* ತಪ್ಪಾಗಿದೆ, ಸರ್ಕಾರದ ಪರವಾಗಿ ಅಭಿಮಾನಿಗಳನ್ನು ನಾವು ಕ್ಷಮೆ ಕೇಳುತ್ತೇವೆ. ರಾತ್ರಿ ಅಭಿಮಾನಿಗಳು ಈ ಸ್ಥಳಕ್ಕೆ ಬರುತ್ತಾರೆ ಎನ್ನುವ ನಿರೀಕ್ಷೆ ಸರ್ಕಾರಕ್ಕೆ ಇರಲಿಲ್ಲ ಅನಿಸುತ್ತದೆ. ಇಲ್ಲಿ ಬರಳಕಿನ ವಿನ್ಯಾಸ ತುಂಬಾ ಚೆನ್ನಾಗಿದೆ. ಇನ್ನೂ ಸಾಕಷ್ಟು ಕೆಲಸ ಆಗಬೇಕಿದೆ. ಮುಂದಿನ ದಿನಗಳಲ್ಲಿ ಆಗುತ್ತದೆ. –ಅನಿರುದ್, ನಟ ಹಾಗೂ ವಿಷ್ಣುವರ್ಧನ್‌ರ ಅಳಿಯ.
* ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ. ಸೋಮಶೇಖರ್ ಕಾರ್ಯಕ್ರಮಕ್ಕೆ ಗೈರು ಹಾಜರಾದದ್ದು ಯಾಕೆ? ಈ ಪ್ರಶ್ನೆಗೆ ಉತ್ತರ ಕೊಡಬೇಕು.
* ಭಾರತಿ ವಿಷ್ಣುವರ್ಧನ್ ಅವರು ಈ ಸಂದರ್ಭದಲ್ಲಿ ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡಿ ಎಂದು ಕೇಳಿದ್ದು ಏಕೆ?ವಿಷ್ಣುವರ್ಧನ್ ಅವರು ಬದುಕಿದ್ದಾಗ ಯಾವ ರಾಜಕೀಯ ಪಕ್ಷದ ಪರವಾಗಿ ಮಾತನಾಡಿರಲಿಲ್ಲ. ಇವರೇಕೆ ಹೀಗೆ ಹೇಳಿದರು. ವಿಷ್ಣು ಸ್ಮಾರಕ್ಕೆ ಬಿಜೆಪಿ ಮಾತ್ರ ಕೊಡುಗೆ ನೀಡಿಲ್ಲ ಆಡಳಿತ ನಡೆಸಿದ ಎಲ್ಲ ಪಕ್ಷಗಳು ಕೈ ಜೋಡಿಸಿದೆ. ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸಿ.
ಮೈಸೂರು,ಜ. 30 – ಇಲ್ಲಿನ ಹೆಚ್.ಡಿ.ಕೋಟೆ- ಮಾನಂದವಾಡಿ ರಸ್ತೆಯ ಹಾಲಾಳು ಗ್ರಾಮದಲ್ಲಿ 11 ಕೋಟಿ ವೆಚ್ಚದಲ್ಲಿ ಡಾ.ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ಮಾಡಲಾಗಿದ್ದು, ಭಾನುವಾರ ಸಿಎಂ ಬಸವರಾಜ್ ಬೊಮ್ಮಾಯಿ ಉದ್ಘಾಟಿಸಿದರು. ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ಡಾ.ವಿಷ್ಣುವರ್ಧನ್ ಅಭಿಮಾನಿಗಳಿಗೆ ಸಂಭ್ರಮವೋ ಸಂಭ್ರಮ. ಆದರೆ ಅಭಿಮಾನಿಗಳ ಈ ಸಂಭ್ರಮ ಸಂತೋಷ ಪಶ್ಚಿಮದಲ್ಲಿ ಸೂರ್ಯ ಮುಳುಗುತ್ತಿದ್ದಂತೆ ಆಕ್ರೋಶಕ್ಕೆ ತಿರುಗಿತು. ಅನೇಕರು ಸರ್ಕಾರಕ್ಕೆ ಛೀಮಾರಿ ಹಾಕಿ ಕಣ್ಣೀರಿಟ್ಟು ಹೋದರು.
