾಯವಾಗಿ ಕುಲಸಚಿವರಿಗೆ ಸಲ್ಲಿಸುವುದು.
  5. ಪ್ರಾದೇಶಿಕ ನಿರ್ದೇಶಕರುಗಳು ಹಾಗೂ ಅಲ್ಲಿನ ಸಿಬ್ಬಂದಿಗಳು ಅಧಿಕೃತ ಕಾರ್ಯ ನಿಮಿತ್ತ ಕೇಂದ್ರ ಕಚೇರಿಗೆ ಭೇಟಿ ನೀಡುವ ಮುನ್ನ ತಪ್ಪದೇ ಡೀನ್’ (ಅಧ್ಯಯನ ಕೇಂದ್ರ)ರವರಿಗೆ ಲಿಖಿತವಾಗಿ ಮನವಿಯನ್ನು Whats app or email ಮೂಲಕ ಸಲ್ಲಿಸಿ ಅವರ ಅನುಮತಿಯನ್ನು ಪಡೆಯಬೇಕು. ಇದರ ಪ್ರತಿಯನ್ನು ಡೀನ್ ರವರು ಕುಲಸಚಿವರಿಗೆ ಕಡ್ಡಾಯವಾಗಿ ಅಂದೇ ಸಲ್ಲಿಸಬೇಕು.
  6. ಕಛೇರಿ ಸಾದಿಲ್ವಾರು ಮೊತ್ತವನ್ನು ಕಛೇರಿಗೆ ಅತ್ಯಗತ್ಯವಾಗಿ ಬೇಕಾದ ವಸ್ತುಗಳನ್ನು/ಲೇಖನ ಸಾಮಾಗ್ರಿಗಳನ್ನು ಖರೀದಿಸಲು ಮಾತ್ರ ಬಳಸಬೇಕು. ಖರೀದಿಸುವ ವಸ್ತುಗಳನ್ನು ದೃಢೀಕರಣದಲ್ಲಿ ಹಾಗೂ ದಾಸ್ತಾನು ಪುಸ್ತಕದಲ್ಲಿ ದಾಖಲಿಸಬೇಕು.
  7. ಪ್ರಾಖರೀದಿಸುವ ವಸ್ತುಗಳ ಬಿಲ್‌ ಗಳಲ್ಲಿ ಪ್ರಾದೇಶಿಕ ನಿರ್ದೇಶಕರು-ಪ್ರಾದೇಶಿಕ ಕೇಂದ್ರ ಕರಾಮುವಿ ಮೈಸೂರು ಎಂದು ನಮೂದಿಸಿ ಬಿಲ್ ಪಡೆಯಬೇಕು.
  8. ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳು ಸಹ-ಸಿಬ್ಬಂದಿಯ ಮೇಲೆ ದೂರನ್ನು ನೇರವಾಗಿ ವಿ.ವಿ.ಯ ಅಧಿಕಾರಿಗಳಿಗೆ ಕಳುಹಿಸಬಾರದು. ಪ್ರಾದೇಶಿಕ ನಿರ್ದೇಶಕರ ಮುಖಾಂತರ ಕಳುಹಿಸುವುದು.
  9. ಪ್ರಾದೇಶಿಕ ಕೇಂದ್ರ ಕಚೇರಿಗಳ ವಿದ್ಯುತ್‌ ಚ್ಛಕ್ತಿ ಹುಂಡಿಯನ್ನು ಪ್ರತಿ ಮಾಹೆಯ 5ನೇ ತಾರೀಖಿನೊಳಗಾಗಿ ಕೇಂದ್ರ ಕಚೇರಿಗೆ ನೀಡುವುದು. ತಪ್ಪಿದ್ದಲ್ಲಿ ಪ್ರಾದೇಶಿಕ ನಿರ್ದೇಶಕರುಗಳೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು.
  10. ಪ್ರಾದೇಶಿಕ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಕಲಿಕಾರ್ಥಿ ಸಹಾಯಕ ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಂದ ವಿ.ವಿ.ನಿಗಧಿಪಡಿಸಿರುವ ಶುಲ್ಕಕ್ಕಿಂತ ಹೆಚ್ಚುವರಿ ಶುಲ್ಕವನ್ನು ಪಡೆಯುತ್ತಿರುವ ಬಗ್ಗೆ ದೂರುಗಳು ಬರುತ್ತಿದ್ದು, ಕಲಿಕಾರ್ಥಿ ಸಹಾಯಕ ಕೇಂದ್ರಗಳಿಗೆ ಭೇಟಿ ನೀಡಿ ವರದಿ ನೀಡಲು ತಿಳಿಸಿದೆ.
ಈ ಮೇಲಿನ ಎಲ್ಲಾ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಿದ್ದು,  ತಪ್ಪಿದ್ದಲ್ಲಿ ನಿಯಮಾನುಸಾರ ತಮ್ಮ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾದೇಶಿಕ ನಿರ್ದೇಶಕರುಗಳಿಗೆ ಕುಲಸಚಿವರು ಎಚ್ಚರಿಕೆ ನೀಡಿದ್ದಾರೆ.
Advertisements

LEAVE A REPLY

Please enter your comment!
Please enter your name here