ಬೆಂಗಳೂರು,ಜ.6 – ಸಾರ್ವಜನಿಕ ವಲಯದ ಪ್ರಮುಖ ಬ್ಯಾಂಕ್‍ಗಳಲ್ಲಿ ಒಂದಾದ ಕೆನರಾ ಬ್ಯಾಂಕ್, ಗುರುವಾರದಿಂದ ಜಾರಿಗೆ ಬರುವಂತೆ ಎಲ್ಲಾ ಸಾಲಗಳು ಮತ್ತು ಮುಂಗಡಗಳ ಮೇಲಿನ ನಿಧಿಯ ಆಧಾರಿತ ಸಾಲ ದರ(ಎಂಸಿಎಲ್ಆರ್)ದಲ್ಲಿ ಯಥಾಸ್ಥಿತಿ ಕಾಪಾಡಿಕೊಂಡಿದೆ.
Advertisements
ಇದರಂತೆ, ಆರು ತಿಂಗಳ ವರೆಗೆ ಎಂಸಿಎಲ್ಆರ್ ಶೇ 6.80, ಒಂದು ತಿಂಗಳವರೆಗೆ ಶೇ 6.80, ಮೂರು ತಿಂಗಳ ಅವಧಿಗೆ ಶೇ 6.95, ಆರು ತಿಂಗಳಿಗೆ ಶೇ 7.30 ಮತ್ತು ಒಂದು ವರ್ಷಕ್ಕೆ ಶೇ 7.35 ರಷ್ಟು ಇರಲಿದೆ ಎಂದು ಪ್ರಕಟಣೆ ತಿಳಿಸಿದೆ.
ರೆಪೊ ಸಂಯೋಜಿತ ಬಡ್ಡಿದರ (ಆರ್‌ಎಲ್‌ಎಲ್ಆರ್) ಶೇ 6.90 ರಷ್ಟಿದೆ ಎಂದು ಕೆನರಾ ಬ್ಯಾಂಕ್ ತಿಳಿಸಿದೆ.
Advertisements