13 ವರ್ಷಗಳ ನಂತರವೂ ಇಂದಿನ ಪೀಳಿಗೆಯ ಅಭಿಮಾನಿಗಳೂ ಕೂಡ ಸ್ಮಾರಕ ಸ್ಥಳಕ್ಕೆ ಬಂದ ಅಭಿಮಾನಿಗಳು ಈ ಸ್ಥಳ ಕಾರ್ಗತ್ತಲಾಗಿರುವುದನ್ನು ನೋಡಿ, ನಮ್ಮ ಅಪ್ಪಾಜಿ ಆದರ್ಶಗಳು ನಮ್ಮ ಬದುಕಿಗೆ ಬೆಳಕಾಗಿದೆ. ಆದರೆ ಅವರದೇ ಸ್ಮಾರಕ ಸ್ಥಳ ಈ ರೀತಿ ಕಾರ್ಗತ್ತಲು ಕವಿದಿದ್ದು, ಸ್ಮಶಾನ ಇದ್ದಂತಿದೆ. ಇದರಿಂದ ನಮಗೆ ಬಹಳ ನೋವಾಗಿದೆ, ಎಂದು ಬೆಂಗಳೂರಿನಿಂದ ಬಂದಿದ್ದ ವಿಷ್ಣು ಅಭಿಮಾನಿ ಪ್ರದೀಪ್ ಬೇಸರ ವ್ಯಕ್ತಪಡಿಸಿದರು.
ಬೆಳಿಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಡಾ.ವಿಷ್ಣುವರ್ಧನ್ ಸ್ಮಾರಕವನ್ನು ಲೋಕಾರ್ಪಣೆ ಮಾಡಿ, ರಾತ್ರಿ ಕಾರ್ಗತ್ತಲಲ್ಲಿ ಮುಳುಗಿಸಿ ಅಪಮಾಡಿರುವುದು ಎಷ್ಟು ಸರಿ? ಈ ವಿಶಾಲವಾದ ಸ್ಥಳದಲ್ಲಿ ಒಂದು ಬೀದಿ ದೀಪವನ್ನಾದರೂ ಹಾಕ ಬಹುದಿತ್ತು.
ಇಡೀ ಸ್ಮಾರಕ ಸ್ಥಳದಲ್ಲಿ ಕಗ್ಗತ್ತಲು ಆವರಿಸಿ ಒಳಗೆ ಹೋಗಲು ಆಗದ ಪರಿಸ್ಥಿತಿ ಇತ್ತು. ರಾತ್ರಿ ಸ್ಮಾರಕ ನೋಡಲು ಬಂದ ಡಾ.ವಿಷ್ಣುವರ್ಧನ್ ಅಭಿಮಾನಿಗಳಿಗೆ ಶಾಕ್ ಮೇಲೆ ಶಾಕ್ ಎದುರಾಗಿತ್ತು.
ವ್ಯಾಪಾರ ಕೇಂದ್ರ ಮಾಡುವ ಉದ್ದೇಶವೇ?
ಅಭಿಮಾನಗಳು ಎಷ್ಟು ಆಕ್ರೋಶಗೊಂಡಿದ್ದರು ಎಂದರೆ. ಮಾಧ್ಯಮದವರ ಎದುಕು ತಮ್ಮ ದುಖಃ ತೋಡಿಕೊಳ್ಳುತ್ತಾ. ಈ ಪವಿತ್ರ ಸ್ಥಳವನ್ನು ವ್ಯಾಪಾರಿಕರಣ ಮಾಡಲು ಹೊರಟಿರುವ ಹಾಗೆ ಕಾಣುತ್ತದೆ.
ಇದು ಅಭಿಮಾನಿ ದೇವರುಗಳು ವಿಷ್ಣುವರ್ಧನ್ ಅವರನ್ನು ಆರಾಧಿಸುವ, ಪೂಜಿಸುವ ಪವಿತ್ರ ಸ್ಥಳವಾಗಬೇಕಿತ್ತು. ಅಂಥ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಇದು ಯಾತ್ರಾ ಸ್ಥಳವಾಗಲಿ ಆದರೆ ಪ್ರವಾಸಿ ತಾಣ ಆಗಬಾರದು ಎನ್ನುವುದು ಅಭಿಮಾನಿಗಳ ಒತ್ತಾಸೆಯಾಗಿದೆ.
ಭಾರತಿ ಮೇಡಂ ಮತಯಾಚಿಸಿದ್ದು ಯಾಕೆ?
ಕಾರ್ಯಕ್ರಮದಲ್ಲಿ ಭಾರತಿ ವಿಷ್ಣುವರ್ಧನ್ ಅವರು ಬೊಮ್ಮಾಯಿಗೆ ಮತ ನೀಡಿ ಗೆಲ್ಲಿಸಿ ಎಂದಿದ್ದು ಯಾಕೆ? ಅಭಿಮಾನಿಗಳ ಈ ಪ್ರಶ್ನೆಗೆ ಉತ್ತರ ಕೊಡಲಿ. ರಾಜಕಾರಣಿಗಳ ಪರ ಮಾತನಾಡಿದ್ದು, ವಿಷ್ಣುವರ್ಧನ್‌ರಿಗೆ ಅಪಮಾನಿಸಿದಂತೆ. ಎಲ್ಲೇ ಮಾತನಾಡಿದರು ರಾಜಕಾರಣಿಗಳ ಪರ ಮಾರನಾಡು ಔಚಿತ್ಯವಾದರೂ ಏನಿತ್ತು. ಇವರಿಗೆ ಎಂಎಲ್‌ಸಿ ಆಗುವ ಆಸೆಯೇ? ಎಂದು ಸ್ಮಾರಕ ಸ್ಥಳದ ಅವ್ಯವಸ್ಥೆ ನೀಡಿದ ಅಭಿಮಾನಿಗಳು ರೊಚ್ಚಿಗೆದ್ದು ಕೇಳುತ್ತಿದ್ದಾರೆ.
