ಅದಾನಿ ಸಮೂಹದ ವಿರುದ್ಧ ಹಿಂಡನ್ ಬರ್ಗ್ ವರದಿಯಲ್ಲಿ ಆರ್ಥಿಕ ಅಕ್ರಮಗಳು ಹಾಗೂ ಮಾರುಕಟ್ಟೆ ಮ್ಯಾನುಪ್ಲೇಷನ್ ಆರೋಪಗಳು ಕೇಳಿಬಂದಿದೆ.
ನವದೆಹಲಿ,ಜ. 27 – ಅದಾನಿ ವಿರುದ್ಧ ಹಿಂಡನ್ ಬರ್ಗ್ ವರದಿ ಆರೋಪದ ಬಗ್ಗೆ ಸೆಬಿ ಹಾಗೂ ಆರ್ ಬಿಐ ತನಿಖೆ ನಡೆಸಬೇಕೆಂದು ಆರ್ ಬಿಐ ಆಗ್ರಹಿಸಿದೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಹಿಂಡರ್ ಬರ್ಗ್ ಸಂಶೋಧನೆಯ ಫೋರೆನ್ಸಿಕ್ ವಿಶ್ಲೇಷಣೆಯನ್ನು ಎಸ್ ಇಬಿಐ ಹಾಗೂ ಆರ್ ಬಿಐ ನಿಂದ ತನಿಖೆಗೆ ಒಳಪಡಿಸಬೇಕಿದೆ, ಇದು ದೇಶದ ಆರ್ಥಿಕ ವ್ಯವಸ್ಥೆಯ ಸ್ಥಿರತೆಯ ದೃಷ್ಟಿಯಿಂದ ಅಗತ್ಯವಿದೆ ಎಂದು ಹೇಳಿದ್ದಾರೆ.
ಮೋದಿ ಸರ್ಕಾರ ಸೆನ್ಸಾರ್ಶಿಪ್ ನ್ನು ಹೇರಲು ಯತ್ನಿಸಬಹುದು ಆದರೆ ಭಾರತೀಯ ಉದ್ಯಮದ ಜಾಗತೀಕರಣದ ಯುಗದಲ್ಲಿ ಹಾಗೂ ಆರ್ಥಿಕ ಮಾರುಕಟ್ಟೆಗಳಲ್ಲಿ ಹಿಂಡರ್ ಬರ್ಗ್ ಮಾದರಿಯ ಕಾರ್ಪೊರೇಟ್ ದುರಾಡಳಿತವನ್ನು ಕೇವಲ ದುರುದ್ದೇಶಪೂರಿತ ಎಂದು ನಿರ್ಲಕ್ಷ್ಯಿಸಲು ಸಾಧ್ಯವೇ? ಎಂದು ಜೈರಾಮ್ ರಮೇಶ್ ಪ್ರಶ್ನಿಸಿದ್ದಾರೆ.
1991 ರಿಂದ ಭಾರತೀಯ ಆರ್ಥಿಕ ಮಾರುಕಟ್ಟೆಗಳ ಮೌಲ್ಯಮಾಪನ ಹಾಗೂ ಆಧುನೀಕರಣ ಪಾರದರ್ಶಕತೆಯನ್ನು ಸುಧಾರಿಸುವ ಉದ್ದೇಶ ಹೊಂದಿತ್ತು ಹಾಗೂ ದೇಶೀಯ ಹಾಗೂ ವಿದೇಶಿ ಹೂಡಿಕೆದಾರರಿಗೆ ಸಮಾನ ಅವಕಾಶಗಳನ್ನು ಕಲ್ಪಿಸಲು ಮುಂದಾಗಿತ್ತು. ಆದರೆ ಮೋದಿ ಸರ್ಕಾರ ತನಗೆ ಬೇಕಾದವರ ಉದ್ಯಮ ಸಮೂಹಗಳು ಅಕ್ರಮ ನಡೆಸುತ್ತಿದ್ದರೂ ಅದರೆಡೆಗೆ ಕಣ್ಮುಚ್ಚಿ ಕುಳಿತಿರುತ್ತದೆ. ಸೆಬಿ ಗಂಭೀರವಾದ ತನಿಖೆ ನಡೆಸುತ್ತದೆಯೇ? ಎಂದು ಪ್ರಶ್ನಿಸಿದ್ದಾರೆ.
ನಮಗೆ ಈಗಿನ ಸರ್ಕಾರ ಹಾಗೂ ಅದಾನಿ ಸಮೂಹದ ನಿಕಟ ಬಾಂಧವ್ಯದ ಬಗ್ಗೆ ಅರಿವಿದೆ. ಆದರೆ ಆರೋಪಗಳ ಬಗ್ಗೆ ಸೆಬಿ ಹಾಗೂ ಆರ್ ಬಿಐ ನಿಂದ ತನಿಖೆಗೆ ಆಗ್ರಹಿಸುವುದು ಜವಾಬ್ದಾರಿಯುತ ವಿಪಕ್ಷವಾಗಿರುವ ಕಾಂಗ್ರೆಸ್ ನ ಕರ್ತವ್ಯವಾಗಿದೆ, ಸಾರ್ವಜನಿಕ ಹಿತದೃಷ್ಟಿಯಿಂದ ತನಿಖೆ ನಡೆಯಬೇಕು ಎಂದು ರಮೇಶ್ ಹೇಳಿದ್ದಾರೆ.
ಬೆಂಗಳೂರು,ನ.28 - ಹಿರಿಯ ಕಲಾವಿದೆ ಲೀಲಾವತಿ ಅವರು ಬಹುದಿನಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದು ಈ ಹಿನ್ನೆಲೆಯಲ್ಲಿ ನಟ ಶಿವರಾಜ್ ಕುಮಾರ್ ಅವರು ಇಂದು ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.
ಹಿರಿಯ ನಟಿ ಲೀಲಾವತಿ ಅವರ...