ನವದೆಹಲಿ, ಜ. 6 – ಆದಿತ್ಯ ಯಾನ ಕೈಗೊಂಡಿದ್ದ ಇಸ್ರೋ ಮಿಷನ್ ಯಶಸ್ವಿಯಾಗಿದೆ. ಸೂರ್ಯನ ಅಧ್ಯಯನಕ್ಕಾಗಿ ಉಡಾವಣೆಯಾಗಿದ್ದ ಆದಿತ್ಯ ನೌಕೆ ನಿಗದಿತ ಎಲ್-1 ಪಾಯಿಂಟ್ ತಲುಪುವಲ್ಲಿ ಯಶಸ್ವಿಯಾಗಿದೆ.
ಚಂದ್ರಯಾನ-3 ರ ಬಳಿಕ ಇಸ್ರೋ ಮಹತ್ವದ ಸಾಧನೆ ಮಾಡಿದ್ದು, ಆದಿತ್ಯ ನೌಕೆ ಸೂರ್ಯನ ಅಧ್ಯಯನ ಆರಂಭಿಸಲಿರುವ ಮೊದಲ ನೌಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಚಂದ್ರಯಾನ-3 ಯಶಸ್ವಿಯಾದ 10 ದಿನಗಳಲ್ಲಿ ಆದಿತ್ಯ ಎಲ್-1 ನೌಕೆಯನ್ನು ಉಡಾವಣೆ ಮಾಡಲಾಗಿತ್ತು. ಸುದೀರ್ಘ 126 ದಿನಗಳ ಬಳಿಕ ಆದತ್ಯ ನೌಕೆ ತನ್ನ ಗಮ್ಯ ತಲುಪಿದೆ.
ಪ್ರಧಾನಿ ನರೇಂದ್ರ ಮೋದಿ ಇಸ್ರೋ ವಿಜ್ಞಾನಿಗಳ ಸಾಧನೆಗೆ ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.
ಭಾರತ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ. ಭಾರತದ ಮೊದಲ ಆದಿತ್ಯ ಅಧ್ಯಯನ ನೌಕೆ ಎಲ್-1 ಪಾಯಿಂಟ್ ತಲುಪಿದೆ. ಇದು ನಮ್ಮ ವಿಜ್ಞಾನಿಗಳ ನಿರಂತರ ಸಮರ್ಪಣಾ ಮನೋಭಾವಕ್ಕೆ ಸಾಕ್ಷಿಯಾಗಿದೆ.
ಇದು ಅತ್ಯಂತ ಸಂಕೀರ್ಣ ಮತ್ತು ಸಂಕೀರ್ಣವಾದ ಬಾಹ್ಯಾಕಾಶ ಕಾರ್ಯಾಚರಣೆಗಳನ್ನು ಸಾಧ್ಯವಾಗಿಸುವುದರಲ್ಲಿ ನಮ್ಮ ವಿಜ್ಞಾನಿಗಳ ನಿರಂತರ ಸಮರ್ಪಣೆಗೆ ಸಾಕ್ಷಿಯಾಗಿದೆ. ಮಾನವೀಯತೆಯ ಪ್ರಯೋಜನಕ್ಕಾಗಿ ನಾವು ವಿಜ್ಞಾನದ ಹೊಸ ಗಡಿಗಳನ್ನು ಬೆನ್ನಟ್ಟುವುದನ್ನು ಮುಂದುವರಿಸುತ್ತೇವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.