ತಪ್ಪಾಗಿದೆ ಕ್ಷಮಿಸಿ: ಅನಿರುದ್
ಈ ಸಂಬಂಧವಾಗಿ ʻಈಗೋ ಮೀಡಿಯಾʼ ದೊಂದಿಗೆ ಮಾತನಾಡಿದ ನಟ ಹಾಗೂ ಡಾ.ವಿಷ್ಣುವರ್ಧನ್‌ರ ಅಳಿಯ ಅನಿರುದ್, ರಾತ್ರಿ ಸ್ಮಾರಕ ಸ್ಥಳದಲ್ಲಿ ದೀಪ ಇಲ್ಲದಿರುವುದು ನನಗೆ ಬೆಳಿಗ್ಗೆ ಗೊತ್ತಾಯಿತು. ರಾತ್ರಿ ಅಲ್ಲಿ ಯಾರಿಗೂ ಪ್ರವೇಶ ಇಲ್ಲ ಎನ್ನು ಕಾರಣಕ್ಕೆ ದೀಪ ಹಾಕಿಲ್ಲ ಎಂದುಕೊಳ್ಳುತ್ತೇನೆ. ಈ ಸ್ಥಳದಲ್ಲಿ ಅಂದವಾದ ಬೆಳಕಿನ ವಿನ್ಯಾಸ ಮಾಡಿದ್ದಾರೆ. ತುಂಬಾ ಚೆನ್ನಾಗಿದೆ. ಇಲ್ಲಿ ಇನ್ನೂ ಸಾಕಷ್ಟು ಕೆಲಸಗಳು ಆಗಬೇಕಿದೆ. ಬೆಳಕಿನ ವಿನ್ಯಾಸದ ಬಗ್ಗೆ ನಾನೇ ಫೋಟೋಗಳನ್ನು ಕಳುಹಿಸುತ್ತೇನೆ ನೋಡಿ ಎಂದರು.
* ಮುಂಬರುವ ಚುನಾವಣೆಯನ್ನು ದೃಷ್ಠಿಯಲ್ಲಿಟ್ಟುಕೊಂಡು ತರಾತುರಿಯಲ್ಲಿ ಸರ್ಕಾರ ಉದ್ಘಾಟನೆ ಮಾಡಿದೆ ಅನಿಸುತ್ತದೆ?ನಿಮ್ಮ ಅಭಿಪ್ರಾಯವೇನು?
ಈ ಬಗ್ಗೆ ನಾನು ಹೇಳಿಕೆ ನೀಡುವುದು ಸರಿಯಲ್ಲಿ. ಸರ್ಕಾರ ಎಲ್ಲವನ್ನೂ ಆಲೋಚಿಸಿ ಮಾಡಿದ್ದಾರೆ. ಹೀಗಾಗುತ್ತೆ ಎನ್ನುವುದು ನನಗೂ ಗೊತ್ತಿಲ್ಲ. ಅಭಿಮಾನಿಗಳಿಗೆ ಸರ್ಕಾರದ ಪರವಾಗಿ ನಾನು ಕ್ಷಮೆ ಕೋರುತ್ತೇನೆ. ಅಭಿಮಾಇಗಳ ಮನಸ್ಸು ನೋಯಿಸುವುದಿಲ್ಲ. ಮುಂದಿನ ದಿನಗಳಲ್ಲಿ ಇದೊಂದು ಉತ್ತಮವಾದ ಸ್ಮಾರಕ ಸ್ಥಳ ಆಗುತ್ತದೆ. ದಯಮಾಡಿ ಕ್ಷಮಿಸಿ ಎಂದು ಕೇಳಿಕೊಂರು.
‘ದುಡಿಯೋಣ ಬಾ’ ಪ್ರಚಾರ ರಥಕ್ಕೆ ಚಾಲನೆ ನೀಡಿz ಜಿ.ಪಂ. ಸಿಇಒ ಬಿ.ಆರ್.ಪೂರ್ಣಿಮಾ
ಮೈಸೂರು,ಏ.5 - ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಬೇಸಿಗೆ ಅವಧಿಯಲ್ಲಿ ಗ್ರಾಮೀಣ ಪ್ರದೇಶದ ಜನರಿಗೆ ನಿರಂತರವಾಗಿ ಕೆಲಸ...