ರೈತರ ಹಣ ಗೋಲ್ಮಾಲ್‌ ಮಾಡಿರುವ ವಿಎ ಅಂಥೋನಿ ಸುನಿಲ್‌ ರಾಜ್ ವಿರುದ್ದ ಡಿಸಿಗೆ ದೂರು

0
49

*  ಸರ್ಕಾರದ ಬೊಕ್ಕಸಕ್ಕೆ ಕನ್ನ…ಭೂಕಂದಾಯ ರಸೀತಿಯಲ್ಲಿ ವಂಚನೆ…ಕಚೇರಿ ಕಾಪಿಯಲ್ಲಿ ಒಂದು ಮೊತ್ತ…ರೈತರಿಗೆ ಕೊಟ್ಟ ರಸೀತಿಯಲ್ಲಿ ಒಂದು ಮೊತ್ತ…ಗೋಲ್ಮಾಲ್ ಗ್ರಾಮ ಲೆಕ್ಕಿಗ ಆಂಥೋನಿ ಸುನಿಲ್ ರಾಜ್…

ತಿ.ನರಸೀಪುರ,ಜ.31 – ರೈತರು ತಮ್ಮ  ಜಮೀನುಗಳಿಗೆ ಪಾವತಿಸಿರುವ ಭೂಕಂದಾಯ ಸರ್ಕಾರಿ ಬೊಕ್ಕಸಕ್ಕಿಂತ  ಹೆಚ್ಚಾಗಿ   ಗ್ರಾಮಲೆಕ್ಕಿಗನ ಜೇಬು ಸೇರಿರುವ ಘಟನೆ ಜಿಲ್ಲೆಯ  ತಿ.ನರಸೀಪುರ ತಾಲೂಕು ಮೂಗೂರು ಹೋಬಳಿಯ ಮಾಡ್ರಹಳ್ಳಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಮಾಡ್ರಹಳ್ಳಿ ಗ್ರಾಮದ ಗ್ರಾಮ ಲೆಕ್ಕಿಗ ಅಂಥೋನಿ ಸುನಿಲ್ ರಾಜ್ ಮೇಲೆ ಇಂತಹ ಆರೋಪ ಕೇಳಿ ಬಂದಿದೆ. ಕಂದಾಯ ಹಣ ಪಾವತಿಸಿದ ಭೂ ಮಾಲೀಕರಿಗೆ ವಂಚಿಸಿರುವುದಲ್ಲದೆ ಸರ್ಕಾರದ ಬೊಕ್ಕಸಕ್ಕೂ ನಷ್ಟ ಉಂಟು ಮಾಡಿದ್ದಾರೆ.

ವಿಎ ಅಂಥೋನಿ ಸುನಿಲ್ ರಾಜ್‌ ಅತಿ ಬುದ್ಧಿವಂತಿಕೆಯಿಂದ ಕಂದಾಯ ರಸೀದಿಯ ಮೂಲ ಪ್ರತಿಯಲ್ಲೇ ಒಂದು ಮೊತ್ತ, ರೈತರಿಗೆ ನೀಡಿದ ರಸೀತಿಯಲ್ಲೇ ಒಂದು ಮೊತ್ತ ನಮೂದಿಸಿ, ರಸೀದಿಗೆ ಒಂದೇ ಸೀರಿಯಲ್ ನಂಬರ್ ಹಾಕಿ ಎರಡು ಮೊತ್ತ ದಾಖಲಿಸಿ, ಒಂದೇ ದಿನಾಂಕದಂದು 7 ಮಂದಿ ರೈತರಿಂದ ಹಣ ಪಾವತಿಸಿ ಮಾಡಿಸಿಕೊಂಡಿದ್ದಾರೆ.
ಆದರೆ ಕಂದಾಯದ ಹಣವನ್ನು ಸರ್ಕಾರಕ್ಕೆ ಜಮೆ ಮಾಡುವ ಬದಲು ತಮ್ಮ ಕಿಸೆಯಲ್ಲಿ ಇಂಥ ವಂಚನೆಯ ಹಣದೊಂದಿಗೆ ಗೆ ಸೇರಿಸಿಕೊಂಡಿದ್ದಾರೆ.
Advertisements

ದಿನಾಂಕ 1-8-2022 ರಂದು 7 ಮಂದಿ ರೈತರು ತಮ್ಮ ಜಮೀನಿಗೆ ಭೂಕಂದಾಯ ಪಾವತಿಸಿದ್ದಾರೆ. 7 ರೈತರಿಗೆ ನೀಡಿರುವ ರಸೀತಿಯ ಮೊತ್ತಕ್ಕೂ ಹಾಗೂ ಸರ್ಕಾರದ ಕಚೇರಿಯ ಪ್ರತಿಯಲ್ಲಿರುವ  ಮೊತ್ತಕ್ಕೂ ವತ್ಯಾಸ ಕಂಡು ಬಂದಿದೆ.ಒಟ್ಟು ಮೊತ್ತ 8162  ರೂ  ಸಂದಾಯವಾಗಿದೆ.ಸರ್ಕಾರ ಬೊಕ್ಕಸಕ್ಕೆ ಕೇವಲ 440 ರೂ ಮಾತ್ರ ಸೇರಿದೆ. 7722 ರೂ ಗ್ರಾಮ ಲೆಕ್ಕಿಗನ ಜೇಬು ಸೇರಿದೆ. ಅಂಥೋನಿ ಸುನಿಲ್ ರಾಜ್ ಮಾಡಿರುವ ಗೋಲ್ಮಾಲ್ ವಿವರ ಇಲ್
ಜಿಲ್ಲಾಧಿಕಾರಿಗೆ ದೂರು:   ಅಂಥೋನಿ ಸುನಿಲ್ ರಾಜ್ ನ ವಂಚನೆಯನ್ನ ಆರ್.ಟಿ.ಐ.ಕಾರ್ಯಕರ್ತ ಬಿ.ಎನ್.ನಾಗೇಂದ್ರ ದಾಖಲೆ ಸಮೇತ ಬಯಲು ಮಾಡಿದ್ದಾರೆ.ಕೂಡಲೇ ಈತನ ವಿರುದ್ದ ಕಾನೂನು ರೀತಿ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ. ಜಿಲ್ಲೆಯ ದಂಡಾಧಿಕಾರಿ ಏನು ಕ್ರಮ ಕೈಗೊಳ್ಳುತ್ತಾರೆ ಕಾದು ನೋಡಬೇಕಿದೆ.

Advertisements

LEAVE A REPLY

Please enter your comment!
Please enter your name here